Advertisement

ಮಂಕಿಪಾಕ್ಸ್‌ ಪ್ರಕರಣ ಹಿನ್ನೆಲೆ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

09:09 AM Aug 04, 2022 | Team Udayavani |

ದೇಶದಲ್ಲಿ ಮಂಕಿಪಾಕ್ಸ್‌ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ.ಸಾರ್ವಜನಿಕರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬಿತ್ಯಾದಿ ಸಲಹೆಗಳನ್ನು ನೀಡಲಾಗಿದ್ದು ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ.

Advertisement

ಏನು ಮಾಡಬೇಕು?
– ಐಸೋಲೇಷನ್‌ನಲ್ಲಿರುವ ಸೋಂಕಿತ ವ್ಯಕ್ತಿಯನ್ನು ಇತರರ ಸಂಪರ್ಕದಿಂದ ದೂರವಿಡಬೇಕು.
– ಆಗಾಗ್ಗೆ ಹ್ಯಾಂಡ್‌ ಸ್ಯಾನಿಟೈಸರ್‌ ಅಥವಾ ಸಾಬೂನಿನಿಂದ ಕೈಗಳನ್ನು ಶುದ್ಧಗೊಳಿಸಬೇಕು.
– ಮೂಗು, ಬಾಯಿಯನ್ನು ಮಾಸ್ಕ್ ನಿಂದಲೂ, ಕೈಗಳನ್ನು ಹ್ಯಾಂಡ್‌ ಗ್ಲೌಸ್‌ಗಳಿಂದಲೂ ಕವರ್‌ ಮಾಡಿಕೊಳ್ಳಬೇಕು

ಏನು ಮಾಡಬಾರದು?
– ಸೋಂಕಿತರ ಜತೆಗೆ ಮಲಗುವುದು, ಊಟ ಮಾಡುವುದು, ಅವರ ಬಟ್ಟೆ, ಟವಲ್‌ ಬಳಸುವುದು ಇತ್ಯಾದಿ ಮಾಡಬಾರದು.
– ಸೋಂಕಿತರ ಬಟ್ಟೆಗಳನ್ನು, ಆರೋಗ್ಯವಂತ ವ್ಯಕ್ತಿಗಳ ಬಟ್ಟೆಗಳನ್ನು ಒಟ್ಟಿಗೆ ತೊಳೆಯಬಾರದು.
– ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಸಾಮಾಜಿಕ ಸಭೆ, ಸಮಾರಂಭಗಳಲ್ಲಿ ಕಾಣಿಸಬಾರದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next