Advertisement

Monsoon: ಜೂ.1ರಿಂದಲೇ ಮುಂಗಾರು ಶುರು?

11:56 PM May 19, 2023 | Team Udayavani |

ಹೊಸದಿಲ್ಲಿ/ತಿರುವನಂತಪುರ: ಪ್ರಸಕ್ತ ಸಾಲಿನ ಮುಂಗಾರು ಜೂ.4ರಿಂದ ಶುರುವಾಗಲಿದೆ ಎಂದು ಹೇಳಿದ್ದ ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಹೊಸ ಮುನ್ನೆಚ್ಚರಿಕೆ ನೀಡಿದೆ. ಅದರ ಪ್ರಕಾರ ಮುಂಗಾರು ಮಳೆಗೆ ಕಾರಣವಾಗುವ ನೈಋತ್ಯ ಮಾರುತಗಳು ಬಂಗಾಲ ಕೊಲ್ಲಿಯ ಆಗ್ನೇಯ ಭಾಗ, ದಕ್ಷಿಣ ಅಂಡಮಾನ್‌ ಸಮುದ್ರದ ಭಾಗದಲ್ಲಿ ಏಳಲು ಶುರುವಾಗಿವೆ. ಇದರಿಂದಾಗಿ ನಿರೀಕ್ಷೆಯಂತೆಯೇ ಜೂ.1ರಿಂದಲೇ ಮಳೆಗಾಲ ಶುರುವಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಮುಂದಿನ ಐದು ದಿನಗಳಲ್ಲಿ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಮೂರರಿಂದ ನಾಲ್ಕು ದಿನಗಳ ಒಳಗಾಗಿ ಹಾಲಿ ಉಂಟಾಗಿರುವ ಮುಂಗಾರು ಮಳೆಯ ಸೂಚನೆಗಳು ಮತ್ತಷ್ಟು ಪ್ರಬಲವಾಗುವ ಸಾಧ್ಯತೆಗಳು ಇವೆ ಎಂದು ಐಎಂಡಿ ಹೇಳಿದೆ. ಕಳೆದ ವರ್ಷ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿತ್ತು. 2021ರಲ್ಲಿ ಜೂ.3, 2020ರಲ್ಲಿ ಜೂ.1, 2019ರಲ್ಲಿ ಜೂ.8, 2018ರಲ್ಲಿ ಮೇ 29ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next