Advertisement

ರೆಸಾರ್ಟ್‌ನಿಂದ ಸಿಎಂ ಹಣ ರವಾನೆ: ಎಚ್‌ಡಿಕೆ ಆರೋಪ

06:45 AM Apr 01, 2018 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ರೆಸಾರ್ಟ್‌ನಲ್ಲಿ ಕುಳಿತುಕೊಂಡು ಮೈಸೂರು ಕ್ಷೇತ್ರಕ್ಕೆ ಹಣ ರವಾನಿಸುವ ಕೆಲಸ ಮಾಡುತ್ತಿದ್ದಾರೆಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ರೆಸಾರ್ಟ್‌ನಲ್ಲಿ ಬೀಡುಬಿಟ್ಟು ಕಂತೆ ಕಂತೆ ಹಣ ಎಣಿಸಿ, ಮೈಸೂರು ಜಿಲ್ಲೆಗೆ ರವಾನಿಸುತ್ತಿದ್ದಾರೆ. ಪೊಲೀಸ್‌ ವಾಹನದ ಮೂಲಕ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಹಾರ ಧಾನ್ಯ ಕಳುಹಿಸುತ್ತಿದ್ದು, ಅಲ್ಲಿನ ಗ್ರಾಮೀಣ ಪ್ರದೇಶದ ಜನರಿಗೆ ಸದ್ದಿಲ್ಲದೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ ಎಂದರು.

ಚುನಾವಣಾ ಆಯೋಗ ಸುಮ್ಮನೆ ಅಲ್ಲೊಂದು ಲಕ್ಷ, ಇಲ್ಲೊಂದು ಲಕ್ಷ ಅಕ್ರಮ ಹಣ ಹಿಡಿಯುವುದನ್ನು ಬಿಟ್ಟು ಮುಖ್ಯಮಂತ್ರಿ ಬಗ್ಗೆ ಕಣ್ಣಿಡಲು ಒಂದು ತಂಡ ಬಿಡಬೇಕು. ಆಗ, ಅವರ ಅಕ್ರಮ ಸಂಪಾದನೆಯ ಕೋಟಿ ಕೋಟಿ ರೂ. ಸಿಕ್ಕಿ ಬೀಳಲಿದೆ, ಆದರೆ ಅದನ್ನು ಆಯೋಗ ಮಾಡುತ್ತಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next