Advertisement

ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ರಾಯಚೂರಿನ ಯುವತಿಗೆ 2.69 ಲಕ್ಷ ರೂ. ವಂಚನೆ

03:20 PM Oct 06, 2020 | keerthan |

ರಾಯಚೂರು: ಹಿಂದಿಯ ಖಾಸಗಿ ವಾಹಿನಿಯಲ್ಲಿ ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋ ಹೆಸರಲ್ಲಿ ರಾಯಚೂರಿನ ಯುವತಿಗೆ ಲಕ್ಷಾಂತರ ರೂ.  ವಂಚಿಸಲಾಗಿದೆ.

Advertisement

ನಗರದ ಆಶ್ರಯ ಕಾಲೋನಿಯ ನಸೀಮಾ ಮಹೆಬೂಬ್ ಬರೋಬ್ಬರಿ 2,69,050 ರೂ. ಕಳೆದುಕೊಂಡಿದ್ದಾರೆ. ಮನೆಗೆಲಸ ಮಾಡಿ ಜೀವದೂಡುತ್ತಿದ್ದ ನಸಿಮಾ ಹಣದಾಸೆಗೆ ವಂಚನೆಗೆ ಒಳಗಾಗಿದ್ದಾರೆ.

ಸೆ.23ರಿಂದ 29ರವರೆಗೆ ವಿಜಯ ಕುಮಾರ್ ಎನ್ನುವ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದಾರೆ. ರಿಯಾಲಿಟಿ ಶೋದಲ್ಲಿ ನೇರವಾಗಿ ಪಾಲ್ಗೊಳ್ಳಲು ಲಕ್ಕಿ ಡ್ರಾ ನಡೆಸಿದ್ದು, ಅದರಲ್ಲಿ ನಿಮ್ಮ ಹೆಸರು ಆಯ್ಕೆಯಾಗಿದೆ. 25 ಲಕ್ಷ ರೂ. ಬಹುಮಾನ ಬಂದಿದೆ ಎಂದು ವಾಟ್ಸಪ್ ಮೂಲಕ ರವಾನಿಸಿದ್ದಾನೆ.

ಇದನ್ನೂ ಓದಿ:ತನ್ನನ್ನು ಅವಮಾನಿಸಿದ ಪ್ರಶಾಂತ್ ಸಂಬರಗಿಗೆ ತಿರುಗೇಟು ನೀಡಿದ ಡಿಕೆ ರವಿ ಪತ್ನಿ ಕುಸುಮಾ!

ಬಹುಮಾನ ಪಡೆಯಲು 8050 ರೂ.  ಪಾವತಿಸುವಂತೆ ತಿಳಿಸಿದ್ದಾನೆ. ಆತನ ಮಾತು ನಂಬಿ ನಸಿಮಾ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾಳೆ. ಇದಾದ ಬಳಿಕ ಬೇರೆ ಬೇರೆ ಶುಲ್ಕಗಳೆಂದು ಬೇರೆ ಖಾತೆಗೆ ನಂಬರ್ ನೀಡಿ ಬರೋಬ್ಬರಿ 2,69,050 ರೂ. ಹಾಕಿಸಿಕೊಂಡಿದ್ದಾನೆ.

Advertisement

ಬಹುಮಾನ ಬೇಕೆಂದರೆ ಪುನಃ ಹಣ ಪಾವತಿಸುವಂತೆ ಕೇಳಿದಾಗ ನಸಿಮಾ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಈ ಕುರಿತು ಅ.5ರಂದು ಸಿ.ಇ.ಎನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next