Advertisement

ಹಣ ವಂಚನೆ: ಆರೋಪಿಗಳ ಸೆರೆ

07:07 PM May 22, 2022 | Team Udayavani |

ಬಾಳೆಹೊನ್ನೂರು: ಚೆನ್ನರಾಯಪಟ್ಟಣ ತಾಲೂಕು ಹಿರೇಸಾವಿಯ ಕೆ.ಇ.ಬಿ ಕಂಟ್ರಾಕ್ಟರ್‌ ವಿಜಯಕುಮಾರ್‌ ಎಂಬುವವರಿಗೆ ಕಲ್ಲೂರು ಮಠದಿಂದ 10ಲಕ್ಷ ಹಣವನ್ನು ಸಾಲ ಕೊಡಿಸುವುದಾಗಿ ತಿಳಿಸಿ ನೂರು ರೂ. ನೋಟುಗಳ 3 ಲಕ್ಷ ರೂ. ಹಣವನ್ನು 500 ರೂ. ನೋಟನ್ನು ಬದಲಿಸಿಕೊಡಬೇಕೆಂದು ಹೇಳಿ ಹಣ ಪಡೆದು ವಂಚನೆ ಮಾಡಿದ ಆರೋಪಿಗಳನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪ್ರಕರಣದ ಸಂಬಂಧ ಮೇ 3 ರಂದು ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈಜ್ಞಾನಿಕ ತಪಾಸಣೆಯಿಂದ ಆರೋಪಿಗಳ ಮಾಹಿತಿ ಪಡೆದು ಎನ್‌.ಆರ್‌. ಪುರ ಬೈಪಾಸ್‌ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಬೀರೂರಿನ ಕೋಡಿಹಳ್ಳಿಯ ಶ್ರೀಧರ್‌ ಯಾನೆ ಸಿದ್ದೇಶ್‌, ತಿಪಟೂರಿನ ಮಂಜುನಾಥ್‌, ಮಲ್ಲೇಶ್‌, ಕಿರಣ್‌ ಅವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ಹಾಗೂ ಸ್ವಿಫ್ಟ್‌ ಕಾರು ಮತ್ತು 2 ಲಕ್ಷ 40 ಸಾವಿರು ರೂ.ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಠಾಣಾಧಿಕಾರಿ ನಿತ್ಯಾನಂದ ಗೌಡ, ಪ್ರೊಬೆಶನರಿ ಠಾಣಾಧಿಕಾರಿಗಳಾದ ಅಭಿನಂದನ್‌, ಆದರ್ಶ, ಸಿಬ್ಬಂದಿ ನಾಗರಾಜ್‌, ಪ್ರದೀಪ್‌, ಸ್ವಾಮಿ, ಶಶಿ, ಸುನಿಲ್‌ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next