Advertisement

ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ಮೊಂತಿ ಫೆಸ್ಟ್‌

01:35 PM Sep 08, 2021 | Team Udayavani |

ಶಿರ್ವ : ಉಡುಪಿ ಕೆಥೋಲಿಕ್‌ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚುಗಳಲ್ಲೊಂದಾದ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಲಯದ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್‌ ಡೇಸಾ ನೇತೃತ್ವದಲ್ಲಿ ತೆನೆ ಹಬ್ಬದ (ಮೊಂತಿ ಫೆಸ್ಟ್‌) ಸಂಭ್ರಮಾಚರಣೆ ಇಂದು(ಸೆ.8 ಬುಧವಾರ) ರಂದು ಸಂಪನ್ನಗೊಂಡಿತು.

Advertisement

ಕೋವಿಡ್‌ ನಿಯಮ ಪಾಲಿಸಿಕೊಂಡು ಭಕ್ತಾಧಿಗಳ ಉಪಸ್ಥಿತಿಯಲ್ಲಿ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್‌ ಡೇಸಾ ಸಹಾಯಕ ಧರ್ಮಗುರುಗಳಾದ ರೆ| ಫಾ| ನೆಲ್ಸನ್‌ ಪೆರಿಸ್‌ ಮತ್ತು ರೆ| ಫಾ| ರೋಲ್ವಿನ್‌ ಅರಾನ್ಹಾ ಬಲಿ ಪೂಜೆ ನೆರವೇರಿಸಿ ಭಕ್ತಾಧಿಗಳಿಗೆ ತೆನೆ ವಿತರಿಸಿದರು. ಕೋವಿಡ್‌ ನಿಂದಾಗಿ ಸಂಪ್ರದಾಯದಂತೆ ಮಾತೆ ಕನ್ಯಾ ಮೇರಿಯ ವಿಗ್ರಹದ ಮೆರವಣಿಗೆ ನಡೆಯದೆ ಚರ್ಚ್‌ ನಲ್ಲಿಯೇ ಭಕ್ತಾಧಿಗಳು ಮೂರ್ತಿಗೆ ಪುಷ್ಪಾರ್ಚನೆ ನಡೆಸಿದರು.

ಇದನ್ನೂ ಓದಿ : ಗಾಂಜಾ ನಶೆಯಲ್ಲಿ ಮಚ್ಚು, ಲಾಂಗು ಝಳಪಿಸಿ ಪೊಲೀಸರ ಅತಿಥಿಗಳಾದ ಯುವಕರು

ಚರ್ಚ್‌ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೋ, ಸದಸ್ಯರಾದ ವಿಲ್ಸನ್‌ ರೊಡ್ರಿಗಸ್‌, ಮೆಲ್ವಿನ್‌ ಅರಾನ್ಹಾ,ಜೂಲಿಯಾನ್‌ ರೊಡ್ರಿಗಸ್‌,ನೋರ್ಬರ್ಟ್‌ ಇ. ಮಚಾದೋ, ಪುಷ್ಪಾ ಫೆರ್ನಾಂಡಿಸ್‌, ಪ್ರಮುಖರಾದ ಪೀಟರ್‌ ಕೋರ್ಡಾ, ಡೆನ್ನಿಸ್‌ ಮತಾಯಸ್‌, ಪ್ರೊ | ರೊನಾಲ್ಡ್‌ ಮೊರಾಸ್‌, ಚರ್ಚ್‌ನ ಆರ್ಥಿಕ ಸಮಿತಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್‌ ನ ಧರ್ಮ ಭಗಿನಿಯರು, ವಿವಿಧ ವಾರ್ಡ್‌ಗಳ ಗುರಿಕಾರರು, ಭಕ್ತಾಧಿಗಳು ಉಪಸ್ಥಿತರಿದ್ದರು.

ಶಿರ್ವ ವಲಯದ ಪಿಲಾರು, ಪೆರ್ನಾಲು, ಪಾಂಬೂರು, ಕಳತ್ತೂರು ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಕೂಡಾ ಸರಳವಾಗಿ ಬಲಿ ಪೂಜೆಯೊಂದಿಗೆ ತೆನೆ ಹಬ್ಬದ ಸಂಭ್ರಮ ಸಂಪನ್ನಗೊಂಡಿತು.

Advertisement

ಇದನ್ನೂ ಓದಿ : ವಿಧಾನ ಸಭೆಯಲ್ಲಿ ಗದ್ದಲಗಳ ತಡೆಗೆ ಅರ್ಧ ದಿನದ ಜಂಟಿ ಅಧಿವೇಶನ : ಕಾಗೇರಿ

Advertisement

Udayavani is now on Telegram. Click here to join our channel and stay updated with the latest news.

Next