Advertisement

ಡಾಲಿ ಧನಂಜಯರ ‘ಮಾನ್ಸೂನ್‌ ರಾಗ’ ಆ.12ಕ್ಕೆ ತೆರೆಗೆ

02:58 PM May 07, 2022 | Team Udayavani |

ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಬಿಝಿ ನಾಯಕ ನಟರ ಪೈಕಿ ಡಾಲಿ ಧನಂಜಯ್‌ ಕೂಡ ಒಬ್ಬರು. ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ನಟ ಡಾಲಿ ಧನಂಜಯ್‌, ಇದೇ ಮುಂಗಾರು ವೇಳೆಗೆ ಪ್ರೇಕ್ಷಕರ ಮುಂದೆ “ಮಾನ್ಸೂನ್‌ ರಾಗ’ ಹಾಡಲು ರೆಡಿಯಾಗಿದ್ದಾರೆ.

Advertisement

ಹೌದು, ಧನಂಜಯ್‌ ಮತ್ತು ರಚಿತಾ ರಾಮ್‌ ಜೋಡಿಯಾಗಿ ಅಭಿನಯಿಸಿರುವ “ಮಾನ್ಸೂನ್‌ ರಾಗ’ ಸಿನಿಮಾದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದ್ದು, ಸಿನಿಮಾ ಇದೇ ಆಗಸ್ಟ್‌ 12ಕ್ಕೆ ತೆರೆಗೆ ಬರಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ “ಮಾನ್ಸೂನ್‌ ರಾಗ’ ಸಿನಿಮಾದ ಬಿಡುಗಡೆಯ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, ಆಗಸ್ಟ್‌ 12ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ಘೋಷಿಸಿಕೊಂಡಿದೆ.

“ವಿಖ್ಯಾತ್‌ ಚಿತ್ರಾ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ಎ. ಆರ್‌ ವಿಖ್ಯಾತ್‌ ನಿರ್ಮಿಸಿರುವ, ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಕಂ ಆ್ಯಕ್ಷನ್‌ ಕಥಾಹಂದರ ಹೊಂದಿರುವ “ಮಾನ್ಸೂನ್‌ ರಾಗ’ ಚಿತ್ರಕ್ಕೆ ಎಸ್‌. ರವೀಂದ್ರನಾಥ್‌ ನಿರ್ದೇಶನವಿದೆ. ಚಿತ್ರಕ್ಕೆ ಎಸ್‌. ಕೆ ರಾವ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ . ಚಿತ್ರದ ಹಾಡುಗಳಿಗೆ ಜೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು, ಗುರು ಕಶ್ಯಪ್‌ ಸಿನಿಮಾದ ದೃಶ್ಯಗಳಿಗೆ ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ:ಟಕ್ಕರ್ ಚಿತ್ರ ವಿಮರ್ಶೆ: ಸ್ಮಾರ್ಟ್‌ ಲೋಕದಲ್ಲೊಂದು ಕ್ರೈಂ-ಥ್ರಿಲ್ಲರ್‌ ಸ್ಟೋರಿ

ಈಗಾಗಲೇ ಬಿಡುಗಡೆಯಾಗಿರುವ “ಮಾನ್ಸೂನ್‌ ರಾಗ್‌’ ಟೀಸರ್‌ನಲ್ಲಿ ನಟ ಧನಂಜಯ್‌ ಎರಡು ಶೇಡ್‌ನ‌ಲ್ಲಿ ಕಾಣಿಸಿ ಕೊಂಡಿದ್ದಾರೆ. ಒಂದರಲ್ಲಿ ಪಕ್ಕಾ ಆ್ಯಕ್ಷನ್‌ ಗೆಟಪ್‌ನಲ್ಲಿ ರಗಡ್‌ ಆಗಿ ಕಾಣಿಸಿಕೊಂಡರೆ, ಇನ್ನೊಂದೆಡೆ ಸಖತ್‌ ಸಾಫ್ಟ್ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ರೆಟ್ರೋ ಲುಕ್‌ನಲ್ಲಿ ಮೂಡಿಬಂದಿರುವ “ಮಾನ್ಸೂನ್‌ ರಾಗ’ ಟೀಸರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಿನಿ ಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದೆ.

ಒಟ್ಟಾರೆ ತನ್ನ ಟೈಟಲ್‌, ಫ‌ಸ್ಟ್‌ಲುಕ್‌ ಪೋಸ್ಟರ್‌ ಮತ್ತು ಟೀಸರ್‌ಗಳ ಮೂಲಕ ಒಂದಷ್ಟು ನಿರೀಕ್ಷೆ ಮೂಡಿಸಿರುವ “ಮಾನ್ಸೂನ್‌ ರಾಗ’ ತೆರೆಮೇಲೆ ಹೇಗಿರಲಿದೆ ಅನ್ನೋದು, ಅಗಸ್ಟ್‌ 12ಕ್ಕೆ ಗೊತ್ತಾಗಲಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next