Advertisement

ಮಳೆ ಡಾಲಿ ಮತ್ತು ಹೃದಯ ರಾಗ…: ‘ಮಾನ್ಸೂನ್‌ ರಾಗ’ ಟ್ರೇಲರ್‌ ರಿಲೀಸ್‌

01:27 PM Aug 07, 2022 | Team Udayavani |

ಡಾಲಿ ಧನಂಜಯ್‌ ನಟನೆಯ “ಮಾನ್ಸೂನ್‌ ರಾಗ’ ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿಕೊಂಡೇ ಬಂದಿದೆ. ಧನಂಜಯ್‌-ರಚಿತಾ ರಾಮ್‌ ಅವರ ಹೊಸ ಲುಕ್‌ ಒಂದು ಕಡೆಯಾದರೆ, ರೆಗ್ಯುಲರ್‌ ಶೈಲಿಯಿಂದ ಹೊರತಾದ ಕಥೆ ಮತ್ತೂಂದು ಕಡೆ. ಈಗ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಹೊಸ ಅಂಶಗಳೊಂದಿಗೆ ಗಮನ ಸೆಳೆಯುತ್ತಿದೆ.

Advertisement

ಚಿತ್ರದ ಟೈಟಲ್‌ಗೆ ತಕ್ಕಂತೆ ಸಿನಿಮಾ ಮಳೆ ಹಿನ್ನೆಲೆಯಲ್ಲೇ ಸಾಗಿದಂತಿದೆ. ಕೆಟ್ಟ ಜಗತ್ತಿನ ನಡುವೆ ಅರಳುವ ಪ್ರೀತಿ ಹಾಗೂ ಅದರ ಸುತ್ತ ನಡೆಯುವ ಘಟನೆಗಳ ಸುತ್ತ ಸಿನಿಮಾದ ಕಥೆ ಸಾಗುವ ಕುರುಹುವನ್ನು ಚಿತ್ರತಂಡ ಟ್ರೇಲರ್‌ನಲ್ಲಿ ಬಿಟ್ಟುಕೊಟ್ಟಿದೆ.

ಇಡೀ ಟ್ರೇಲರ್‌ನಲ್ಲಿರುವುದು ಕೇವಲ ಒಂದೇ ಒಂದು ಡೈಲಾಗ್‌- “ನಿನಗೆ ಒಳ್ಳೇ ಹುಡುಗೀರು ಎಷ್ಟೋ ಜನ ಸಿಕ್ತಿದ್ರು. ನಾನು ಈ ತರಹ ಅಂಥ ಗೊತ್ತಿದ್ರೂ ಯಾಕ್‌ ನನ್‌ ಲವ್‌ ಮಾಡ್ದೆ..’ ಈ ಡೈಲಾಗ್‌ ಜೊತೆಗೆ ಒಂದಷ್ಟು ದೃಶ್ಯಗಳು ಚಿತ್ರದೊಳಗೆ ಏನು ಹೇಳಲು ಹೊರಟಿದ್ದಾರೆ ಎಂಬ ಊಹೆ ಹಾಗೂ ಕುತೂಹಲಕ್ಕೆ ನಾಂದಿ ಹಾಡಿವೆ.

ಇದನ್ನೂ ಓದಿ:ಮುಂಬೈ-ಅಹಮದಾಬಾದ್ ನಡುವೆ ಸಂಚಾರ ಆರಂಭಿಸಿದ ಆಕಾಶ ಏರ್ ನ ಮೊದಲ ವಿಮಾನ

ಟ್ರೇಲರ್‌ನಲ್ಲಿ ರಚಿತಾ-ಧನಂಜಯ್‌ ಅವರದ್ದು ಒಂದು ಟ್ರ್ಯಾಕ್‌ ಆದರೆ, ಅಚ್ಯುತ್‌ ಕುಮಾರ್‌ ಹಾಗೂ ಸುಹಾಸಿನಿ ಅವರ ಪಾತ್ರ ಪ್ರಮುಖವಾಗಿದೆ ಎಂಬುದು ಟ್ರೇಲರ್‌ ನೋಡಿದಾಗ ಎದ್ದು ಕಾಣುತ್ತದೆ.

Advertisement

ಇಡೀ ಚಿತ್ರವನ್ನು ಕಟ್ಟಿಕೊಟ್ಟ ಪರಿಸರ ಕೂಡಾ ವಿಭಿನ್ನವಾಗಿದ್ದು, ಧನಂಜಯ್‌ ಇಲ್ಲಿ ಹೊಸ ಗೆಟಪ್‌ ಹಾಗೂ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ. ಚಿತ್ರದ ಹಿನ್ನೆಲೆ ಸಂಗೀತ ಕೂಡಾ ಕಥೆಯ ತೀವ್ರತೆಯನ್ನು ಹೆಚ್ಚಿಸಿರುವುದು ಟ್ರೇಲರ್‌ನಲ್ಲಿ ಕಾಣುತ್ತದೆ. ವಿಖ್ಯಾತ್‌ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್‌ ನಿರ್ದೇಶಿಸಿದ್ದಾರೆ. ಚಿತ್ರ ಆ.19ರಂದು ತೆರೆಕಾಣುತ್ತಿದೆ

ನಾನು ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಲೈಂಗಿಕ ಕಾರ್ಯಕರ್ತೆ ಪಾತ್ರವನ್ನು ತುಂಬ ನೀಟ್‌ ಆಗಿ ಚೆನ್ನಾಗಿ ತೋರಿಸಿದ್ದಾರೆ. ಮಾನ್ಸೂನ್‌ ಸಮಯದಲ್ಲಿ ನಮ್ಮ ಈ ಸಿನಿಮಾ ಶೂಟಿಂಗ್‌ ಮಾಡಿದ್ದೆವು, ಆದರೆ ಮಾನ್ಸೂನ್‌ ಸಮಯದಲ್ಲಿ ರಿಲೀಸ್‌ ಆಗುತ್ತೆ ಅಂತ ಗೊತ್ತಿರಲಿಲ್ಲ. ಸಿನಿಮಾ ಹಾಡುಗಳನ್ನು ಕೇಳಿದರೆ ಮೈ ರೋಮಾಂಚನವಾಗುವುದು. ಇಲ್ಲಿ ಪ್ರತಿ ಪಾತ್ರವನ್ನು ಕೂಡ ತುಂಬಾ ಅದ್ಭುತವಾಗಿ ತೋರಿಸಿದ್ದರೆ. :-ರಚಿತಾ ರಾಮ್‌, ನಾಯಕಿ

ಈ ಸಿನಿಮಾವನ್ನು ದಯವಿಟ್ಟು ನೋಡಿ. ಇಲ್ಲಿ ಮುಜುಗರ ಆಗುವಂತಹ ದೃಶ್ಯಗಳಿಲ್ಲ. ಇಡೀ ಕುಟುಂಬ ಕುಳಿತು ಈ ಸಿನಿಮಾ ನೋಡಬಹುದು. ಇಡೀ ರಾತ್ರಿಯೆಲ್ಲ ಮಳೆಯಲ್ಲಿ ಸಿನಿಮಾ ಶೂಟಿಂಗ್‌ ಮಾಡಿದ್ದೇವೆ. ರಚಿತಾ ರಾಮ್‌ ಕಣ್ಣುಗಳಲ್ಲಿ ವಿಷಯ ಇದೆ ಅಂತ ನಾವು ಮಾತನಾಡಿಕೊಳ್ಳುತ್ತಿರುತ್ತೇವೆ. ಆ ಬಗ್ಗೆಯೂ ಸಿನಿಮಾದಲ್ಲಿದೆ. :- ಧನಂಜಯ್‌, ನಾಯಕ

ಮಾನ್ಸೂನ್‌ ರಾಗ 80% ಸಿನಿಮಾ ಮಳೆಯಲ್ಲಿ ಶೂಟಿಂಗ್‌ ಮಾಡಲಾಗಿದೆ. ನಾವು ಸುಮ್ಮನೆ ಕಲಾವಿದರನ್ನು ಕರೆದುಕೊಂಡು ಸಿನಿಮಾ ಮಾಡೋದಿಲ್ಲ, ಸಿನಿಮಾ ಕಂಟೆಂಟ್‌ ಜನರಿಗೆ ರೀಚ್‌ ಆಗಬೇಕು, ಪಾತ್ರಕ್ಕೆ ಹೊಂದಿಕೆಯಾಗಬೇಕು ಎಂದಾಗ ಯಾರನ್ನು ಬೇಕಾದರೂ ಕಾಂಟ್ಯಾಕ್ಟ್ ಮಾಡಿ ಪಾತ್ರ ಮಾಡಿಸಲು ಒಪ್ಪಿಸುತ್ತೇವೆ. :-ವಿಖ್ಯಾತ್‌, ನಿರ್ಮಾಪಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next