ಮೂಡುಬಿದಿರೆ: ಇಲ್ಲಿನ ಬಸ್‌ನಿಲ್ದಾಣದ ಪ್ರವೇಶ ಭಾಗದಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ ವಾಹನಗಳು ಬಸ್‌ನಿಲ್ದಾಣದಿಂದ ಕೆಳಗಿಳಿಯುತ್ತ ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗುತ್ತಿರುವುದಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ.
ಶನಿವಾರವಷ್ಟೇ ಈ ಬಗ್ಗೆ ಉದಯವಾಣಿ ಸುದಿನದಲ್ಲಿ ಸಚಿತ್ರ ವರದಿ ಪ್ರಕಟವಾಗಿತ್ತು. ಶನಿವಾರ ನೋಡಿದರೆ ಬಸ್ ನಿಲ್ದಾಣದ ನಡುವೆ ಪೊಲೀಸ್ ವಾಹನವೊಂದು ನಿಂತಿತ್ತಾದರೂ ಅದರ ಹಿಂಭಾಗದಲ್ಲಿ ವಾಹನಗಳು ಯಾವುದೇ ಆಡೆ ತಡೆ ಇಲ್ಲದೆ ನಿಲ್ದಾಣದ ಕೆಳಗಡೆ ಅತಿವೇಗದಿಂದ ಚಲಿಸುತ್ತಲೇ ಇದ್ದವು. 11 ಗಂಟೆಯಿಂದ 11.10ರ ಅವಧಿಯಲ್ಲಿ ಏನಿಲ್ಲವೆಂದರೂ 12 ವಾಹನಗಳು-ದ್ವಿಚಕ್ರ, ತ್ರಿಚಕ್ರ, ಚತುಶ್ಚಕ್ರ ವಾಹನಗಳು ಒಂದರ ಬೆನ್ನಿಗೆ ಮತ್ತೂಂದರಂತೆ ಸುಂಯ್ ಸುಂಯ್ ಸುಂಯ್ ಎಂದು ಅಧೋಮುಖವಾಗಿ ರಾಷ್ಟ್ರೀಯ ಹೆದ್ದಾರಿಯ ಕಡೆ ವೇಗವಾಗಿ ಸಾಗಿಬರುತ್ತಿದ್ದುದನ್ನು ಉದಯವಾಣಿ ವರದಿ ಗಾರರು ಪ್ರತ್ಯ ಕ್ಷದರ್ಶಿಯಾಗಿ ಗಮನಿಸಿದ್ದರು. ಇದಕ್ಕೆಲ್ಲ ಸಂಬಂಧಪಟ್ಟವರು ಸೂಕ್ತ ಕ್ರಮ ಜರಗಿಸಬೇಕಾಗಿದೆ.