Advertisement
ಇಂಥ ಮಾತು ಇತ್ತೀಚೆಗೆ ಕೇಳಿ ಬರುತ್ತಿದೆಯೋ ಏನೊ ಗೊತ್ತಿಲ್ಲ.”ದುಡ್ಡೇನು, ಮರದಾಗ ಬೆಳಿತದ ಏನು?’ ಅನ್ನುವ ಮಾತಂತೂ ಸುಳ್ಳೇ ಆದರೂ ನಾನಿರುವ ಯು.ಕೆ. ಯ ಹತ್ತಾರು ಕಡೆ ನಿಜವಾಗಿಯೂ ದುಡ್ಡಿರುವ ಮರಗಳು ಇವೆ ಅಂದರೆ ಆಶ್ಚರ್ಯವಾಗಬಹುದು.
Related Articles
Advertisement
ಭಾರತದಲ್ಲಿಯೂ ನದಿ, ಬಾವಿಗಳಲ್ಲಿ ಕೆರೆಗಳಲ್ಲಿ ದುಡ್ಡನ್ನು ಹಾಕುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದು ಮೂಢನಂಬಿಕೆ ಅನ್ನುವುದಕ್ಕಿಂತ ಸಂಪ್ರದಾಯ ಎನ್ನ ಬಹುದು. ಮೊದಲಿನಿಂದಲೂ ತಾಮ್ರದ ಪಾತ್ರೆಯಲ್ಲಿಯ ನೀರನ್ನು ಕುಡಿದರೆ ಆರೋಗ್ಯಕರವೆನ್ನುವ ಮಾತು ಕೇಳಿದ್ದೇವೆ. ಅದೇ ರೀತಿಯಲ್ಲಿ ಹಿಂದೆ ತಾಮ್ರದ ನಾಣ್ಯಗಳೇ ಹೆಚ್ಚು ಇದ್ದ ಕಾಲದಲ್ಲಿ ಅವನ್ನು ತಂದೆ ಅಥವಾ ತಾಯಿಯಿಂದ ಇಸಿದುಕೊಂಡ ದುಡ್ಡುಗಳನ್ನು ರೇಲ್ವೆ ಗಾಡಿಯ ಕಿಟಕಿಯಿಂದ ಎಸೆಯುವ ಮಕ್ಕಳಂತೆ ನಾನು ಸಹ ಕೃಷ್ಣಾ, ಮಲಪ್ರಭಾ, ತುಂಗಭದ್ರಾ ನದಿಗಳಲ್ಲಿ ಒಗೆದದ್ದು ನೆನಪಿದೆ. ಆದರೆ ಈಗಿನ ಕಾಲದ ದುಡ್ಡಿನ ಬಿಲ್ಲೆಗಳಲ್ಲಿ ಒಂದೆರಡನ್ನು ಬಿಟ್ಟರೆ ತಾಮ್ರದ ಅಂಶ ಇಲ್ಲವೇ ಇಲ್ಲ ಎನ್ನಬಹುದು.
ನಾನು ನೋಡಿದ ಒಂದು ದಾಖಲೆಯ ಪ್ರಕಾರ ಕಡಿಮೆ ಮೊತ್ತದ ಬಿಳಿ ನಾಣ್ಯಗಳಲ್ಲಿ 83 ಶತಾಂಶ ಕಬ್ಬಿಣ ಮತ್ತು ಬಾಕಿ 17ರಷ್ಟು ಕ್ರೋಮಿಯಂ ಇರುವುದರಿಂದ ಅದರಿಂದ ಆರೋಗ್ಯವರ್ಧನೆಗಿಂತ ಹಾನಿಯೇ ಆಗುತ್ತಿರಬೇಕು. ಇನ್ನುಳಿದವುಗಳಲ್ಲಿ ಸತು ಮತ್ತು ಅಲ್ಯುಮಿನಿಯಂ ಸೇರಿರುತ್ತದೆ. ಆದುದರಿಂದ ಇಂಥ ಪದ್ಧತಿಯನ್ನು ಕೈಬಿಡುವುದೇ ಒಳ್ಳೆಯದೇನೋ.
ಈಗಿನ ಇಂಗ್ಲೆಂಡಿನ “ತಾಮ್ರದ’ ಪೆನ್ನಿಗಳಲ್ಲಿ ನೂರರಲ್ಲಿ ಬರೀ 6 ರಷ್ಟು ಅಂಶ ಮಾತ್ರ ತಾಮ್ರವಾಗಿದ್ದು, ಉಳಿದದ್ದು “ಕೋಟೆಡ್ ಸ್ಟೀಲ್” ಇರುವುದರಿಂದ ಈ ದುಡ್ಡಿನ ಮರಗಳ ಫೋಟೋಗಳನ್ನು ನೋಡಿದರೆ ಅವೆಲ್ಲ ವಿವಿಧ ಲೋಹಗಳ ನಂಜಿನಿದ್ದ ಸತ್ತು ಕೊರಡಾಗಿರುವುದನ್ನು ಕಾಣುತ್ತೇವೆ. ನಾನು ಮೊನ್ನೆ ನೋಡಿದ ಮರವೂ ಹಾಗೆಯೇ ಇದೆ! ದುಡ್ಡು ದೊಡ್ಡಪ್ಪ ಆಗಿರದಿದ್ದರೂ ಮರಗಳಿಗೆ ವಿಷವಪ್ಪ!
ಡಾ| ಶ್ರೀವತ್ಸ ದೇಸಾಯಿ,
ಡೋಂಕಾ ಸ್ಟರ್