Advertisement

ಮುಂಗಾರು ಮುನ್ನೆಚ್ಚರಿಕೆ: ಪೊನ್ನುರಾಜ್‌ ಸೂಚನೆ

12:28 AM May 22, 2022 | Team Udayavani |

ಮಂಗಳೂರು: ಮುಂದಿನ 15 ದಿನಗಳಲ್ಲಿ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್‌ ನಿರ್ದೇಶನವಿತ್ತರು.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಪೂರ್ವಸಿದ್ಧತೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿ ಮುಂಗಾರು ಅವಧಿಗೆ ಮುನ್ನ ಪ್ರವೇಶಿಸುತ್ತಿದೆ. ಹೆಚ್ಚು ಮಳೆಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸನ್ನಿವೇಶ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು, ಪ್ರವಾಹ ಸೇರಿದಂತೆ ಪ್ರಾಕೃತಿಕ ಹಾಗೂ ಮಾನವನಿಂದಾಗ ಬಹುದಾದ ಅವಘಡಗಳನ್ನು ಎದುರಿಸಲು ಈಗಲೇ ಸಿದ್ದತೆಗಳು ಪೂರ್ಣಗೊಳ್ಳಬೇಕು, ಮಳೆಯಿಂದ ಹಾನಿಗೊಳಗಾದ ಎಲ್ಲ ತರಹದ ಮನೆಗಳು, ಆಸ್ತಿ ಹಾನಿಯನ್ನು ಸರಕಾರ ನಿಗದಿ ಪಡಿಸಿರುವ ಆ್ಯಪ್‌ ಮೂಲಕ ಮೊದಲು ಸಮೀಕ್ಷೆ ಮಾಡಿ, ಪ್ರಥಮ ಮಾಹಿತಿಯನ್ನು ಸಂಗ್ರಹಿಟ್ಟುಕೊಳ್ಳಬೇಕು, ಸಂಬಂಧಿಸಿದ ಅಧಿಕಾರಿಗಳು 24 ತಾಸಿನೊಳಗೆ ಪರಿಹಾರ ನೀಡಬೇಕು ಎಂದರು.

ಲೋಕೋಪಯೋಗಿ ಇಲಾಖೆ, ಪಂಚಾಯತ್‌ ರಾಜ್‌ ಹಾಗೂ ಎಂಜಿನಿಯರಿಂಗ್‌ ಹಾಗೂ ಮೆಸ್ಕಾಂ ಇಲಾಖೆಯ ಸಿಬಂದಿಗಳ ತಂಡ ಸಿದ್ಧವಿರಬೇಕು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ಜಿಲ್ಲೆಯ ಹೆದ್ದಾರಿ ನಿರ್ಮಾಣದ ಸ್ಥಳಗಳಲ್ಲಿ ಬಸ್‌ ಸೇರಿದಂತೆ ಯಾವುದೇ ಪ್ರಯಾಣಿಕ ಹಾಗೂ ಗೂಡ್ಸ್‌ ವಾಹನಗಳು ಅಪಘಾತಕ್ಕೀಡಾಗಂತೆ ರಸ್ತೆ ಬದಿಗಳಲ್ಲಿ ನಾಮಫಲಕ ಹಾಗೂ ಪ್ರತಿಫ‌ಲಕ ಅಳವಡಿಸಬೇಕು, ಅಂತೆಯೇ ತಿರುವುಗಳಲ್ಲಿಯೂ ಈ ಕಾರ್ಯ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನ ನಿರ್ದೇಶಕ ಲಿಂಗೇಗೌಡ ಅವರಿಗೆ ಸೂಚಿಸಿದರು.

ಅಪಾಯವಿರುವಲ್ಲಿಂದ
ಜನರನ್ನು ಸ್ಥಳಾಂತರಿಸಿ
ಗುಡ್ಡ ಕುಸಿತ ಉಂಟಾಗುವ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸವಾಗಬೇಕು, ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿಗಳ ಹೂಳು ತೆಗೆಯಬೇಕು, ಜಲಾಶಯಗಳ ಗೇಟ್‌ಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಬೇಕು, ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಸೂಕ್ತ ಸ್ಥಳಗಳನ್ನು ಪತ್ತೆ ಮಾಡಬೇಕು, ವಿದ್ಯುತ್‌ ಕಂಬಗಳು ಬಿದ್ದಾಗ ಅದನ್ನು ತೆರವುಗೊಳಿಸುವ ಕಾರ್ಯವನ್ನು ಮೆಸ್ಕಾಂ ಚುರುಕಾಗಿ ಮಾಡಬೇಕು, ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆಯಲ್ಲಿ ಬೀಳುವ ಮರಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಪೊನ್ನುರಾಜ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್‌, ಮಂಗಳೂರು ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ಮಾತನಾಡಿದರು.

ಎಸ್ಪಿ ಹೃಷಿಕೇಶ್‌ ಭಗವಾನ್‌ ಸೋನಾವಣೆ, ಮಂಗಳೂರು ಸಹಾಯಕ ಆಯುಕ್ತ ಮದನ್‌ ಮೋಹನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next