Advertisement

ಮಂಗನ ಕಾಯಿಲೆ: ಅರಳಗೋಡಲ್ಲಿ ಮತ್ತಿಬ್ಬರಿಗೆ ಜ್ವರ

12:30 AM Jan 11, 2019 | |

ಸಾಗರ: ಮಹಾಮಾರಿ ಮಂಗನಕಾಯಿಲೆ ಹೆಚ್ಚುತ್ತಲೇ ಇದ್ದು, ಮತ್ತಿಬ್ಬರು ಜ್ವರಕ್ಕೆ ತುತ್ತಾಗಿದ್ದಾರೆ. ಗುರುವಾರ ತಾಲೂಕಿನಲ್ಲಿ ನಾಲ್ಕು ಮೃತ ಮಂಗಗಳು ಪತ್ತೆಯಾಗಿವೆ. ನಾಲ್ಕೂ ಮಂಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಸ್ಟ್‌ಮಾರ್ಟ್ಂ ಸಾಧ್ಯವಾಗಿಲ್ಲ.

Advertisement

ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಮೃತ ಮಂಗಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳಸವಳ್ಳಿ ಗ್ರಾಮದ ಹುಣಸೆಕೇರಿಯ ವೆಂಕಟೇಶ್‌ ಎಂಬುವರ ತೋಟದಲ್ಲಿ ಹಾಗೂ ಗುಮಗೋಡಿನ ಲಕ್ಷಿ¾àನಾರಾಯಣ ಭಟ್‌ ಎಂಬುವರ ಮನೆ ಹತ್ತಿರ ಕೊಳೆತ ಸ್ಥಿತಿಯಲ್ಲಿ ಮಂಗಗಳು ಪತ್ತೆಯಾಗಿವೆ. ಉಳ್ಳೂರಿನ ಸಮೀಪ ಒಂದು ಮಂಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆ ಕೂಂಬಿಂಗ್‌ ಸಂದರ್ಭದಲ್ಲಿ ಮಂಗದ ಅವಶೇಷ ಪತ್ತೆಯಾಗಿದೆ.

ಈ ಮಧ್ಯೆ, ಅರಳಗೋಡಿನಲ್ಲಿ ಮತ್ತಿಬ್ಬರಿಗೆ ಜ್ವರ ಕಾಣಿಸಿಕೊಂಡಿದ್ದು, ಕೆಎಫ್‌ಡಿ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಜ್ವರಬಾಧಿತರಾದ ಅರಳಗೋಡು ಗಣಪತಿ ಭಟ್‌, ಕಾರ್ಗಲ್‌ ಪರಶುರಾಮ ಎಂಬುವರನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸವಿತಾ ಅವರ ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ ಎಂದು ತಿಳಿದು ಬಂದಿದೆ. ಕೆಎಫ್‌ಡಿ ಪ್ರತಿಬಂಧಕ ಘಟಕದ ಉಪ ನಿರ್ದೇಶಕ ಡಾ| ರವಿಕುಮಾರ್‌ ಮಾಹಿತಿ ನೀಡಿ, ಪರೀಕ್ಷೆಗೊಳಗಾದ 15 ಸ್ಯಾಂಪಲ್‌ಗ‌ಳಲ್ಲಿ ಶಿವಮೊಗ್ಗದಲ್ಲಿ 2 ಹಾಗೂ ಬೆಂಗಳೂರು ಪ್ರಯೋಗಾಲಯದಿಂದ ಒಂದು ಪಾಸಿಟಿವ್‌ ಬಂದಿದೆ. ಇವೂ ಸೇರಿ ಒಟ್ಟೂ 56 ಮಂದಿ ಮಂಗನಕಾಯಿಲೆಯಿಂದ ಬಳಲುತ್ತಿರುವುದು ದೃಢಪಟ್ಟಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next