Advertisement

ಮಹಿಳೆಯರ ಮಾಸಿಕ ಭತ್ಯೆ 1,500 ರೂ ನಿಂದ 2500 ಕ್ಕೆ : ಗೋವಾದಲ್ಲಿ ಕೇಜ್ರಿವಾಲ್

04:38 PM Dec 05, 2021 | Team Udayavani |

ಪಣಜಿ: ಗೋವಾದಲ್ಲಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಉಚಿತ ನೀರು, ಉಚಿತ ತೀರ್ಥಯಾತ್ರೆ ಭರವಸೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇನ್ನೊಂದು ಭರವಸೆ ನೀಡಿದ್ದು, ಗೋವಾದಲ್ಲಿ ಮಹಿಳೆಯರಿಗೆ ಗೃಹ ಆಧಾರ ಮಾಸಿಕ ಭತ್ಯೆಯನ್ನು 1,500 ರೂ ನಿಂದ 2500 ರೂ ಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

Advertisement

ಭಾನುವಾರ ಮಡಗಾಂವ್ ನಲ್ಲಿ ಕರೆದಿದ್ದ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ಆಧಾರ ಯೋಜನೆಯ ಅಡಿಯಲ್ಲಿ ಮಾಸಿಕ ಭತ್ಯೆ ಲಭಿಸದ ಗೃಹಿಣಿಯರ ಖಾತೆಗೆ ಪ್ರತಿ ತಿಂಗಳು ನೇರವಾಗಿ 1000 ರೂ ಹಣ ಜಮಾವಣೆ ಮಾಡಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಇದು ವಿಶ್ವದಲ್ಲೇ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆಯಾಗಲಿದ್ದು ಗೋವಾದ ಐದೂವರೆ ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

ಈ ಹಿಂದೆ ಕೇಜ್ರಿವಾಲ್ ಅವರು ಗೋವಾದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಖಾತ್ರಿ ಮತ್ತು ಟ್ಯಾಕ್ಸಿ ಡ್ರೈವರ್ ಗಳಿಗೆ ಡಿಜಿಟಲ್ ಮೀಟರ್ ನಿಂದ ವಿನಾಯತಿ ನೀಡುವ ಭರಸವೆ ನೀಡಿದ್ದರು.

ಈ ಯೋಜನೆಯನ್ನು ಜಾರಿಗೆ ತರಲು ಅಗತ್ಯವಿರುವ ಹಣವನ್ನು ನಾನು ಮಾಂತ್ರಿಕವಾಗಿ ಸೃಷ್ಠಿಸುವುದಿಲ್ಲ. ಗೋವಾದ ಒಟ್ಟೂ ಬಜೆಟ್ 22,000 ಕೋಟಿ ರೂ. ಈ ಹಣದಲ್ಲಿ ಕೆಲಸ ಮಾಡುವಾಗ ಸದ್ಯ ಶೇ 20 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಭಾವಿಸಿದರೆ ಈ ಮೊತ್ತ 4,000 ಕೋಟಿ ರೂಗಳಾಗಲಿದೆ. ನಾನು ಘೋಷಿಸಿದ ಯೋಜನೆಯ ಗರಿಷ್ಠ ವೆಚ್ಛ 1000 ಕೋಟಿ ರೂ. ಗೋವಾದಲ್ಲಿ ಭ್ರಷ್ಟಾಚಾರ ತಡೆದರೆ ಹೆಚ್ಚುವರಿಯಾಗಿ 3,000 ಕೋಟಿ ರೂ ಹಣ ಉಳಿತಾಯವಾಗಲಿದೆ ಎಂದು ಕೇಜ್ರಿವಾಲ್ ನುಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next