ತಿರುವನಂತಪುರ: ವಾಡಿಕೆಯಂತೆ ಜೂನ್ 1ರಂದು ಪ್ರವೇಶಿಸಬೇಕಿದ್ದ ಮುಂಗಾರು ಒಂದು ವಾರದ ಬಳಿಕ ಗುರುವಾರ (ಜೂನ್ 08) ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿರುವುದಾಗಿ ಹವಾಮಾನ ವಿಜ್ಞಾನಿಗಳು ಮತ್ತು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:Lok Sabha Election;ರಾಜಕೀಯ ಸಾಕು: ಅಚ್ಚರಿಯ ಹೇಳಿಕೆ ನೀಡಿದ ಸಂಸದ ಡಿ.ಕೆ.ಸುರೇಶ್
ಬಿಪಾರಜೋಯ್ ಚಂಡಮಾರುತದಿಂದ ಹಿನ್ನೆಲೆಯಲ್ಲಿ ನೈರುತ್ಯ ಮುಂಗಾರು ಈ ಬಾರಿ ತಡವಾಗಿ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು. ದೇಶದ ವಿವಿಧ ಭಾಗಗಳಲ್ಲಿ ನೈರುತ್ಯ ಮುಂಗಾರು ಪ್ರವೇಶ ವಿಳಂಬವಾಗಲಿದೆ ಎಂದು ತಿಳಿಸಿದೆ.
ದಕ್ಷಿಣ ತಮಿಳುನಾಡಿನ ಕೆಲವು ಪ್ರದೇಶ, ಕೇರಳ, ಬಂಗಾಳ ಕೊಲ್ಲಿ ಮತ್ತು ಗಲ್ಫ್ ಆಫ್ ಮನ್ನಾರ್ ಪ್ರದೇಶದಲ್ಲಿ ನೈರುತ್ಯ ಮುಂಗಾರು ಪ್ರವೇಶಿಸಿರುವುದಾಗಿ ವರದಿ ವಿವರಿಸಿದೆ.
ಕಳೆದ 150 ವರ್ಷಗಳಲ್ಲಿ ಕೇರಳದಲ್ಲಿ ಮುಂಗಾರು ಪ್ರವೇಶಿಸಿದ ದಿನಾಂಕಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಐಎಂಡಿ ಅಂಕಿಅಂಶದ ಪ್ರಕಾರ, 1918ರ ಮೇ 11ರಂದೇ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿದ್ದು, 1972ರ ಜೂನ್ 18ರಂದು ವಿಳಂಬವಾಗಿ ಮುಂಗಾರು ಕೇರಳವನ್ನು ಪ್ರವೇಶಿಸಿತ್ತು ಎಂದು ತಿಳಿಸಿದೆ.