Advertisement

‘ಮಾನ್ಸೂನ್‌ ರಾಗ’ ಕಟೌಟ್‌ ಕ್ರೇಜ್‌: ಆ.19ರಂದು ಡಾಲಿ ಚಿತ್ರ ರಿಲೀಸ್

04:54 PM Jul 23, 2022 | Team Udayavani |

ಧನಂಜಯ್‌ ನಟನೆಯ “ಮಾನ್ಸೂನ್‌ ರಾಗ’ ಚಿತ್ರ ಆ.19ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಫೀಲ್ಡ್‌ಗೆ ಇಳಿದಿದ್ದಾರೆ. ಅದು ಕಟೌಟ್‌ ಮಾಡಿಸುವ ಮೂಲಕ.

Advertisement

ಹೌದು, ಧನಂಜಯ್‌ ಹಾಗೂ ರಚಿತಾ ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಸ್ಟಿಲ್‌ಗಳು ಸಿನಿಮಾದ ಕುತೂಹಲ ಹೆಚ್ಚಿಸುತ್ತಿವೆ. ಈಗ ಧನಂಜಯ್‌ ಹಾಗೂ ರಚಿತಾ ಅಭಿಮಾನಿಗಳು ಚಿತ್ರದ ಸ್ಟಿಲ್‌ ಇಟ್ಟುಕೊಂಡು ಕಟೌಟ್‌ ಮಾಡಿಸುತ್ತಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ಕಟೌಟ್‌ ಸಿದ್ಧವಾಗಿದ್ದು, ರಾಜ್ಯದ ಚಿತ್ರಮಂದಿರಗಳಿಗೆ ಈ ಕಟೌಟ್‌ ಅನ್ನು ಕಳುಹಿಸಲು ಮುಂದಾಗಿದ್ದಾರೆ. ಈ ಮೂಲಕ ಸಿನಿಮಾ ಮೇಲೆ ತಮ್ಮ ಪ್ರೀತಿ ತೋರಿಸುತ್ತಿದ್ದಾರೆ

ಇನ್ನು, ಚಿತ್ರತಂಡ ಈಗಾಗಲೇ “ರಾಗ ಸುಧಾ’ ಹಾಡನ್ನು ಹರಿಬಿಟ್ಟಿದೆ. ಧನಂಜಯ್‌ ರಗಡ್‌ ಲುಕ್‌ ಹಾಗೂ “ವಿಲನ್‌’ಗಳ ಖದರ್‌ ಡೈಲಾಗ್‌’ನಿಂದ ಶುರುವಾಗುವ ಹಾಡು, ಶುರುವಾದ ಬಳಿಕ ಕಣ್ಣಿಗೆ ತಂಪು, ಕಿವಿಗೆ ಇಂಪು ನೀಡುತ್ತದೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿ ಮೋಡಿ ಮಾಡುತ್ತಿದೆ.

ಯಶಾ ಶಿವಕುಮಾರ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದು, ದಕ್ಷಿಣ್‌ ಕುಮಾರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದು ಯಶಾ ಇಂಟ್ರೊಡಕ್ಷನ್‌ಗಾಗಿಯೇ ಮಾಡಿದ ಹಾಡು ಎಂಬುದು ವಿಶೇಷವಾದರೆ, ಇದನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಓದಿದ ಕುಮಟಾ ಬಳಿಯ ಶಾಲೆಯೊಂದರಲ್ಲಿ ಚಿತ್ರೀಕರಣ ನಡೆಸಿರುವುದು ಮತ್ತೂಂದು ವಿಶೇಷ. ಮಳೆಯ ಭೋರ್ಗರೆತದ ನಡುವೆ ಕುಣಿವ ಯಶಾ, ರೆಟ್ರೋ ಸ್ಟೈಲ್‌ನಲ್ಲಿ ಕಂಗೊಳಿಸಿದ್ದಾರೆ.

ಪುಷ್ಪಕ ವಿಮಾನ, ಇನ್ಸ್ ಪೆಕ್ಟರ್‌ ವಿಕ್ರಂ, ರಂಗನಾಯಕ ಸಿನಿಮಾಗಳನ್ನು ನಿರ್ಮಿಸಿರುವ ಎ.ಆರ್‌.ವಿಖ್ಯಾತ್‌ “ಮಾನ್ಸೂನ್‌ ರಾಗ’ಕ್ಕೆ ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಬಂಡವಾಳ ಹೂಡಿದ್ದಾರೆ. ವಿಖ್ಯಾತ್‌ ಸ್ಟುಡಿಯೋಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆಆಗಿ ಲಕ್ಷಾಂತರ ಹಿಟ್ಸ್‌ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next