Advertisement

‘ಮಾನ್ಸೂನ್‌ ರಾಗ’ ಕಲರ್‌ ಫುಲ್‌ ಪ್ರೀ-ರಿಲೀಸ್‌ ಇವೆಂಟ್‌

12:28 PM Sep 15, 2022 | Team Udayavani |

ಡಾಲಿ ಧನಂಜಯ್‌ ಹಾಗೂ ರಚಿತಾ ರಾಮ್‌ ಅಭಿನಯದ “ಮಾನ್ಸೂನ್‌ ರಾಗ’ ಚಿತ್ರ ಇದೇ, ಸೆ. 16ಕ್ಕೆ ತೆರೆ ಕಾಣುತ್ತಿದೆ. ಸದ್ಯ ಚಿತ್ರತಂಡ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಅದ್ಧೂರಿಯಾಗಿ “ಮಾನ್ಸೂನ್‌ ರಾಗ’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಡೆಸಿತು.

Advertisement

“ವಿಖ್ಯಾತ್‌ ಚಿತ್ರ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ಎ ಆರ್‌. ವಿಖ್ಯಾತ್‌ ನಿರ್ಮಿಸುತ್ತಿರುವ “ಮಾನ್ಸೂನ್‌ ರಾಗ’ ಸಿನಿಮಾಕ್ಕೆ ಎಸ್‌. ರವಿಂದ್ರನಾಥ್‌ ನಿರ್ದೇಶನವಿದೆ.

ಚಿತ್ರದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ಎಸ್‌. ಕೆ ರಾವ್‌ ಛಾಯಾಗ್ರಹಣ, ಹರೀಸ್‌ ಕೊಮ್ಮೆ ಸಂಕಲನ ಹಾಗೂ ಗುರು ಕಶ್ಯಪ್‌ ಸಂಭಾಷಣೆ ಇದೆ.

ಇನ್ನು ವರ್ಣರಂಜಿತವಾಗಿ ನಡೆದ “ಮಾನ್ಸೂನ್‌ ರಾಗ’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ಸಮಾರಂಭದಲ್ಲಿ “ಹೆಡ್‌ ಬುಷ್‌’ ಚಿತ್ರತಂಡ ತನ್ನ ಸಿನಿಮಾ ಗೆಟೆಪ್‌ನಲ್ಲಿ ಬಂದು “ಮಾನ್ಸೂನ್‌ ರಾಗ’ ಸಿನಿಮಾಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

ನಟ ದುನಿಯಾ ವಿಜಯ್‌, ವಸಿಷ್ಟ ಸಿಂಹ, ರಘು ಮುಖರ್ಜಿ, ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿ ಕೆ. ಕಲ್ಯಾಣ್‌, ಗಾಯಕ ವಾಸುಕಿ ವೈಭವ್‌, ನಿರ್ಮಾಪಕ ದೇವೇಂದ್ರ ರೆಡ್ಡಿ, ಗೋವಿಂದ ರಾಜ್‌, ಕೃಷ್ಣ ಸಾರ್ಥಕ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

Advertisement

ಇದೇ ವೇಳೆ “ಮಾನ್ಸೂನ್‌ ರಾಗ’ ಸಿನಿಮಾದ ಕಲಾವಿದರಾದ ಧನಂಜಯ್‌, ರಚಿತಾ ರಾಮ್‌, ಸುಹಾಸಿನಿ, ಅಚ್ಯುತ್‌ ಕುಮಾರ್‌, ಯಶಾ ಶಿವಕುಮಾರ್‌, ರಘು, ಶಮಂತ್‌, ಅಂಕಿತಾ ಸೇರಿದಂತೆ ಚಿತ್ರದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು, ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next