Advertisement

ಮುಂಗಾರು ಮಳೆ: ನಳ ನಳಿಸುತ್ತಿರುವ ರಾಗಿ ಬೆಳೆ

04:32 PM Sep 01, 2021 | Team Udayavani |

ಅರಸೀಕೆರೆ: ವಾಡಿಕೆ ಮಳೆಗಿಂತಲೂ ಹೆಚ್ಚು ಮುಂಗಾರು ಮಳೆ ಈ ವರ್ಷ ಅಬ್ಬರಿಸಿದ್ದು ಸಣ್ಣ ಪುಟ್ಟ ಹಳ್ಳ ಕೊಳ್ಳಗಳು ತುಂಬಿ ಹೋಗಿವೆ. ಹೊಲಗಳಲ್ಲಿ ಬೆಳೆಯೂ ನಳನಳಿಸುತ್ತಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.

Advertisement

ತಾಲೂಕು ಬಯಲುಸೀಮೆ ಪ್ರದೇಶವಾಗಿದ್ದು, ಸತತ ಮಳೆ ಕೊರತೆಯಿಂದ ಕಳೆದ 4-5 ವರ್ಷಗಳಿಂದ ಬರದ ಬವಣೆಯಲ್ಲಿ ಸಿಲುಕಿದ್ದರು. ತಾಲೂಕು ಬಯಲುಸೀಮೆ ಪ್ರದೇಶವಾಗಿದ್ದು,ಕಸಬಾ ಹೋಬಳಿ, ಕಣಕಟ್ಟೆ ಹೋಬಳಿ, ಗಂಡಸಿ ಹೋಬಳಿ, ಬಾಣಾವರ ಹಾಗೂ ಜಾವಗಲ್‌ ಹೋಬಳಿ ಒಳಗೊಂಡಿದೆ.

ಮಳೆ ನೀರಿನಿಂದ ತುಂಬಿದ ಕೆರೆ-ಕಟ್ಟೆಗಳು: ಕಳೆದ 4-5 ವರ್ಷಗಳಲ್ಲಿ ಉತ್ತಮ ಮಳೆ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದರು. ಪ್ರಸ್ತುತ ವರ್ಷದ ಮುಂಗಾರು ಮಳೆ ಜೂನ್‌ ತಿಂಗಳಲ್ಲಿ ಪ್ರತಿ ವರ್ಷದ ವಾಡಿಕೆ ಮಳೆಗಿಂತಲೂ ಶೇ.24 ಪ್ರಮಾಣದ ಹೆಚ್ಚಿನ ಮಳೆಯಾಗಿದೆ. ಆಗಸ್ಟ್‌ನಲ್ಲಿ 56 ಮಿ.ಮೀ, ವಾಡಿಕೆ ಮಳೆಗಿಂತಲೂ 61 ಮಿ.ಮೀ ಮಳೆ ಬಿದ್ದಿದ್ದು, ಸಣ್ಣ ಪುಟ್ಟ ಕೃಷಿ ಹೊಂಡ, ಹಳ್ಳ ಕೊಳ್ಳಗಳು ತುಂಬಿದ್ದು ತಾಲೂಕಿನ ರೈತರು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ:ಐ ಫೋನ್‌ಗಳಿಗೆ ಸ್ಯಾಟಲೈಟ್‌ ಫೀಚರ್‌?!

ಅಗತ್ಯ ಪ್ರೋತ್ಸಾಹ ಧನ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಅಶೋಕ್‌ ಪ್ರತಿಕ್ರಿಯಿಸಿ, ನರೇಗಾ ಯೊಜನೆಯಡಿ ರೈತರಿಗೆ ಕೃಷಿ ಹೊಂಡ ಬದು ನಿರ್ಮಾಣ ಹಾಗೂ ರೈತ ಬಂಧು ಕಾರ್ಯಕ್ರಮದಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಎರೆಹುಳು ಗೊಬ್ಬರ ಘಟಕಗಳ ಸ್ಥಾಪನೆಗೆ 27 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆಸಕ್ತ ರೈತರು ಇದರ ಸದುಪಯೋಗ ಪಡೆದು ಕೊಂಡು ಎರೆಹುಳು ಗೊಬ್ಬರ ಉತ್ಪಾದನೆಗೆ ಮುಂದಾಗಬೇಕು ಎಂದರು. ಒಟ್ಟಾರೆ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬೆಳೆಗಳು ಉತ್ತಮವಾಗಿರುವುದು ಆಶಾದಾಯಕವಾಗಿದೆ ಎಂದರು.

Advertisement

ನಿಗದಿತ ಗುರಿಗಿಂತಲೂ ಹೆಚ್ಚು ಹೆಕ್ಟೇರ್‌ನಲ್ಲಿ ಬೆಳೆ
ಅರಸೀಕೆರೆ ತಾಲೂಕಿನಲ್ಲಿ 82,900 ಹೆಕ್ಟೇರ್‌ ಸಾಗುವಳಿ ಕೃಷಿಭೂಮಿ ಪೈಕಿ 71 ಸಾವಿರ ಹೆಕ್ಟೇರ್‌ ಕೃಷಿ ಭೂಮಿಯೂ ಕೃಷಿ ಚಟುವಟಿಕೆಗೆ ಲಭ್ಯ ವಿದೆ. ಈಗಾಗಲೇ ರಾಗಿ 29.230 ಹೆಕ್ಟೇರ್‌ ಜೋಳ246 ಹೆಕ್ಟೇರ್‌, ಮುಸುಕಿನ ಜೋಳ11.935 ಹೆಕ್ಟೇರ್‌, ಹೆಸರು 6410 ಹೆಕ್ಟೇರ್‌, ಉದ್ದು 603 ಹೆಕ್ಟೇರ್‌, ತೊಗರಿ 158 ಹೆಕ್ಟೇರ್‌, ಹಲಸಂದೆ2104 ಹೆಕ್ಟೇರ್‌ ಪ್ರದೇಶದಲ್ಲಿ ಎಳ್ಳು1173 ಹೆಕ್ಟೇರ್‌, ಗುರೆಳ್ಳು103 ಹೆಕ್ಟೇರ್‌ನಲ್ಲಿ ಸೂರ್ಯ ಕಾಂತಿ 70 ಹೆಕ್ಟೇರ್‌, ಹರಳು127 ಹೆಕ್ಟೇರ್‌, ನೆಲೆಗಡಲೆ50 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಪ್ರಸ್ತುತ ವರ್ಷದಲ್ಲಿ ನಿರ್ದಿಷ್ಠ ಗುರಿ 51.875 ಹೆಕ್ಟೇರ್‌ ಗಿಂತಲೂ 52.697 ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಈ ಮೂಲಕ ಶೇ.101ರಷ್ಟು ಗುರಿ ಸಾಧಿಸಿದೆ.

ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ
ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದೆ. ರಾಗಿ, ಜೋಳ, ಮುಸುಕಿನ ಜೋಳ ಏಕದಳ ಧಾನ್ಯಗಳನ್ನು ರೈತರು ಸುಮಾರು 41.436 ಹೆಕ್ಟೇರ್‌ ನಲ್ಲಿ ಬೆಳೆದಿದ್ದಾರೆ. ರಸಗೊಬ್ಬರಕ್ಕೆ ಯವುದೇ ಕೊರತೆ ಉಂಟಾಗಿಲ್ಲ. ಯೂರಿಯಾಕ್ಕೆ ಬೇಡಿಕೆಯಿದ್ದು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಅಶೋಕ್‌ ತಿಳಿಸಿದರು.

ಮುಂಗಾರು ಉತ್ತಮವಾಗಿ ಬೀಳುತ್ತಿದ್ದು ರಾಗಿ ಬೆಳೆಗೆ ನವ ಚೈತನ್ಯ ನೀಡಿದಂತಾಗಿದೆ.ಯಾವುದೇ ಕೀಟ ಭಾದೆ ಇಲ್ಲ. ಈ ಬಾರಿ ರಾಗಿ, ಜೋಳ ಹಾಗೂ ದ್ವಿದಳ ಧಾನ್ಯ ಬೆಳೆಗಳು ರೈತರಕೈ ಸೇರುವ ನಿರೀಕ್ಷೆ ಇದೆ.
-ಅಗ್ಗುಂದ ಚಂದ್ರಯ್ಯ, ರೈತ

-ರಾಮಚಂದ್ರ, ಅರಸೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next