Advertisement
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ. 10ರ ಸಂಜೆ 5.30ರಿಂದ 6.30ರ ವರೆಗೆ ಉದ್ಘಾಟನ ಕಾರ್ಯಕ್ರಮ ನಡೆಯಲಿದ್ದು, ಗಣ್ಯರ ಉಪಸ್ಥಿತಿಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6.35ರಿಂದ ರಾತ್ರಿ 8.30ರ ವರೆಗೆ 100ಕ್ಕೂ ಅಧಿಕ ದೇಶಿಯ ಜಾನಪದ ಕಲಾ ತಂಡ ಗಳಿಂದ ಕೂಡಿದ 3 ಸಾವಿರಕ್ಕೂ ಅಧಿಕ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ರಾತ್ರಿ 8.30ರಿಂದ 9.30ರ ವರೆಗೆ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಹಾಗೂ ರಥಾರತಿ ನಡೆಯಲಿದೆ ಎಂದರು.
ಡಿ. 11ರಂದು ಸಂಜೆ 5.45ರಿಂದ 6.30ರ ವರೆಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನಿಸಲಾಗುವುದು. ಬಳಿಕ ಹಿಂದೂಸ್ಥಾನಿ ಗಾಯನ, ಗುಜರಾತ್ನ “ರಂಗ್ ಮಲಹರ್ ದಿ ಫೋಕ್ ಆರ್ಟ್ಸ್’ ತಂಡದಿಂದ ಗುಜರಾತಿ ಜಾನಪದ ನೃತ್ಯ ಪ್ರದರ್ಶನ, 9 ಗಂಟೆಯಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ನಡೆಯಲಿದೆ. ಡಿ. 12ರಂದು ಸಂಜೆ 6ರಿಂದ 8ರ ವರೆಗೆ ಗುಜರಾತ್ನ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ, 9.15ರಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಪ್ರಸ್ತುತಗೊಳ್ಳಲಿದೆ.
Related Articles
Advertisement
ರಾತ್ರಿ 9ರಿಂದ ಬೆಂಗಳೂರು ಕಾರ್ತೀಸ್ ಫರ್ಫಾರ್ಮಿಂಗ್ ಆರ್ಟ್ಸ್ ನೃತ್ಯೋಲ್ಲಾಸ ಹಾಗೂ ಬೆಂಗಳೂರು ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಡಿ. 14ರಂದು ಸಂಜೆ 6ರಿಂದ 9ರ ವರೆಗೆ ಚೆನ್ನೈಯ ಸ್ಟೆಕೇಟೋದ 25 ಕಲಾವಿದರಿಂದ ಸಂಗೀತ ರಸದೌತಣ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ ಎಂದರು.
ಡಿ. 15ರಂದು ದಿನಪೂರ್ತಿ ವಿವಿಧ ಮೇಳಗಳು ನಡೆಯಲಿವೆ. ಪ್ರತಿನಿತ್ಯ ಅಂದಾಜು ತಲಾ 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದೇ ವೇಳೆ ರಾಜ್ಯಮಟ್ಟದ ಸ್ಕೌಟ್ಸ್-ಗೈಡ್ಸ್ ರೋವರ್ಸ್-ರೇಂಜರ್ಸ್ ಸಾಂಸ್ಕೃತಿಕ ಉತ್ಸವ, ತರಬೇತಿ ನಡೆಯಲಿದೆ ಎಂದವರು ಹೇಳಿದರು.ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿರಾಸತ್ನ ಮನಸೆಳೆಯಲಿರುವ ಮಹಾಮೇಳಗಳು ಕೈಮಗ್ಗ ಸೀರೆಗಳ ಉತ್ಸವ
ಭಾರತದ 30 ಪ್ರದೇಶವಾರು ಹಾಗೂ ಜಿಐ ಟ್ಯಾಗ್ ಹೊಂದಿದ ಕೈಮಗ್ಗ ಸೀರೆ, ಬಟ್ಟೆಗಳ ಉತ್ಸವ ವಿರಾಸತ್ನ ಈ ವರ್ಷದ ಪ್ರಮುಖ ಆಕರ್ಷಣೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನೇಕಾರರಿಂದ ಗ್ರಾಹಕರಿಗೆ ನೇರ ಮಾರಾಟ ನಡೆಯಲಿದೆ. ಇಂಡಿಯನ್ ಆರ್ಟಿಸಾನ್ ಬಝಾರ್
ಕಲೆ ಮತ್ತು ಕರಕುಶಲ ವಸ್ತುಗಳು, ಉಡುಪುಗಳು, ಆಭರಣಗಳು, ಗೃಹಾಲಂಕಾರಿಕ ವಸ್ತುಗಳು, ಅಪರೂಪದ ಹಾಗೂ ಸಮಕಾಲೀನ ವಸ್ತುಗಳ ಬಜಾರ್ ಈ ಬಾರಿಯ ವಿರಾಸತ್ನಲ್ಲಿರಲಿದೆ. ದಿಲ್ಲಿಯ ಮೀನಾ ಬಝಾರ್ ಮೇಳದಂತೆ ಈ ಮೇಳ ನಡೆಯಲಿದೆ. ಕೃಷಿ ಮೇಳ
ಕೃಷಿ ಕುರಿತು ಯುವಜನತೆಯಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕೃಷಿ ಮೇಳ ನಡೆಯಲಿದೆ. 600 ವಿವಿಧ ಮಳಿಗೆಗಳು ಇರಲಿದೆ. ತರಕಾರಿ, ಹಣ್ಣಹಂಪಲು, ಅಲಂಕಾರಿಕ ಗಿಡಗಳು, ಕೃಷಿ ಉಪಕರಣ ಇಲ್ಲಿನ ವಿಶೇಷತೆ. ಫಲಪುಷ್ಪ ಮೇಳ
ದೇಶ ವಿದೇಶಗಳಿಂದ ತಂದ ತಳಿಗಳು, ನಮ್ಮದೇ ಮಣ್ಣಿನ ದೇಸೀಯ ತಳಿಗಳು, ಕಸಿ ಮಾಡಿದ ವೈವಿಧ್ಯ ಫಲಗಳು ಇಲ್ಲಿರಲಿವೆ. ಹೂ ಹಣ್ಣುಗಳಿಂದ ಮಾಡಿದ ಕಲಾಕೃತಿಗಳು ಇರಲಿವೆ. ಆಹಾರ ಮೇಳ
ತುಳುನಾಡಿನ ಪರಂಪರೆಯಿಂದ ಆರಂಭಿಸಿ ಅಪ್ಪಟ ದೇಸೀಯ ತಿನಿಸುಗಳು ಆಹಾರ ಮೇಳದಲ್ಲಿರಲಿದೆ. ಆಹಾರೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಕರಕುಶಲ, ಪ್ರಾಚ್ಯವಸ್ತು ಪ್ರದರ್ಶನ ಮೇಳ ಈಶಾನ್ಯ, ಉತ್ತರ, ಪೂರ್ವ ಸಹಿತವಿವಿಧ ರಾಜ್ಯಗಳ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿ ಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ. ಲಲಿತ ಕಲಾ ಮೇಳ, ಚಿತ್ರ ಪ್ರದರ್ಶನ
ಬಣ್ಣ ಕುಂಚದ ಮೂಲಕ ರಂಗು ಮೂಡಿಸುವ ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ, ಮಾರಾಟ. 600ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ, ವಿವಿಧ ಕಲಾಕೃತಿಗಳ ಬೃಹತ್ ಪ್ರದರ್ಶನ.