Advertisement
ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಜನಿಸಿದ್ದ ಪಾರ್ವತಮ್ಮ ರಾಜ್‌ಕುಮಾರ್ ಅವರು ಬಾಲ್ಯದಿಂದಲೂ ಮೈಸೂರಿನೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇದೇ ಒಡನಾಟದಿಂದಲೇ ಸಮಾಜದ ನಿರ್ಗತಿಕ ಹಾಗೂ ಅಶಕ್ತ ಮಹಿಳೆಯರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಮೈಸೂರಿನಲ್ಲಿ ಹಲವು ವರ್ಷಗಳ ಹಿಂದೆ ಆರಂಭಿಸಿದ್ದ ಶಕ್ತಿಧಾಮದಲ್ಲಿ ನೀರವವîೌನ ಆವರಿಸಿದ್ದು, ಇಲ್ಲಿನ ವಾಸಿಗಳು ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.
Related Articles
Advertisement
ಉದ್ಯೋಗ, ವೃತ್ತಿಪರ ತರಬೇತಿ: ನಾನಾ ಕಾರಣಗಳಿಂದಾಗಿ ಸಮಾಜದಿಂದ ದೂರವಾಗಿ ಶಕ್ತಿಧಾಮದಲ್ಲಿ ಆಶ್ರಯ ಪಡೆದಿದ್ದ ಮಹಿಳೆಯರ ಜೀವನ ನಿರ್ವಹಣೆಗೆ ಅನುಕೂಲವನ್ನು ಕಲ್ಪಿಸಲಾಗುತ್ತಿತ್ತು. ಪ್ರಮುಖವಾಗಿ ಇಲ್ಲಿನ ಮಹಿಳೆಯರಿಗೆ ವಸತಿ, ಊಟ ಸೌಲಭ್ಯಗಳೊಂದಿಗೆ ಉದ್ಯೋಗ ತರಬೇತಿ ಜತೆಗೆ ವೃತ್ತಿಪರ ಶಿಕ್ಷಣವನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಸಹಾಯ ಮಾಡಲಾಗುತ್ತಿತ್ತು.
ಇದರ ಲಾ¸ಪಡೆದ ಅನೇಕ ಮಹಿಳೆಯರು ಪ್ರಸ್ತುತ ಸಂದ¸ìದಲ್ಲಿ ತಮ್ಮ ಸ್ವಂತ ದುಡಿಮೆ ಮೂಲಕ ಸ್ವತಂತ್ರ್ಯವಾಗಿ ಜೀವನ ನಡೆಸುವ ಹಂತಕ್ಕೆ ಬೆಳೆದಿದ್ದಾರೆ. ಇದಲ್ಲದೆ ಶಕ್ತಿಧಾಮದಲ್ಲಿ ಡಾ.ರಾಜ್‌ಕುಮಾರ್ ಅವರ ಹೆಸರಿನಲ್ಲಿ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ ಶಿಬಿರಗಳನ್ನೂ ನಡೆಸುವ ಮೂಲಕ ಸಮಾಜಸೇವೆ ಚಟುವಟಿಕೆಗಳಲ್ಲೂ ಶಕ್ತಿಧಾಮ ಗುರುತಿಸಿಕೊಂಡಿದೆ. ಇದರ ಜತೆಗೆ ಇತ್ತೀಚಿಗೆ ರಾಜ್ಯದ ನಾನಾ ಕಡೆಗಳ ನಿರ್ಗತಿಕ ಮಕ್ಕಳನ್ನು ಕರೆತಂದು ಅವರಿಗೆ ಊಟ, ವಸತಿ ಜತೆಗೆ ಶಿಕ್ಷಣ ನೀಡುವ ಕಾರ್ಯಕ್ರಮವೊಂದನ್ನು ಸಹ ನಡೆಸಲು
ಆತ್ಮಸ್ಥೈರ್ಯ ನೀಡುತ್ತಿದ್ದರು: ನಿರ್ಗತಿಕ ಮಹಿಳೆಯರ ಆಶ್ರಯ ತಾಣವಾಗಿದ್ದ ಶಕ್ತಿಧಾಮಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರು ಹಲವು ಸಂದ¸ìದಲ್ಲಿ ಬೇಟಿ ನೀಡಿದ್ದರು. ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರಿಗೆ ತೆರಳುವ ಸಂದ¸ì ಸೇರಿದಂತೆ ಹಲವು ಕಾರಣಗಳಿಂದ ಮೈಸೂರಿಗೆ ಆಗಮಿಸಿದ ವೇಳೆ ಶಕ್ತಿಧಾಮಕ್ಕೆ ಬರುತ್ತಿದ್ದ ಪಾರ್ವತಮ್ಮ ಅವರು ಅಲ್ಲಿನ ವಾಸಿಗಳೊಂದಿಗೆ ಬೆರೆಯುತ್ತಿದ್ದರು.
ಅಲ್ಲದೆ ಕೌಟುಂಬಿಕ ಸಮಸ್ಯೆ ಸೇರಿದಂತೆ ಇನ್ನಿತರ ತೊಂದರೆಗಳನ್ನು ಎದುರಿಸುತ್ತಿದ್ದ ಮಹಿಳೆಯರ ಪಾಲಿಗೆ ತಾಯಿ ಸ್ಥಾನದಲ್ಲಿ ನಿಂತು ಬುದ್ದಿ ಮಾತುಗಳನ್ನು ಹೇಳಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಇನ್ನೂ ಸಂಸ್ಥೆಯಲ್ಲಿ ನಡೆಯುತ್ತಿದ್ದ ಕಾಂುìಕ್ರಮಗಳು, ಸಬೆಗಳಿಗೂ ಸಹ ಕೆಲವೊಮ್ಮೆ ಬಾಗವಹಿಸುತ್ತಿದ್ದ ಪಾರ್ವತಮ್ಮ ಅವರು 8 ತಿಂಗಳ ಹಿಂದೆ ಕೊನೆಯ ಬಾರಿಗೆ ಶಕ್ತಿಧಾಮಕ್ಕೆ ಬೇಟಿ ನೀಡಿದ್ದರು.
ಶಕ್ತಿಧಾಮದಲ್ಲಿ ಸಂತಾಪ: ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಶ್ರದ್ಧಾಂಜಲಿ ಸಬೆ ನಡೆಸಲಾಯಿತು. ಶಕ್ತಿಧಾಮದ ನಿವಾಸಿಗಳ ಪಾಲಿಗೆ ತಾಯಿಯ ಸ್ಥಾನದಲ್ಲಿದ್ದ ಪಾರ್ವತಮ್ಮ ಅವರ ನಿಧನದಿಂದಾಗಿ ಇಡೀ ಶಕ್ತಿಧಾಮದಲ್ಲಿ ನೀರವವîೌನ ಆವರಿಸಿತ್ತು. ಸಂಸ್ಥೆಯಲ್ಲಿ ನಡೆದ ಶ್ರದ್ಧಾಂಜಲಿ ಸಬೆಯಲ್ಲಿ ಪಾಲ್ಗೊಂಡ ಸಂಸ್ಥೆಯ ಟ್ರಸ್ಟಿಗಳು ಹಾಗೂ ಇನ್ನಿತರರು ಪಾರ್ವತಮ್ಮ ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸನಮ ಸಲ್ಲಿಸಿದರು.
ಇದಲ್ಲದೆ ಮೈಸೂರು ಕನ್ನಡ ವೇದಿಕೆ ಮತ್ತು ರಾಜಕುಮಾರ ಕನ್ನಡ ಸೇನೆಯ ಪದಾಧಿಕಾರಿಗಳು ಪಾರ್ವತಮ್ಮ ರಾಜ್‌ಕುಮಾರ್ ನಿಧಾನಕ್ಕೆ ಸಂತಾಪ ವ್ಯಕ್ತಪಡಿಸಿದರು. ನಗರದ ರಾಜಕುಮಾರ್ ಪಾರ್ಕ್‌ನಲ್ಲಿ ಜಮಾಯಿಸಿದ ಪದಾಧಿಕಾರಿಗಳು ನಿರ್ಮಾಪಕಿ ಹಾಗೂ ಡಾ.ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ವೇಳೆ ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ, ಕನ್ನಡ ಸೇನೆಯ ಮಹದೇವಸ್ವಾಮಿ, ಕೆಪಿಸಿಸಿ ಸದಸ್ಯ ರೇವಣ್ಣ, ಅರವಿಂದ ಶರ್ಮಾ, ಜಯರಾಂ ಇನ್ನಿತರರು ಹಾಜರಿದ್ದರು.
ಬೆಳಗ್ಗಿನ ಪ್ರದರ್ಶನ ರದ್ದು: ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ನಿಧನದ ಹಿನ್ನೆಲೆ ನಗರದ ಬಹುತೇಕ ಚಿತ್ರಮಂದಿರಗಳಲ್ಲಿ ಬುಧವಾರ ಬೆಳಗ್ಗಿನ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಪ್ರಮುಖವಾಗಿ ನಗರದ ವುಡ್‌ಲ್ಯಾಂಡ್, ಶಾಂತಲ, ಗಾಯತ್ರಿ ಚಿತ್ರಮಂದಿರಗಳು ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದುಗೊಳಿಸಿ, ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ಅವರಿಗೆ ಗೌರವ ಸಲ್ಲಿಸಲಾಯಿತು.
* ಸಿ.ದಿನೇಶ್