Advertisement

ಮಂಗನ ಕಾಯಿಲೆ ದೃಢ: ಪರೀಕ್ಷಾ  ವರದಿ​​​​​​​

12:30 AM Jan 17, 2019 | |

ಕುಂದಾಪುರ: ಉಡುಪಿ ಜಿಲ್ಲೆಯ ವಿವಿಧೆಡೆ ಕೆಲವು ದಿನಗಳಿಂದ ಸಂಭವಿಸಿದ ಮಂಗಗಳ ಸಾವು ಮಂಗನ ಕಾಯಿಲೆಯಿಂದ ಎಂದು ವೈದ್ಯಕೀಯ ಪರೀಕ್ಷಾ ವರದಿ ದೃಢಪಡಿಸಿದೆ.

Advertisement

ಬುಧವಾರ ಶಿವಮೊಗ್ಗದಿಂದ ಪರೀಕ್ಷೆ ವರದಿ ಬಂದಿದೆ. ಒಟ್ಟು 24 ಪ್ರಕರಣಗಳ ಪೈಕಿ 18 ಮಂಗಗಳ ಸ್ಯಾಂಪಲನ್ನು ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 12 ವರದಿಗಳಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ  ಎಂದು ವರದಿ ಕೊಟ್ಟಿವೆ.

ಎಚ್ಚರ ವಹಿಸಲಾಗಿದೆ
ಮಂಗನ ಸಾವು ಸಂಭವಿಸಿದ ಪ್ರಥಮ ದಿನದಿಂದಲೇ ಅರಣ್ಯ ಇಲಾಖೆ, ಗ್ರಾ.ಪಂ. ಹಾಗೂ ಪಶುವೈದ್ಯ ಇಲಾಖೆ ಜತೆಗೂಡಿ ಸಮನ್ವಯದಲ್ಲಿ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಮಂಗಗಳಿಗೆ ಮಂಗನಕಾಯಿಲೆ ಎಂದು ದೃಢಪಟ್ಟಿದೆಯಾದರೂ ಮನುಷ್ಯರಿಗೆ ಎಲ್ಲೂ ಏನೂ ಆಗಿಲ್ಲ. ಆದ್ದರಿಂದ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆ ಸರ್ವೆ, ಜಾಗೃತಿ, ಮಾಹಿತಿ ನೀಡಲಾಗುತ್ತಿದೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ತಿಳಿಸಿದ್ದಾರೆ.

ಜ್ವರ ಪ್ರಕರಣ ಕಂಡು ಬಂದರೆ ಇಲಾಖೆಗೆ ತತ್‌ಕ್ಷಣ ಮಾಹಿತಿ ನೀಡಲು ವೈದ್ಯಕೀಯ ಸಂಘಟನೆ ಮೂಲಕ ಎಲ್ಲ ವೈದ್ಯರಿಗೆ ಸೂಚನೆ ನೀಡಲಾಗಿದೆ. ಕಾಯಿಲೆ ತಡೆಗಟ್ಟಲು ಜನ ವೈಯಕ್ತಿಕವಾಗಿ ಭಾಗಿಯಾಗಬೇಕು. ವೈಯಕ್ತಿಕ ಸ್ವತ್ಛತೆ, ಜಾನುವಾರುಗಳ ಸ್ವತ್ಛತೆಗೂ ಆದ್ಯತೆ ನೀಡಬೇಕು. ಕಾಡಿಗೆ ಹೋಗುವುದನ್ನು ತಪ್ಪಿಸಬೇಕು. ಅನಿವಾರ್ಯವಾಗಿ ಹೋಗಬೇಕಾಗಿ ಬಂದರೆ ಉಣುಗು ಕಡಿಯದಂತೆ ಇಲಾಖೆ ಕೊಡುವ ಡಿಎಂಪಿ ತೈಲ ಹಚ್ಚಿ ಎಚ್ಚರವಹಿಸಿ, ಬಂದ ಅನಂತರ ಬಿಸಿನೀರಿನಿಂದ ಸ್ನಾನ ಮಾಡಿ. ಜಾನುವಾರುಗಳನ್ನು ಕಾಡಿಗೆ ಕಳುಹಿಸಿದರೆ ಬಿಸಿನೀರಿನ ಸ್ನಾನ ಮಾಡಿಸಿ ಎಂದಿದ್ದಾರೆ.

ಸುಟ್ಟುಬಿಡಿ
ಮಂಗ ಸತ್ತದ್ದು ಕಂಡು ಬಂದರೆ ತತ್‌ಕ್ಷಣ ಸುಟ್ಟು ಹಾಕಬೇಕು. ಅದರ ಸುತ್ತ 50 ಮೀ. ವ್ಯಾಪ್ತಿಯಲ್ಲಿ ಇಲಾಖೆ ನೀಡುವ ಔಷಧ ಸಿಂಪಡಿಸಬೇಕು. ಇನ್ನು ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯಕೀಯ ವರದಿ ಪಡೆಯುವುದಿಲ್ಲ.

Advertisement

ಮಣಿಪಾಲ ಆಸ್ಪತ್ರೆ: 61 ಮಂದಿ ಗುಣಮುಖ
ಉಡುಪಿ
: ಮಂಗನ ಕಾಯಿಲೆ ಸಂಬಂಧಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ಆಸುಪಾಸಿನ 83 ಜನರು ಜ. 16ರ ವರೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 28 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಶಂಕೆ ಕಂಡುಬಂದಿದೆ. 46 ಜನರಿಗೆ ಮಂಗನ ಕಾಯಿಲೆ ಇಲ್ಲವೆಂದು ದೃಢಪಟ್ಟಿದೆ. 9 ಜನರ ಪರೀಕ್ಷಾ ವರದಿ ಕೈಸೇರಬೇಕಾಗಿದೆ. 61 ಜನರು ಗುಣಮುಖರಾಗಿ ತೆರಳಿದ್ದಾರೆ. 22 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ತನಕ ಸಾವು ಸಂಭವಿಸಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ  ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಮಂಗನಕಾಯಿಲೆ ಇಲ್ಲ ಎಂದು ದೃಢಪಟ್ಟಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

ಕಾರ್ಕಳ: 2 ಶವ ಪತ್ತೆ; ಇಂದು ತುರ್ತು ಸಭೆ 
ಕಾರ್ಕಳ
: ತಾಲೂಕಿನ  ನಕ್ರೆಯಲ್ಲಿ 1 ಹಾಗೂ ಕುಕ್ಕುಂದೂರು ಅಯ್ಯಪ್ಪನಗರದಲ್ಲಿ 1 ಕೋತಿಯ ಶವ ಬುಧವಾರ ಪತ್ತೆಯಾಗಿದೆ. ಒಂದು ಶವ ಸಂಪೂರ್ಣ ಕೊಳೆತಿದ್ದು, ಮತ್ತೂಂದರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಮಂಗಗಳ ಸಾವಿನ ಹಿನ್ನೆಲೆಯಲ್ಲಿ ತುರ್ತಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜ. 17ರಂದು ತಾ.ಪಂ.ನಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ತರ್ತು ಸಭೆ ಕರೆಯಲಾಗಿದೆ. ಜ. 18ರಂದು ಎಲ್ಲ ಗ್ರಾ.ಪಂ.ಗಳಲ್ಲಿ ಗ್ರಾಮಸಭೆ ಕರೆಯಲಾಗಿದೆ. 

ಕಡಬ: ರಾಮಕುಂಜ ಗ್ರಾ.ಪಂ. ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ಆದಂ ಅವರ ತೋಟದಲ್ಲಿ ಮಂಗಳವಾರ ಸಂಜೆ ಮಂಗವೊಂದು ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಬುಧವಾರ ಮೃತಪಟ್ಟಿದೆ. ಆರೋಗ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು  ಸುಟ್ಟು ಬೂದಿಯನ್ನು ಹೂಳಲಾಗಿದೆ. ಹಲವು ವರ್ಷಗಳ ಹಿಂದೆ ಮಂಗನಕಾಯಿಲೆಯಿಂದ ಇಲ್ಲಿ ಹಲವು ಮಂಗಳು ಸಾವನ್ನಪ್ಪಿದ್ದವು. ಈಗ ಮತ್ತೆ ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. 

ವರದಿಯಿಂದ ದೃಢ
24 ಮಂಗಗಳ ಸಾವಿನ ಪೈಕಿ 18 ಸ್ಯಾಂಪಲ್‌ ಕಳುಹಿಸಲಾಗಿದೆ. 12ರ ವರದಿ ಬಂದಿದ್ದು ಬ್ರಹ್ಮಾವರ, ಹಿರ್ಗಾನ, ಸಿದ್ದಾಪುರ, ಶಿರೂರು, ಅಲಾºಡಿ, ಹೊಸಂಗಡಿ, ಕಂಡೂÉರು ಪರಿಸರದ ಮಂಗಗಳ ಸಾವು ಮಂಗನ ಕಾಯಿಲೆಯಿಂದ ಎಂದು ಖಚಿತವಾಗಿದೆ. ಯಾವುದೇ ಜ್ವರ ಪ್ರಕರಣ ಕಂಡು ಬಂದಿಲ್ಲ. ಇಲಾಖೆ ಜಾಗೃತಿ ಕಾರ್ಯ ನಡೆಸುತ್ತಿದ್ದು ಜ್ವರ ಸರ್ವೆ ನಡೆಸುತ್ತಿದೆ. ಯಾವುದೇ ರೀತಿಯ ಆತಂಕ ಅಗತ್ಯವಿಲ್ಲ.
– ಡಾ| ಪ್ರಶಾಂತ್‌ ಭಟ್‌, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ

ಹಳೆನೇರೆಂಕಿ, ಅಳದಂಗಡಿ, ನಾರಾವಿ, ಕೊಲ್ಲಮೊಗರು, ಶಿರಾಡಿ ಸೇರಿದಂತೆ   ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ 
ಜನವಸತಿ ಪ್ರದೇಶಗಳಲ್ಲಿ ಮಂಗನ ಕಾಯಿಲೆಯ ಬಗ್ಗೆ ಕರಪತ್ರಗಳನ್ನು ಹಂಚಲಾಗಿದೆ. ಎಲ್ಲಾದರೂ ಮಂಗ ಮೃತಪಟ್ಟಿದಲ್ಲಿ ಕೂಡಲೇ ಸ್ಥಳೀಯ ಆರೋಗ್ಯ ಇಲಾಖಾ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
– ಡಾ| ರಾಮಕೃಷ್ಣ ರಾವ್‌, ಡಿಎಚ್‌ಒ 

Advertisement

Udayavani is now on Telegram. Click here to join our channel and stay updated with the latest news.

Next