Advertisement

Money laundering case: ಇಡಿಯಿಂದ ಬಿಷಪ್‌ ಬಂಧನ

11:15 PM Apr 13, 2023 | Team Udayavani |

ಭೋಪಾಲ್‌: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಪ್ರದೇಶದ ಪದಚ್ಯುತ ಬಿಷಪ್‌ ಒಬ್ಬರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

Advertisement

ಜಬಲ್ಪುರ್‌ನ ಸಿಎನ್‌ಐನಿಂದ (ಚರ್ಚ್‌ ಆಫ್ ನಾರ್ಥ್ ಇಂಡಿಯಾ) ವಜಾಗೊಂಡಿರುವ ಬಿಷಪ್‌ ಪಿ.ಸಿ.ಸಿಂಗ್‌ ಅವರನ್ನು ಬುಧವಾರ ರಾತ್ರಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಕೋರ್ಟ್‌ಗೆ ಗುರುವಾರ ಹಾಜರುಪಡಿಸಲಾಗುವುದು. ಅಲ್ಲದೇ ಇಡಿ ವಶಕ್ಕೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಸಿಂಗ್‌ ಅವರ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಜಾರ್ಖಂಡ್‌ನ‌ ರಾಂಚಿಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿರುವ ಆರೋಪವಿದೆ. ಚರ್ಚ್‌ ನಡೆಸುತ್ತಿದ್ದ ವಿವಿಧ ಶಾಲೆಗಳಲ್ಲಿ 2004-05ರಿಂದ 2011-12ರ ನಡುವೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ 2.70 ಕೋಟಿ ರೂ.ಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಇವರ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next