Advertisement

ದೇಶೀಯ ಕ್ರೀಡೆಗೆ ವಿದೇಶದಲ್ಲೂ ಹೈಟೆಕ್ ಸ್ಪರ್ಶ : ಎಂ.ಎಸ್.ತ್ಯಾಗಿ ಅಭಿಮತ

09:20 PM May 09, 2022 | Team Udayavani |

ಮೂಡಲಗಿ : ಖೋ ಖೋ ಕ್ರೀಡೆಯು ದೇಶಿಯ ಕ್ರೀಡೆಯಾಗಿದ್ದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖೋ ಖೋ  ಕ್ರೀಡೆಯು ಜನಪ್ರಿಯತೆ ಗಳಿಸಿದೆ ಎಂದು ಭಾರತೀಯ  ಖೋ-ಪಖೋ  ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ತ್ಯಾಗಿ  ಹೇಳಿದರು.

Advertisement

ಅವರು ಮೂಡಲಗಿ ತಾಲೂಕಿನ ನಾಗನೂರ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಶಾಲಾ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್ ಹಾಗೂ ಬೆಳಗಾವಿ ಜಿಲ್ಲಾ ಖೋ-ಖೋ  ಅಸೋಸಿಯೇಶನ್ ನಾಗನೂರ ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ ಕ್ಲಬ್ ಆಶ್ರಯದಲ್ಲಿ ರಾಜ್ಯಮಟ್ಟದ 18 ವರ್ಷದೊಳಗಿನ ಬಾಲಕ/ಬಾಲಕಿಯರ ಹೊನಲು ಬೆಳಕಿನ ರಾಜ್ಯಮಟ್ಟದ  ಖೋ-ಖೋ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭಾರತದ ಪ್ರಧಾನಿ  ನರೇಂದ್ರ ಮೋದಿಯವರು ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಸಾವಿರಾರು ಕೋಟಿ ರೂಗಳನ್ನು ಮೀಸಲಿಟ್ಟಿದ್ದು ಮುಂಬರುವ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಏಷಿಯನ್ ಖೋ-ಖೋ  ಚಾಂಪಿಯನ್ ಷಿಪ್ ನವದೆಹಲಿಯಲ್ಲಿ ಆಯೋಜಿಸುವುದg ಜೋತೆಗೆ ಕ್ರಿಯೇಟಿವ್ ಖೋ-ಖೋ  ಕ್ರೀಡಾಕೂಟವನ್ನು ಭಾರತದಲ್ಲಿ ನಡೆಸಲಾಗುವುದು ಎಂದರು.

ಸಾನಿಧ್ಯ ವಹಿಸಿದ  ಹುಕ್ಕೇರಿ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ ಕ್ರೀಡಾಕೂಟಗಳು  ದೇಹ ಮತ್ತು ಮನಸ್ಸುಗಳನ್ನು  ಒಂದುಗೂಡಿಸುವ ಕೆಲಸ ಮಾಡುತ್ತವೆ. ಕ್ರೀಡಾಪಟುಗಳು ವ್ಯಸನಿಗಳಾಗದೆ ಪ್ರತಿಯೊಬ್ಬರು ಚಾರಿತ್ರ‍್ಯ ವಂತರಾಗಿ  ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿಯಲ್ಲಿ ವಲಸಿಗರಿಗೆ ತೊಂದರೆಯಿಲ್ಲ: ಕೃಷಿ ಸಚಿವ ಬಿ.ಸಿ. ಪಾಟೀಲ್‌

ಬೆಂಗಳೂರು ಖೋ ಖೋ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ಕೆ.ಕೆ.ಎಫ್.ಆಯ್ ಉಪಾಧ್ಯಕ್ಷ ಲೋಕೇಶ್ವರ, ಮಾತನಾಡಿ ಭಾರತೀಯ ಖೋ ಖೋ  ಸಂಸ್ಥೆಯಿಂದ ಹತ್ತು ಲಕ್ಷ ರೂ ಮೊತ್ತದ ಮ್ಯಾಟ್ ನೀಡಿದ್ದು ಕ್ರೀಡಾಪಟುಗಳು , ಕ್ರೀಡೆಗೆ ಹೈಟೆಕ್ ಸ್ಪರ್ಶ ನೀಡಿದತಂತಾಗಿದೆ ಎಂದರು.

Advertisement

ಬೆಂಗಳೂರು ಖೋ ಖೋ  ಅಸೋಸಿಯೇಶನ್ ಚೇರ್ಮನ್ನರು ಹಾಗೂ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಶನ್ ಉಪಾಧ್ಯಕ್ಷರು ಕೆ.ಪಿ.ಪುರುಷೋತ್ತಮ್ ಮಾತನಾಡಿ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಖೋ ಖೋ ಆಡುವ ಕ್ರೀಡಾಪಟುಗಳು ಎಲ್ಲ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದು, ಕೇಂದ್ರ ಸರ್ಕಾರದಿಂದ ಟೋಕಿಯೊ ಒಲಿಂಪಿಕ್ಸ್ ,ಪ್ಯಾರಾ ಒಲಿಂಪಿಕ್ಸ್, ಸೇರಿದಂತೆ  ಫ್ರಾನ್ಸ್ ಒಲಿಂಪಿಕ್ಸ್ ಗೆ 75 ಕ್ರೀಡಾ ಪಟುಗಳುಗೆ 5 ವರ್ಷದಲ್ಲಿ ಒಬ್ಬ ಕ್ರೀಡಾಪಟುವಿಗೆ  5 ಲಕ್ಷ ರೂ ವೆಚ್ಚವನ್ನು ಪ್ರತಿಯೊಬ್ಬರಿಗೆ ಖರ್ಚು ಮಾಡಲು ಅನುದಾನ ದೊರೆತಿದ್ದು ಕ್ರೀಡೆಗೆ ಸಿಕ್ಕ ಅವಕಾಶವಾಗಿದೆ ಎಂದರು.

.ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ  ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಕ ಅವರು ಕ್ರೀಡಾಕೂಟದ ಉತ್ತೇಜನಕ್ಕಾಗಿ ೨ ಲಕ್ಷ ರೂ ಗಳನ್ನು ನೀಡಿದರು .

ಸಮಾರಂಭದ ಅಧ್ಯಕ್ಷತೆ ವಹಿಸಿದ  ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸನಗೌಡ ರಾ ಪಾಟೀಲ, ಕರ್ನಾಟಕ ರಾಜ್ಯ ಖೋ ಖೋ  ಅಸೋಸಿಯೇಶನ್ ನ ಉಪಾಧ್ಯಕ್ಷ ಶಿವಯೋಗಿ ಎಲಿ, ಬೆಂಗಳೂರು ಖೋ ಖೋ  ಅಸೋಸಿಯೇಶನ್ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ. ಆರ್, ಬೆಳಗಾವಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಂದನಾ ಶಿಂಧೆ, ಪರಸಪ್ಪ ಬಬಲಿ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ಸಹಕಾರ್ಯದರ್ಶಿ  ಶ್ರೀನಿವಾಸ್‌ಗೌಡ ಪಾಟೀಲ, ಕೆಂಚಗೌಡ ಪಾಟೀಲ, ಬಲವಂತ ಕರಬನ್ನವರ ,ಬಸವರಾಜ ಕರಿಹೊಳಿ, ಬಸವರಾಜ ಹೊಸಮನಿ,  ಚಂದ್ರು ಬೆಳಗಲಿ, ಎಸ್.ಎಲ್ .ಹೊಸಮನಿ, ಸಿದ್ದಣ್ಣ ಯಾದಗೂಡ , ಬಿ ಜಿ.ತಡಸನ್ನವರ, ಕೆ.ಕೆ.ಸಕ್ರೆಪ್ಪಗೋಳ, ಭೀಮಗೌಡ ಹೊಸಮನಿ, ಶಿವಾನಂದ ಹಳಿಗೌಡರ, ಕೆ.ಎಸ್.ಮಾರಾಪೂರ, ಬಿ.ಎಸ್.ಮೇಟಿ,  ಬೆಳಗಾವಿ ಜಿಲ್ಲಾ ಖೋ ಖೋ  ಅಸೋಸಿಯೇಶನ್ ಅಧ್ಯಕ್ಷ ಗಜಾನನ ಯರಗಣವಿ, ಕಾರ್ಯದರ್ಶಿ ಈರಣ್ಣ ಬಿ ಹಳಿಗೌಡರ ಇತರರು ಇದ್ದರು.

ಉಪಾಧ್ಯಕ್ಷ ಸಿ.ಆರ್.ಪೂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಆರ್.ಎಂ.ಗುಡಿಸಿ ಹಾಗೂ ರವೀಂದ್ರ ಕಬ್ಬೂರ ನಿರೂಪಿಸಿದರು . ದೈಹಿಕ ಶಿಕ್ಷಕ ಸಿ.ಎಸ್.ಹಿರೇಮಠ ವಂದಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next