Advertisement
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮಳೆ ತುಸು ಬಿಡುವು ನೀಡುವ ನಿರೀಕ್ಷೆ ಇದೆ. ಜು.29ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಳಿಕ ಸದ್ಯಕ್ಕೆ ಯಾವುದೇ ಅಲರ್ಟ್ ಇಲ್ಲ. ಮಂಗಳೂರಿನಲ್ಲಿ 29.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ ಡಿ.ಸೆ. ಏರಿಕೆ ಮತ್ತು 26 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಏರಿಕೆ ಕಂಡಿತ್ತು.
ಉಡುಪಿ ಜಿಲ್ಲೆಯಲ್ಲಿ ರವಿವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಕುಂದಾಪುರ, ಉಡುಪಿ, ಕಾರ್ಕಳ, ಹೆಬ್ರಿ ಸುತ್ತಮುತ್ತ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಲಘು ಮಳೆಯಾಗಿದೆ. ಶನಿವಾರ ತಡರಾತ್ರಿ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ರವಿವಾರ ಮುಂಜಾನೆ ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಗಾಳಿಯಿಂದ ಕಾಪು, ಉಡುಪಿ, ಕುಂದಾಪುರ ಭಾಗದಲ್ಲಿ 22 ಮನೆಗಳಿಗೆ ಹಾನಿ ಸಂಭವಿಸಿದೆ. ಮಳೆ ಬಿಡುವು: ಮಲ್ಪೆ ಬೀಚ್, ಸೀವಾಕ್‌ನಲ್ಲಿ ಜನಸಂದಣಿ
Related Articles
Advertisement