Advertisement

ಮೂಡಿಗೆರೆ: ಕಣ್ಣು ದೃಷ್ಟಿ ತೆಗೆಯುವ ಕೆಸವಳಲು ಕೂಡಿಗೆ

01:08 PM Oct 10, 2022 | Team Udayavani |

ಮೂಡಿಗೆರೆ: ತಾಲೂಕಿನ ಜೊಗಣಕೆರೆ ಗ್ರಾಮದ ಕೆಸವಳಲು ಕೂಡಿಗೆ ಎಂಬ ಪ್ರದೇಶಕ್ಕೆ ದಕ್ಷಿಣ ಕರ್ನಾಟಕದ ಹೆಚ್ಚಿನ ಜನರು ಬರುತ್ತಾರೆ. ಇದು ಕೆಸವಳಲು ಮತ್ತು ಅಬಚೂರು- ಹಾಲೂರು ಮಧ್ಯ ಭಾಗದಲ್ಲಿ ಸೇರುವ ಹೇಮಾವತಿ ಮತ್ತು ಜಪವಾತಿ ನದಿ ಸೇರುವ ಸ್ಥಳಕ್ಕೆ ಕೂಡಿಗೆ ಎನ್ನುತ್ತಾರೆ.

Advertisement

ಇಲ್ಲಿ ರಾಮ ದೇವಸ್ಥಾನ ಇದೆ. ನದಿಗಳು ಸೇರುವ ಜಾಗದಲ್ಲಿ ಆಸ್ರಕೊಂಡ ಇದೆ. ಅದೇ ರೀತಿ ಇಲ್ಲಿ ಅನಾದಿ ಕಾಲದಿಂದಲೂ ಕಣ್ಣು ದೃಷ್ಟಿ ತೆಗೆಯುವ ವಿಧಿ ವಿಧಾನ ಚಾಲ್ತಿಯಲ್ಲಿದೆ. ದೃಷ್ಟಿ ದೋಷ ಆಗುವುದು ನಿಜವಾದರೆ ತೆಗೆಯುವುದು ಕೂಡಾ ನಿಜ.

ಪ್ರತಿ ವರ್ಷದಲ್ಲಿ ಒಂದೆರಡು ಬಾರಿ ದಂಪತಿಗಳು ವಿಶೇಷವಾಗಿ ನವ ವಿವಾಹಿತ ಜೋಡಿಗಳು, ಎಲ್ಲಾ ಧರ್ಮದ ವ್ಯಾಪಾರ ವಹಿವಾಟುದಾರರು ಸೇರಿದಂತೆ ದೃಷ್ಟಿ ತೆಗೆಸಿಕೊಳ್ಳಲು ಲಕ್ಷಾಂತರ ಜನ ಬಂದು ದೃಷ್ಠಿ ತೆಗೆಸಿಕೊಂಡು ಹೋಗುತ್ತಾರೆ.

ವಿಶೇಷವಾಗಿ ಹೊಸ ವಾಹನಗಳಿಗೆ ದೃಷ್ಟಿ ಪೂಜೆ, ನವ ಜೋಡಿಗಳಿಗೆ ಬಾಸಿಂಗ ಪೂಜೆ, ಮನೆಯ ಹಾಗೂ ತೋಟದ ಮಣ್ಣು ತಂದು ದೃಷ್ಟಿ ಪೂಜೆ ಮಾಡುತ್ತಾರೆ. ಗದ್ದೆ ಕೊಯ್ಯುವ ಪ್ರಾರಂಭದಲ್ಲಿ ಅಂದರೆ ಹಸಿರು ಫಲ ಕಟಾವು ಮಾಡುವ ಮೊದಲು ಇಲ್ಲಿ ಪೂಜೆ ಮಾಡಿಸಿದರೆ ಉತ್ತಮ ಎಂಬ ವಾಡಿಕೆ ಇದೆ. ಪೂಜೆಗೆ ಒಂದು ಬಾರಿಗೆ ಹತ್ತು ಕುಟುಂಬಗಳಿಗೆ ಅವಕಾಶ ಇರುತ್ತದೆ.

ಅಭಿವೃದ್ಧಿ ವಿಚಾರದಲ್ಲಿ ಈ ಊರು ತುಂಬಾ ಹಿಂದಿದೆ. ಸಾವಿರಾರು ಜನ ಬರುವ ಈ ಸ್ಥಳದಲ್ಲಿ ಶೌಚಾಲಯದ ವ್ಯವಸ್ಥೆ, ಕ್ಯಾಂಟಿನ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಪ್ರವಾಸಿಗಳಿಗೆ ತೊಂದರೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next