Advertisement

ಮಂಗನ ಕಾಯಿಲೆ ವೈರಾಣು ಪತ್ತೆ 

07:15 AM Mar 19, 2019 | |

ಬೇಲೂರು: ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲವಾಗಿದ್ದು ಮುಂಜಾಗ್ರಾತಾ ಕ್ರಮಗಳನ್ನು ಕೈಗೊಂಡು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ವಿಜಯ್‌ ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಸಿದ್ದರಹಳ್ಳಿ ಗ್ರಾಮದಲ್ಲಿ ಕಳೆದ ವಾರ ಮಂಗ ಸತ್ತಿರುವ ಮಾಹಿತಿ ಬಂದಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಮಂಗದ ಶವವನ್ನು ಪರೀಕ್ಷೆಗೆ ಕಳಿಸಿ ಕೊಡಲಾಗಿತ್ತು.

Advertisement

ಶವ ಪರೀಕ್ಷಾ ವರದಿಯಲ್ಲಿ ಮಂಗನ ಕಿಡ್ನಿಯಲ್ಲಿ ಕಾಯಿಲೆಯ ಸೊಂಕು ಇರುವುದು ಪತ್ತೆಯಾಗಿದೆ ಎಂಬ ಮಾಹಿತಿ ತಿಳಿದ ಕೂಡಲೇ ಸಿದ್ದರಹಳ್ಳಿ ಹಾಗೂ ಅದರ ಸುತ್ತಮುತ್ತಲಿನ 5 ಕಿ.ಮೀ. ದೂರದ ವ್ಯಾಪ್ತಿಪ್ರದೇಶದಲ್ಲಿ ಸರ್ವೆಯನ್ನು ಮಾಡಿದ್ದೇವೆ. ಈ ಸಂದರ್ಭದಲ್ಲಿ ಪ್ರಾಣಿ ಅಥವಾ ಮನುಷ್ಯನಿಗೆ ಮಂಗನ ಕಾಯಿಲೆ ಸೊಂಕು ತಗುಲಿರುವ ಯಾವುದೇ ಲಕ್ಷಣ ಕಂಡು ಬಂದಿಲ್ಲ ಎಂದು ತಿಳಿಸಿದರು.

ಮಂಗನ ಕಾಯಿಲೆ ಲಕ್ಷಣಗಳು: ಮಂಗನ ಕಾಯಿಲೆಯ ಮುಖ್ಯಲಕ್ಷಣಗಳಲ್ಲಿ ಸತತ 10 ದಿನ ಬಿಡದೇ ಜ್ವರ ಬರುವುದು.ವಿ ಪರೀತ ಸೊಂಟ ನೋವು, ತಲೆ ನೋವು, ಕೈಕಾಲು ನೋವು, ನಿಶ್ಯಕ್ತಿ ಸೇರಿದಂತೆ ಕಣ್ಣು ಕೆಂಪಾಗುತ್ತದೆ. ಜ್ವರ ಬಂದ 2 ವಾರ ಮೂಗು, ಬಾಯಿ ಜ್ವರ ಹಾಗೂ ಗುದದ್ವಾರದಲ್ಲಿ ರಕ್ತಸ್ರಾವವಾಗುತ್ತದೆ. ರೋಗದ ತೀವ್ರತೆ ರೋಗಿಯ ಪ್ರತಿರೋಧ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು.

ನಿರ್ದಿಷ್ಟ ಔಷಧಿಯಿಲ್ಲ: ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹರಡದಂತೆ ಜಾಗ್ರತೆ ವಹಿಸಬೇಕು.ವಾಸಸ್ಥಳದ ಸುತ್ತ ಮುತ್ತ ಗ್ರಾಮ, ಕಾಡಿನಲ್ಲಿ ಮಂಗ ಸತ್ತಿರುವುದು ಕಂಡೊಡನೆ ಸ್ಥಳೀಯ ಆರೋಗ್ಯ ಅಧಿಕಾರಿಗೆ ತಿಳಿಸುವುದು.

ಮಂಗ ಮೃತ ಪಟ್ಟಿರುವ ಕಾಡಿನಲ್ಲಿ ಸಂಚರಿಸುವಾಗ ಮೈ ತುಂಬ ಬಟ್ಟೆಯನ್ನು ಧರಿಸಿ ಆರೋಗ್ಯ ಇಲಾಖೆಯಿಂದ ವಿತರಿಸುವ ಡಿಪಿಎಂ ತೈಲವನ್ನು ಕೈ ಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಸೋಪು ಹಚ್ಚಿಕೊಂಡು ಸ್ನಾನ ಮಾಡಬೇಕು. ಇನ್ನು ಉಣ್ಣೆಗಳಿಂದ ಈ ಕಾಯಿಲೆ ಹರಡುವ ಸಾಧ್ಯತೆ ಇರುವುದರಿಂದ ಯಾವಾಗ ಎಲ್ಲಿ ಈ ಕಾಯಿಲೆ ಹರಡುತ್ತದೆ ಎಂದು ಹೇಳುವುದು ಕಷ್ಟವಾಗುತ್ತದೆ ಎಂದರು.

Advertisement

ಈ ಕಾಯಿಲೆಗೆ ಮುಂಜಾಗ್ರತೆಗಾಗಿ ಲಸಿಕೆಯನ್ನು ಆರೋಗ್ಯವಂತನಾದ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಆಗಸ್ಟ್‌ ನಲ್ಲಿ ಮೊದಲ ಮತ್ತು ಒಂದು ತಿಂಗಳ ಅಂತರದಲ್ಲಿ 2 ಲಸಿಕೆಯನ್ನು ಹಾಕಿಸಿಕೊಂಡರೆ 30 ದಿನಗಳ ನಂತರ ರೋಗ ನಿರೋಧಕ ಶಕ್ತಿ ಬರುತ್ತದೆ. ಪ್ರತಿ ವರ್ಷ ಬೂಸ್ಟರ್‌ ( ಬಲವರ್ಧಕ) ಲಸಿಕೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕ ಕೃಷ್ಣಪ್ಪ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next