Advertisement
ಇಲ್ಲಿನ ಪೇಟೆಯ ಡಾ. ಬಾಲಕೃಷ್ಣ ಆಳ್ವರ ಶಾಪ್‌ನಿಂದ ನವಭಾರತ್ ಹೊಟೇಲ್ ವರೆಗಿನ ರಸ್ತೆಯ ಇಕ್ಕೆಲಗಳ ಚರಂಡಿ ಮಣ್ಣಿನಿಂದ ತುಂಬಿಹೋಗಿದ್ದು, ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು ಅಂಗಡಿಯೊಳಗೆ ಪ್ರವೇಶಿಸುತ್ತಿತ್ತು. ಶುಕ್ರವಾರ ಪಂಚಾಯತ್ ವತಿಯಿಂದ ಈ ಚರಂಡಿಗಳ ಹೂಳು ತೆಗೆಯಲಾಗಿದ್ದು, ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಮುಂಡ್ಕೂರು ಪೇಟೆಯಲ್ಲಿ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ಹರಿಯದೆ ಪೇಟೆ ನೀರಿನಿಂದಾವೃತಗೊಂಡಿತ್ತು. ಪ್ರತಿ ಬಾರಿ ಸಮಸ್ಯೆ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಹೂಳೆತ್ತಲು ಸಾರ್ವಜನಿಕರು ಆಗ್ರಹಿಸಿದ್ದರು. ಇನ್ನು, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚೇರಿಪೇಟೆಗಳಲ್ಲಿಯೂ ಚರಂಡಿಯಲ್ಲಿ ಹೂಳು ತುಂಬಿ ಮಳೆಗಾಲಕ್ಕೆ ರಸ್ತೆಯ ಮೇಲೆಯೇ ನೀರು ಹರಿಯುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಚರಂಡಿಯಾಗಿದ್ದರೂ ಪಂಚಾಯತ್ ಆಡಳಿತ ತಾತ್ಕಾಲಿಕ ಪರಿಹಾರ ನೀಡಬೇಕೆಂದು ಜನ ಆಗ್ರಹಿಸಿದ್ದಾರೆ.
Related Articles
ಮಳೆಗಾಲದ ಅನಾಹುತಗಳಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಚರಂಡಿ ಹೂಳೆತ್ತುವ ಕೆಲಸ ನಡೆಸಲಾಗುತ್ತಿದೆ. ಈಗಾಗಲೇ ಈ ಜಾಗದಲ್ಲಿ ಮೋರಿ ನಿರ್ಮಾಣಗೊಂಡಿದ್ದರೂ ಭಾರೀ ಮಳೆಗೆ ಹೂಳು ತುಂಬುತ್ತದೆ. ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಚರಂಡಿ ಹೂಳೆತ್ತಲಾಗುತ್ತಿದೆ.
-ಶಶಿಧರ ಆಚಾರ್ಯ,
ಗ್ರಾ.ಪಂ. ಪಿಡಿಒ
Advertisement
ಕೆಲಸ ನಡೆಯುತ್ತಿದೆ ಮುಂಡ್ಕೂರು ಗ್ರಾ.ಪಂ. ಇತರೆಡೆಗಳಲ್ಲಿರುವ ಸಮಸ್ಯೆಗಳನ್ನೂ ಪರಿಹರಿಸಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲಸ ನಡೆಯುತ್ತಿದೆ. ಮುಂದೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.-ಶುಭಾ ಪಿ.ಶೆಟ್ಟಿ ,
ಗ್ರಾ.ಪಂ.ಅಧ್ಯಕ್ಷೆ