Advertisement
ಜಿಲ್ಲೆಯಲ್ಲಿ ಎರಡು ದಿನಗಳಿಂದ ಸಾಮಾನ್ಯಕ್ಕಿಂತ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿತ್ತು. ಗಾಳಿಯಿಂದ ತಳಂಗರೆ, ಚೌಕಿ ಮೊದಲಾದೆಡೆ ಮರಗಳು ಮುರಿದು ಬಿದ್ದಿವೆ. ಸೋಮವಾರ ಬೆಳಗ್ಗಿ ನಿಂದಲೇ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿದೆ. ಕಳೆದ ವರ್ಷ ರಾಜ್ಯದಲ್ಲಿ ಅತೀ ಕಡಿಮೆ ಮಳೆಯಾದ ಜಿಲ್ಲೆಯಾಗಿತ್ತು. ರಾಜ್ಯದಲ್ಲಿ ಭಾರೀ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಬೇಕೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮತ್ಸÂ ಸಂಪತ್ತನ್ನು ಸಂರಕ್ಷಿಸುವ ಅಂಗವಾಗಿ ರಾಜ್ಯದಲ್ಲಿ ಟ್ರಾಲಿಂಗ್ ನಿಷೇಧ ಜೂ. 9ರಂದು ಮಧ್ಯರಾತ್ರಿಯಿಂದ ಜಾರಿಗೆ ಬಂದಿದ್ದು ಜುಲೈ 31ರ ವರೆಗೆ ಅಂದರೆ 52 ದಿನಗಳ ಕಾಲ ಟ್ರಾಲಿಂಗ್ ನಿಷೇಧ ಮುಂದುವರಿಯಲಿದೆ.