Advertisement

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

11:57 PM Nov 29, 2024 | Team Udayavani |

ಮಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್‌ ವಿರಾಸತ್‌-2024ನ್ನು ಮತ್ತಷ್ಟು ಸಮಾಜಮುಖಿಯನ್ನಾಗಿಸಲು “ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವ ಸಂಪದ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

Advertisement

ಡಿ.10ರಿಂದ 15ರ ವರೆಗೆ ಆಳ್ವಾಸ್‌ ವಿರಾಸತ್‌ನ ಕೊನೆಯ ದಿನ ಹೊರತುಪಡಿಸಿ, ಉಳಿದ 5 ದಿನಗಳ ಕಾಲ ಬೆಳಗ್ಗೆ 7.30ರಿಂದ ಸಂಜೆ 5ರ ವರೆಗೆ ಶಿಬಿರ ನಡೆಯಲಿದೆ.

ಶಾಸ್ತ್ರೀಯ (ಹಿಂದೂಸ್ಥಾನಿ- ಕರ್ನಾಟಕ) ಸಂಗೀತ- ನೃತ್ಯ- ತಾಳವಾದ್ಯ ಮತ್ತು ಯಕ್ಷಗಾನ ಕಲೆಗಳನ್ನು ಅಭ್ಯಸಿಸುವ 6ರಿಂದ ಸ್ನಾತಕೋತ್ತರ ತರಗತಿವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಭಾಗವಹಿ ಸುವವರು ಅಭ್ಯಸಿಸುವ ಕಲಾಪ್ರಕಾರಗಳಲ್ಲಿ ಕನಿಷ್ಠ 2 ವರ್ಷಗಳ ಪರಿಶ್ರಮ ಹೊಂದಿರಬೇಕು. ತರಬೇತಿ ಶುಲ್ಕ ಇಲ್ಲ. ಊಟ, ಉಪಾಹಾರ ಮತ್ತು ವಸತಿ ಉಚಿತ. ಪ್ರತಿದಿನ ವಿದ್ವಾಂಸರಿಂದ ಉಪನ್ಯಾಸ, ಶಾಸ್ತ್ರೀಯ ಸಂಗೀತ-ನೃತ್ಯಾದಿ ಕಲೆಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಾತ್ಯಕ್ಷಿಕೆಗಳಿವೆ. “ಆಳ್ವಾಸ್‌ ವಿರಾಸತ್‌-2024’ರ ಮಹಾವೈಭವದಲ್ಲಿ ಭಾಗಿಯಾಗುವ ಅವಕಾಶ ಇರಲಿದೆ. ಆಸಕ್ತರು ಡಿ.9ರ ಮೊದಲು ಹೆಸರು ನೋಂದಾ ಯಿಸಬೇಕು. ಅವಕಾಶ ಸೀಮಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next