Advertisement

ಮೂಡುಬಿದಿರೆ ಪುರಸಭೆ: 23 ವಾರ್ಡ್‌ಗಳಿಗೆ 77 ಸ್ಪರ್ಧಿಗಳು

11:05 PM May 21, 2019 | mahesh |

ಮೂಡುಬಿದಿರೆ: ಪುರಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದೆ. ಮೇ 29ರಂದು ನಡೆಯಲಿರುವ
ಚುನಾವಣೆಯಲ್ಲಿ ಮೂಡು ಬಿ ದಿರೆ ಪುರ ಸ ಭೆಯ ಎಲ್ಲ 23 ವಾರ್ಡ್‌ ಗಳಲ್ಲಿ ಬಿಜೆಪಿ, 22ರಲ್ಲಿ ಕಾಂಗ್ರೆಸ್‌, 8ರಲ್ಲಿ ಜೆಡಿಎಸ್‌, 14ರಲ್ಲಿ ಬಿಎಸ್‌ಪಿ, 3ರಲ್ಲಿ ಸಿಪಿಎಂ, 3ರಲ್ಲಿ ಎಸ್‌ಡಿಪಿಐ ಹೀಗೆ 6 ಪಕ್ಷಗಳ ಮೂಲಕ 73 ಹಾಗೂ 4 ವಾರ್ಡ್‌ಗಳಲ್ಲಿ ಒಟ್ಟು 4 ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

Advertisement

ಹಲವೆಡೆ ನೇರ, ತ್ರಿಕೋನ, ನಿಕಟ
ಸಂಬಂಧಿಗಳ ಸ್ಪರ್ಧೆ, ಮೀಸಲಾತಿ ಪರಿಣಾಮದಿಂದ ಕ್ಷೇತ್ರ ಬದಲು/ ಅವಕಾಶ ರಾಹಿತ್ಯ, ಒಂದೇ ಸಮುದಾಯದವರ ಕಣ, ಅಲ್ಪಸಂಖ್ಯಾಕರ ಬಹುಮುಖಿ ಹೋರಾಟ, ಪತಿ ಪತ್ನಿಯರ ಅದೃಷ್ಟ
ಪರೀಕ್ಷೆ, ಹಳೆ ಹುಲಿಗಳ ಹುರುಪು, ಮಾಜಿಗಳ ನೆನಪು….ಹೀಗೆಲ್ಲ ಈ ಬಾರಿಯ ಚುನಾವಣ ಕಣ ರಂಗು ರಂಗಾಗಿದೆ.

ನೇರ ಸ್ಪರ್ಧೆ
ವಾರ್ಡ್‌ 12ರಲ್ಲಿ ಜೆಡಿಎಸ್‌- ಬಿಜೆಪಿ, 19 ಮತ್ತು 22ರಲ್ಲಿ ಕಾಂಗ್ರೆಸ್‌- ಬಿಜೆಪಿ, ವಾರ್ಡ್‌ 12 (ಸಾಮಾನ್ಯ ಮಹಿಳೆ)ರಲ್ಲಿ ಜೆಡಿಎಸ್‌ನ ನೇರ, ನಿಷ್ಟುರವಾದಿ ಪುರಸಭಾ ಸದಸ್ಯೆ ಪ್ರೇಮಾ ಸಾಲ್ಯಾನ್‌ ಮತ್ತು ಬಿಜೆಪಿಯ ಹೊಚ್ಚ ಹೊಸ ಮುಖ ಸ್ವಾತಿ ಎಸ್‌. ಪ್ರಭು ನಡುವೆ ನೇರ ಸ್ಪರ್ಧೆ ಇದೆ. ಕಳೆದ ಬಾರಿ ಸಿಪಿಎಂನ ರಮಣಿ ಅವರಿಗೆ 10ನೇ ವಾರ್ಡ್‌ನ್ನು ಬಿಟ್ಟು ಕೊಟ್ಟಿದ್ದ ಕಾಂಗ್ರೆಸ್‌ ಈ ಬಾರಿ ವಾರ್ಡ್‌12ರಲ್ಲಿ ಸ್ಪರ್ಧಿಸುತ್ತಿಲ್ಲ. ವಾರ್ಡ್‌ 19 (ಹಿಂದುಳಿದ ವರ್ಗ “ಎ’ ಮಹಿಳೆ)ರಲ್ಲಿ ಕಾಂಗ್ರೆಸ್‌ನ ಹರಿಣಾಕ್ಷಿ ಮತ್ತು ಬಿಜೆಪಿಯ ಸುಜಾತಾ ನೇರ ಸ್ಪರ್ಧೆಯಲ್ಲಿದ್ದಾರೆ. ವಾರ್ಡ್‌ 22ರಲ್ಲಿ ಕಾಂಗ್ರೆಸ್‌ನ ಸರಸ್ವತಿ , ಬಿಜೆಪಿಯ ಕುಶಲ ನೇರ ಕದನ ಕುತೂಹಲದಲ್ಲಿದ್ದಾರೆ. ಈ ಮೂರೂ ವಾರ್ಡ್‌ಗಳಲ್ಲಿ ಇತರ ಪಕ್ಷದವರಾಗಲಿ, ಸ್ವತಂತ್ರ ಅಭ್ಯರ್ಥಿಗಳಾಗಲಿ ಸ್ಪರ್ಧಿಸುತ್ತಿಲ್ಲ. ಪ್ರೇಮಾ ಸಾಲ್ಯಾನ್‌ ಹೊರತುಪಡಿಸಿ ಮಿಕ್ಕೆಲ್ಲರೂ ಹೊಸಬರೇ.

ಸಂಬಂಧಿಗಳ ತ್ರಿಕೋನ ಸ್ಪರ್ಧೆ
ಸ್ವರಾಜ್ಯ ಮೈದಾನದ ಬಳಿಯ ವಾರ್ಡ್‌ 7ರಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ರಾಜೇಶ ನಾೖಕ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರಾದರೆ ಅವರ ಅತ್ತೆಯ ಮಗಳ ಮಗ ಕಾಂಗ್ರೆಸ್‌ನ ಅಭ್ಯರ್ಥಿ ಸಂದೀಪ್‌ ಕುಮಾರ್‌ ಕಾಂಗ್ರೆಸ್‌ನಿಂದಲೂ ಮತ್ತು ಅವರ ಸಹೋದರ ಸಮಾನ ಬಂಧು ದಯಾನಂದ ಅವರು ಜೆಡಿಎಸ್‌ನಿಂದಲೂ ಸ್ಪರ್ಧಿಸುತ್ತಿದ್ದಾರೆ. ಮೂವರೂ ನೆರೆಹೊರೆಯವರು. ಹೀಗಾಗಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಸಹಜ.

ಅತ್ತಿಗೆಯಂದಿರು ಒಂದೇ ಕಣದಲ್ಲಿ
ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮೀಸಲಾಗಿರುವ ಗಾಂಧಿನಗರ ವಾರ್ಡ್‌ 6ರಲ್ಲಿ ದಿವ್ಯಾ ಜಗದೀಶ ಎಂ.ಕೆ. ಅವರು ಬಿಜೆಪಿಯ ಅಭ್ಯರ್ಥಿಯಾದರೆ ಅವರ ಪತಿಯ ಚಿಕ್ಕಪ್ಪನ ಪುತ್ರಿ ದೀಕ್ಷಿತಾ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಹೀಗೆ ಸಂಬಂಧದಲ್ಲಿ ಅತ್ತಿಗೆಯಂದಿರು ಒಂದೇ ಕಣದಲ್ಲಿದ್ದಾರೆ. ಇಲ್ಲಿ ಬಿಎಸ್‌ಪಿಯ ಸುನೀತಾ ಕೂಡ ಇದ್ದಾರೆ. ಇನ್ನು ಕಣದಲ್ಲಿರುವ ಎಲ್ಲ ಪಕ್ಷಗಳ ಅಂದರೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಸಿಪಿಎಂ, ಬಿಎಸ್‌ಪಿ , ಎಸ್‌ಡಿಪಿಐ ಹೀಗೆ 6 ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ, ಸಾಮಾನ್ಯ ಮೀಸಲು ಸ್ಥಾನವಿರುವ ಬೆಟೆರಿ ಕೋಟೆಬಾಗಿಲು ವಾರ್ಡ್‌ ಆರು ಬಣ್ಣಗಳಿಂದ ತುಂಬಿದೆ.

Advertisement

ಅಲಂಗಾರ್‌ನಿಂದ ಬಂದಿರುವ ಬಿಜೆಪಿಯ ಹನೀಫ್‌ ಅವರು ತೀವ್ರ ಹೋರಾಟ ಎದುರಿಸಬೇಕಾಗಿದೆ. ಇಲ್ಲಿ ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು! ಕನ್ನಡ ಚಳುವಳಿಯ ಮೂಲಕ ಹೆಸರಾಗಿ ಹಲವು ಪಕ್ಷಗಳ ಬಳಿಕ ಬಹುಜನ ಸಮಾಜ ಪಕ್ಷದಲ್ಲಿರುವ ಎಸ್‌. ಸತೀಶ ಸಾಲ್ಯಾನ್‌ ಅವರು ತಮ್ಮ ಪತ್ನಿ ಬೇಬಿ ಸಹಿತ ಇತರರೊಂದಿಗೆ ಒಟ್ಟು 14 ವಾರ್ಡ್‌ಗಳಲ್ಲಿ ಬಿಎಸ್‌ಪಿಯ ಆನೆಯ ಹೆಜ್ಜೆ ಗುರುತುಗಳನ್ನು ಮೂಡಿಸಲು ಸನ್ನದ್ಧರಾಗಿದ್ದಂತಿದೆ.

ವಾರ್ಡ್‌, ಪಕ್ಷ ಬದಲು
ಹನೀಫ್‌ ಅಲಂಗಾರು ವಾರ್ಡ್‌ 4ರಲ್ಲಿ ಮೀಸಲಾತಿ ಕಾರಣದಿಂದಾಗಿ ಬೆಟೆRàರಿ- ಕೋಟೆಬಾಗಿಲು ವಾರ್ಡ್‌ 10ಕ್ಕೆ ಜಿಗಿದು ತಮ್ಮ ಅದೃಷ್ಟ ಪರೀಕ್ಷೆಗೆ ತೊಡಗಿದ್ದಾರೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದ ಇವರು ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಚುರುಕಾಗಿ ಓಡಾಡಿ ಕೊಂಡಿದ್ದು ಇನ್ನೇನು ಜೈನ್‌ಪೇಟೆ ವಾರ್ಡ್‌ 9ರಲ್ಲಿ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದೇ ಬಿಂಬಿಸಲ್ಪಟ್ಟಿದ್ದ ಗೀತಾ ಆಚಾರ್ಯ ಕೊನೆಯ ಗಳಿಗೆಯಲ್ಲಿ ತನಗೆ ದಕ್ಕದ ಪಕ್ಷದ ಸೀಟಿನ ಬಗ್ಗೆ ಚಿಂತಿತರಾಗಿದ್ದಂತೆ ಕಂಡರೂ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಇಲ್ಲಿ ಜೆಡಿಎಸ್‌ ಇಲ್ಲಿ ಸ್ಪರ್ಧಿಸುತ್ತಿಲ್ಲ.

ಕಳೆದ ಬಾರಿ ಕಾಂಗ್ರೆಸ್‌ನೆದುರು ಅಭ್ಯರ್ಥಿ ಇಲ್ಲದ ಕಾರಣ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿಯಾಗಿ ನಿಲ್ಲಬೇಕಾಗಿ ಬಂದ ಅಮರ್‌ ಕೋಟೆ ಅವರಿಗೆ ಅದೇ ಪಕ್ಷ ಈ ಬಾರಿ ಟಿಕೆಟ್‌ ಕೊಟ್ಟಿಲ್ಲ. ಹೀಗಾಗಿ ಅ ವರು ಈ ಬಾರಿ ಸ್ವತಂತ್ರ ಅಭ್ಯ ರ್ಥಿ ಯಾಗಿ ವಾರ್ಡ್‌ 14 ಮಾಸ್ತಿಕಟ್ಟೆ ಎಂಬ ಸ್ಪರ್ಧೆ ಗಿ ಳಿ ದಿ ದ್ದಾರೆ. ಇಲ್ಲಿ ಮಾಜಿ ಸದಸ್ಯ ಬಿಜೆಪಿಯ ಪ್ರಸಾದ್‌ ಕುಮಾರ್‌, ಜೆಡಿಎಸ್‌ನ ಹೊಸ ಮುಖ ಅಶೋಕ ಶೆಟ್ಟಿ, ಬಿಎಸ್‌ಪಿಯ ಸುಲೋಚನಾ ಎಂ. ಕಣದಲ್ಲಿದ್ದಾರೆ.

ಸಿಪಿ ಎಂನಿಂದ 10 ಬೆಟೆರಿ -ಕೋಟೆ ಬಾಗಿಲು, 16 ವಿಶಾಲ್‌ನಗರ ಮತ್ತು 17 ಲಾಡಿ ವಾರ್ಡ್‌ಗಳಲ್ಲಿ ಸ್ಪರ್ಧೆಗಾಗಿ ಅಭ್ಯರ್ಥಿ ಗಳು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ಎಸ್‌ಡಿಪಿಐ ಮೂರು ವಾರ್ಡ್‌ 10 ಬೆಟೆರಿ- ಕೋಟೆ ಬಾಗಿಲು, 11ಚಾಮುಂಡಿಬೆಟ್ಟ ಕೋಟೆ ಬಾಗಿಲು ಮತ್ತು 18 ಲಾಡಿಗಳಲ್ಲಿ ಸ್ಪರ್ಧೆಗಿಳಿದಿದೆ.

ಹಳಬರ ಹೊಸ ಹುರುಪು
ನಿಕಟಪೂರ್ವ ಸದಸ್ಯರಾಗಿದ್ದ ಪಿ.ಕೆ. ಥಾಮಸ್‌, ಕೊರಗಪ್ಪ , ಸುರೇಶ್‌ ಕೋಟ್ಯಾನ್‌, ರೂಪಾ ಶೆಟ್ಟಿ, ಶಕುಂತಳಾ, ಬಿಜೆಪಿಯ ಪ್ರಸಾದ್‌ ಕುಮಾರ್‌, ನಾಗರಾಜ್‌, ಜೆಡಿ ಎಸ್‌ನ ಪ್ರೇಮಾ ಸಾಲ್ಯಾನ್‌, ಜೆಡಿಎಸ್‌ನಿಂದ ಬಿಜೆಪಿಗೆ ಬಂದ ಹನೀಫ್‌ ಮತ್ತೂಮ್ಮೆ ಹುರುಪಿನಿಂದ ಸ್ಪರ್ಧೆಗಿಳಿದಿದ್ದಾರೆ.

ಮುಡಾ ಮಾಜಿ ಅಧ್ಯಕ್ಷರ ಅದೃಷ್ಟ ಪರೀಕ್ಷೆ
ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಎರಡನೇ ಅಧ್ಯಕ್ಷರಾಗಿದ್ದ , ಪುರಸಭಾ ಸದಸ್ಯ ಸುರೇಶ್‌ ಕೋಟ್ಯಾನ್‌ ಅವರು ವಾರ್ಡ್‌ 20- ಕರಿಂಜೆ ಉಪೆಲ್‌ ಪಾದೆಯಲ್ಲಿ, “ಮುಡಾ’ ಮೂರನೇ ಅಧ್ಯ ಕ್ಷರಾಗಿದ್ದ ಸುರೇಶ್‌ ಪ್ರಭು ಅವರು ವಾರ್ಡ್‌ 13ರಲ್ಲೂ ಕಾಂಗ್ರೆಸ್‌ ಹುರಿ ಯಾಳುಗಳಾಗಿದ್ದಾರೆ.
ಪತಿ ಪತ್ನಿ ಸ್ಪರ್ಧೆ ಕಾಂಗ್ರೆಸ್‌ನಲ್ಲಿದ್ದು ಈ ಹಿಂದೆ ಸದಸ್ಯರಾಗಿದ್ದ ಅನಿಲ್‌ ಲೋಬೋ ಈಗ ವಾರ್ಡ್‌ 20ರಲ್ಲಿ , ಅವರ ಪತ್ನಿ ಲೆಶ್ಮಾ ಜೋಯೆಟ್‌ ಹೊಸದಾಗಿ ವಾರ್ಡ್‌ 21ರಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

ಬಿಎಸ್‌ಪಿಯಿಂದ ಎಸ್‌. ಸತೀಶ ಸಾಲ್ಯಾನ್‌ ವಾರ್ಡ್‌ 2 ಮತ್ತು 17ರಲ್ಲೂ, ಅವರ ಪತ್ನಿ ಬೇಬಿ ಎಸ್‌. ಸಾಲ್ಯಾ ನ್‌ ವಾರ್ಡ್‌ 1 ಮತ್ತು 8ರಲ್ಲೂ ಸ್ಪರ್ಧಿಸುವ ಮೂಲಕ ಡಬಲ್‌ ಶೂಟ್‌ಗೆ ತಯಾರಿ ನಡೆಸಿದಂತಿದೆ.

ಮಾಜಿ ಅಧ್ಯಕ್ಷ ಕಾಂಗ್ರೆಸ್‌ನ ರತ್ನಾಕರ ದೇವಾಡಿಗರು ಕೆಲವು ತಿಂಗಳ ಹಿಂದಷ್ಟೇ ನಿಧನ ಹೊಂದಿದ್ದು ಅವರ ಸಹೋದರ ಪುರಂದರ ದೇವಾಡಿಗ ಅವರಿಗೆ ವಾರ್ಡ್‌ 2ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಾಜಿ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಅವರ ಪತಿ, ದಿಲೀಪ್‌ ಕುಮಾರ್‌ ಶೆಟ್ಟಿ ಅವರಿಗೆ ವಾರ್ಡ್‌ 11 (ಹಿಂದುಳಿದ ವರ್ಗ ಬಿ)ರಲ್ಲಿ ಅವಕಾಶ ನೀಡಲಾಗಿದೆ.

ವಾರ್ಡ್‌ ಬದಲು
ಮೀಸಲಾತಿಯಿಂದಾಗಿ ಕೊರಗಪ್ಪ ವಿಶಾಲ್‌ನಗರ (ವಾರ್ಡ್‌16- ಪರಿಶಿಷ್ಟ ಜಾತಿ)ಕ್ಕೆ ಜಿಗಿದಿದ್ದಾರೆ. ಬಿಜೆಪಿಯ ಪ್ರಸಾದ್‌ಕುಮಾರ್‌ 13ನೇ ವಾರ್ಡ್‌ನಿಂದ ಪಕ್ಕದ 14ನೇ ವಾರ್ಡ್‌ಗೆ, ಹನೀಫ್‌ ಅಲಂಗಾರ್‌ (4)ನಿಂದ ಕೋಟೆಬಾಗಿಲು (10 )ಗೆ, ಈ ಹಿಂದೆ ಜೆಡಿಎಸ್‌ನಿಂದ ಕರಿಂಜೆಯಲ್ಲಿ ಗೆದ್ದಿದ್ದ ಕೃಷ್ಣರಾಜ ಹೆಗ್ಡೆ ಈ ಬಾರಿ ಬಿಜೆಪಿಯಿಂದ ನೀರಳ್ಕೆ (18-ಸಾಮಾನ್ಯ)ಗೆ ಬಂದಿದ್ದಾರೆ.

ಇಲ್ಲದವರ ನೆನಪು
ಕೆಳೆದ ಅವಧಿಯಲ್ಲಿ, ಖಡಕ್‌ ಮಾತಿನ ಜೆಡಿಎಸ್‌ನ ಶಿವರಾಜ ರೈ, ಸ್ವತ್ಛತಾ ಅಂದೋಲನಕ್ಕಾಗಿ ವಿಶೇಷವಾಗಿ ಹೆಸರಾಗಿದ್ದ ಮಾಜಿ ಅಧ್ಯಕ್ಷ , ಕಾಂಗ್ರೆಸ್‌ನ ರತ್ನಾಕರ ದೇವಾಡಿಗ ತಮ್ಮ ಸಂಸದೀಯ ನಡವಳಿಕೆ ಹಾಗೂ ಕ್ರಿಯಾಶೀಲತೆಯಿಂದ ಗಮನ ಸೆಳೆದಿದ್ದರು. ಈಗ ಅವರು ನೆನಪಾಗಿ ಉಳಿದಿದ್ದಾರೆ.

ಕಣದಿಂದ ಹೊರಗುಳಿದವರು
ಮೀಸಲಾತಿ ಪರಿಣಾಮವಾಗಿ ಬಿಜೆಪಿ ನಾಯಕ, ಹಿರಿಯ ವಕೀಲ ಬಾಹುಬಲಿ ಪ್ರಸಾದ್‌, ಗಂಭೀರ ಚರ್ಚೆಗಳಿಗೆ ಸಿದ್ಧರಾಗಿ ಬರುತ್ತಿದ್ದ ಬಿಜೆಪಿಯ ಲಕ್ಷ್ಮಣ ಪೂಜಾರಿ, ಜೆಡಿಎಸ್‌ನ ಮನೋಜ್‌ ಶೆಟ್ಟಿ , ಕಾಂಗ್ರೆಸ್‌ನ ಸುಪ್ರಿಯಾ ಡಿ. ಶೆಟ್ಟಿ , ರಾಜೇಶ್‌ ಕೋಟೆಗಾರ್‌, ನಿಕಟಪೂರ್ವ ಉಪಾಧ್ಯಕ್ಷ ವಿನೋದ್‌ ಸೆರಾವೋ ಇವರು ಕಣದಲ್ಲಿಲ್ಲ; ಅನ್ಯ ವಾರ್ಡ್‌ಗಳಿಗೆ ವಲಸೆ ಹೋಗಿಲ್ಲ. ಅವಘಡದ ಕಾರಣ ಪೂರ್ವ ಸದಸ್ಯ ಅಬ್ದುಲ್‌ ಬಶೀರ್‌

ಸ್ಪರ್ಧಿಸಲಾಗುತ್ತಿಲ್ಲ.
ಬೇರೆ ಬೇರೆ ಕಾರಣಗಳಿಂದಾಗಿ ಮಾಜಿ ಅಧ್ಯಕ್ಷರಾದ, ಕಾಂಗ್ರೆಸ್‌ನ ಹರಿಣಾಕ್ಷಿ ಎಸ್‌. ಸುವರ್ಣ, ಎಲಿಝಾ ಮಿನೇಜಸ್‌, ನಿಕಟಪೂರ್ವ ಸದಸ್ಯರಾದ ವನಿತಾ, ಆಶಾ, ಸಿಪಿಎಂನ ರಮಣಿ ಕೂಡ ಸ್ಪರ್ಧಿಸುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next