Advertisement

ಗೋವಾ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಅಸ್ಸಾಂನಿಂದ ಹಣ: ಚೋಡಣಕರ್

06:40 PM Sep 22, 2022 | Team Udayavani |

ಪಣಜಿ: ಕಾಂಗ್ರೆಸ್ ನ 11 ಮಂದಿ ಶಾಸಕರನ್ನೂ  ಪಕ್ಷಕ್ಕೆ ಎಳೆದುಕೊಳ್ಳುವುದು ಬಿಜೆಪಿಯ ಮೂಲ ಯೋಜನೆಯಾಗಿತ್ತು. ಅದಕ್ಕಾಗಿ ಅಪಾರ ಹಣವನ್ನೂ ನೀಡಲಾಗಿತ್ತು ಎಂದು ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಗಿರೀಶ್ ಚೋಡಣಕರ್ ಆರೋಪಿಸಿದ್ದಾರೆ.

Advertisement

ಸುದ್ಧಿಗಾರರೊಂದಿಗೆ ಮಾತನಾಡಿ, ಗೋವಾದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ 8 ಶಾಸಕರು ಬಿಜೆಪಿ ಸೇರಿದ್ದು,ರಾಜಕಾರಣಿಯೊಬ್ಬರು ಕೆಲವು ಶಾಸಕರಿಗೆ ಹಣದ ಚೀಲಗಳನ್ನು ಬಹಿರಂಗಪಡಿಸಿದ್ದರು.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪಕ್ಷಾಂತರದ ಜವಾಬ್ದಾರಿ ನೀಡಿದ್ದರಿಂದ ಶಾಸಕರನ್ನು ಖರೀದಿಸಲು ಅಸ್ಸಾಂನಿಂದ ಹಣ ಬಂದಿದೆ ಎಂದರು.

ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾವಣೆಯ ನಂತರ ಪಕ್ಷ ತೊರೆಯುವುದಿಲ್ಲ ಎಂದು ದೇವಸ್ಥಾನ ಮತ್ತು ಚರ್ಚ್ ನಲ್ಲಿ  ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಶಾಸಕರು ಪಕ್ಷ ಬದಲಿಸಿ ಬೇರೆ ಭಾಷೆ ಮಾತನಾಡುತ್ತಿದ್ದಾರೆ. ದಿಗಂಬರ ಕಾಮತ್ ರವರು ಅಪಾರ ದೈವ ಭಕ್ತರಾಗಿದ್ದರೂ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಯ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹಣ ಪಡೆದಿರುವುದಾಗಿ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಮಾಜಿ ಶಾಸಕ ಆಗ್ನೆಲ್ ಫರ್ನಾಂಡೀಸ್ ನನ್ನ ಮೇಲೆ ಆರೋಪ ಮಾಡಿದ್ದು, ದೇವಸ್ಥಾನಕ್ಕೆ ಬರಲಿ ಎಂದು ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿದ್ದೇನೆ ಮತ್ತು ಅವರೇ ಸ್ಥಳವನ್ನು ನಿರ್ಧರಿಸಬೇಕು. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಚೋಡಣಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next