Advertisement

ನಿಟ್ಟೆ ಪರಿಸರದಲ್ಲಿ ಮಿತಿಮೀರಿದ ಮಂಗಗಳ ಉಪಟಳ: ಸಂಕಷ್ಟದಲ್ಲಿ ಬೆಳೆಗಾರ

01:01 AM Jan 30, 2023 | Team Udayavani |

ಕಾರ್ಕಳ: ಒಂದೆಡೆ ಪ್ರಾಕೃತಿಕ ವಿಕೋಪದಿಂದ ಸಮಸ್ಯೆ. ಇನ್ನೊಂದೆಡೆ ನಿರಂತರ ಮಳೆಯಿಂದು ವಾತಾವರಣದಲ್ಲಿನ ಬದಲಾವಣೆಯಿಂದ ಕೃಷಿಗೆ ತೊಂದರೆ ಆಗುತ್ತಿದೆ. ಇದೆಲ್ಲದರ ಮಧ್ಯೆ ಉಳಿದ ಅಲ್ಪ ಫ‌ಸಲು ಮಂಗಗಳ ಪಾಲಾಗುತ್ತಿದೆ. ಇದರಿಂದ ಕೃಷಿಕರು ಬೇಸತ್ತು ಹೋಗಿದ್ದು ಆರ್ಥಿಕವಾಗಿ ಸಂಕಷ್ಟಕ್ಕೆ
ಸಿಲುಕಿದ್ದಾರೆ.

Advertisement

ಕಾರ್ಕಳ ತಾಲೂಕಿನ ನಿಟ್ಟೆ ಪರಿಸರದ ಜನರಿಗೆ ಮಂಗಳಗಳ ಉಪಟಳ ಬಾರಿ ಹೆಚ್ಚಾಗಿದೆ. ಈ ಭಾಗದ ಹಲವು ಕೃಷಿಕರು ಮಂಗಗಳ ನಿರಂತರ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ. ಮಂಗಗಳು ಗುಂಪಾಗಿ ತೆಂಗು ತೋಟ ಸಹಿತ ಕೃಷಿ ತೋಟಗಳಿಗೆ ದಾಳಿಯಿಡುತ್ತಿವೆ. ಉಳಿಸಿಕೊಂಡ ಅಲ್ಪ ಫ‌ಸಲನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ಅವುಗಳ ಉಪಟಳ ತಳ್ಳಿದೆ. ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಅಸಂಖ್ಯಾಕ ಪ್ರಮಾಣದಲ್ಲಿ ಕೃಷಿಕರ ಮನೆಗಳಿದ್ದು ಸೀಯಾಳ, ಅಡಿಕೆ ಇತರ ಅಲ್ಪಾವಧಿ ಬೆಳೆಗಳ ಫ‌ಸಲನ್ನು ತಿಂದು ಹಾಳುಗೆಡವುತ್ತಿವೆ.

ಸುತ್ತಮುತ್ತಲಿನ ಕಾಡಿನಿಂದ ಮಂಗಗಳ ಹಿಂಡು ತೋಟಗಳಿಗೆ ಮುತ್ತಿಗೆ ಹಾಕಿ ಬಿಡುತ್ತಿವೆ. ಅವುಗಳನ್ನು ಓಡಿಸುವ ಯಾವ ಪ್ರಯತ್ನಗಳು ಈಡೇರುತ್ತಿಲ್ಲ. ಹಿಂಡಾಗಿ ಬರುವ ಮಂಗಗಳು ತೆಂಗು ಕಂಗು ಬಾಳೆ ಹಲಸು ಮಿಶ್ರ ಬೆಳೆಗಳಿಗೆ ದಾಳಿಯಿಟ್ಟು ಅಪಾರ ಪ್ರಮಾಣದ ನಷ್ಟ ಆಗುತ್ತಿದೆ. ತಿಂದು ಬಿಸಾಡಿದ ಕಾಯಿಗಳ ಮರ ಬುಡದಲ್ಲಿ ನೋಡಿದರೆ ಮರುಕ ಹುಟ್ಟುತ್ತದೆ. ಅಷ್ಟು ಪ್ರಮಾಣದಲ್ಲಿ ಈ ಭಾಗದಲ್ಲಿ ಮಂಗಗಳಿಂದ ಉಪಟಳವಿದೆ ಎಂದು ಅಲ್ಲಿನ ಕೃಷಿಕರು ಅಳಲು ವ್ಯಕ್ತಪಡಿಸುತ್ತಿದ್ದಾರೆ. ಮಂಗಗಳ ಹಾವಳಿ ತಡೆಯಲು ರೈತ ನಾನಾ ವಿಧದಲ್ಲಿ ಬೆದರುಗೊಂಬೆ, ಸಿಡಿಮದ್ದು, ಡಬ್ಬಿ ಶಬ್ಧ ಮಾಡಿ ಪ್ರಯತ್ನಿಸಿದರೂ ನಿಯಂತ್ರಣ ಸಾಧ್ಯವಾಗದೆ ಪರಿಸರದ ಜನ ಕೈ ಚೆಲ್ಲಿ ಕುಳಿತಿದ್ದಾರೆ. ಪಂಚಾಯತ್‌, ಸರಕಾರಕ್ಕೆ ದೂರಿತ್ತರೂ ಪ್ರಯೋಜನವಾಗಿಲ್ಲ. ಸರಕಾರದಿಂದ ಮಂಗಗಳ ಹಾವಳಿಯಿಂದ ಹಾನಿಗೊಳಗಾದ ಫ‌ಸಲುಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತಿಲ್ಲ. ಇವೆಲ್ಲದರಿಂದ ರೈತರು ಈಗ ಮಂಗಗಳ ಕಾಟದಿಂದ ಬೇಸತ್ತು ಹೋಗಿ ಕೃಷಿ ನಡೆಸುವುದಕ್ಕೆ ಹಿಂದೇಟು ಹಾಕುವ ಸ್ಥಿತಿಗೆ ತಲುಪಿದ್ದಾರೆ.

ಮನೆಗೂ ನುಗ್ಗುತ್ತವೆ
ಕೃಷಿ ತೋಟಗಳಿಗೆ ನುಗ್ಗುವ ವಾನರರು ಫ‌ಸಲು ನಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಮನೆಯ ಅಂಗಳದವರೆಗೂ ಧಾವಿಸಿ ಬಂದು ಹೊಸ್ತಿಲಲ್ಲಿ ಬೆಳೆದ ತರಕಾರಿ, ಫ‌ಲ ಪುಷ್ಪಗಳಿಗೂ ಹಾನಿ ಮಾಡುತ್ತವೆ. ಮುಂದುವರಿದೂ ಮನೆಯ ಒಳಗಡೆಗೂ ಮುನ್ನುಗ್ಗಲು ಪ್ರಯತ್ನಿಸುತ್ತವೆ. ಒಂಟಿ ಹೆಂಗಸರು ಓಡಿಸಲು ಹೋದರೆ ಹೋದರೆ ಮಂಗಗಳೇ ತಿರುಗು ಹೆದರಿಸಿ ಕಳುಹಿಸುತ್ತಿವೆ.

ಪರಿಹಾರ ನೀಡಿ
ಇತ್ತೀಚಿನ ದಿನಗಳಲ್ಲಂತೂ ಈ ಭಾಗದಲ್ಲಿ ಅತೀವ ಸಮಸ್ಯೆಗಳನ್ನು ಮಂಗಗಳು ತಂದಿಡುತ್ತಿವೆ. ಅವುಗಳಿಗೆ ಯಾರ ಬಗ್ಗೆ ಯಾವ ಭಯವೂ ಇಲ್ಲ. ಇಲಾಖೆಗಳು ಇವುಗಳ ಹಾವಳಿ ತಡೆಗೆ ಏನಾದರೂ ಪ್ರಯತ್ನಗಳನ್ನು ನಡೆಸಬೇಕು. ಗರಿಷ್ಠ ಪ್ರಮಾಣದ ಪರಿಹಾರವನ್ನಾದರೂ ಹಾನಿಗೆ ನೀಡುವಂತಾಗಬೇಕು.
– ದಿನೇಶ್‌, ಸ್ಥಳೀಯ ಕೃಷಿಕ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next