ಮುಂಬಯಿ: ಖ್ಯಾತ ನಟಿ ಇಲಿಯಾನ ಡಿ’ಕ್ರೂಜ್ ಅವರು ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶುಕ್ರವಾರ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು ನೆಟ್ಟಿಗರ ಗಮನ ಸೆಳೆದಿದ್ದಾರೆ.
“ಇದೆಲ್ಲದರ ಬಗ್ಗೆ…” ಎಂದು ಇಲಿಯಾನಾ ಮೊದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. ಎರಡನೇ ಚಿತ್ರದಲ್ಲಿ ಮುಂದುವರೆಸಿ ಅದರ ಜೊತೆಗೆ LOL ಎಮೋಜಿಯನ್ನು ಸೇರಿಸಿದ್ದಾರೆ. ಏತನ್ಮಧ್ಯೆ, ಇಲಿಯಾನಾ ಅವರು ಪ್ರಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಕಳೆದ ವರ್ಷ ಮಾಲ್ಡೀವ್ಸ್‌ನಲ್ಲಿ ನಡೆದ ಕತ್ರಿನಾ ಅವರ ಬರ್ತ್ ಡೇ ಆಚರಣೆಯಲ್ಲಿ ನಟಿ ಪಾಲ್ಗೊಂಡು ಸುದ್ದಿಯಾಗಿದ್ದರು.
35 ರ ಹರೆಯದ ಇಲಿಯಾನ 18 ಎಪ್ರಿಲ್ 2023 ರಂದು ತನ್ನ ಮೊದಲ ಗರ್ಭಧಾರಣೆಯನ್ನು ಬಹಿರಂಗಪಡಿಸಿದ್ದರಾದರೂ, ತಂದೆಯ ಗುರುತನ್ನು ರಹಸ್ಯವಾಗಿಟ್ಟಿದ್ದಾರೆ.
ನಟಿ ಆಸ್ಟ್ರೇಲಿಯಾದ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಅವರು ಮದುವೆಯಾಗಿದ್ದಾರೆ ಎಂಬ ವದಂತಿಗಳಿದ್ದವು. 28 ಆಗಸ್ಟ್ 2019 ರಂದು, ಭಾರತದ ಮಾಧ್ಯಮಗಳು ಜೋಡಿ ಬೇರ್ಪಟ್ಟ ಸುದ್ದಿಯನ್ನು ಪ್ರಸಾರ ಮಾಡಿದ್ದವು.