Advertisement

OTT: ಮಾಲಿವುಡ್‌ನಲ್ಲಿ ಸದ್ದು ಮಾಡಿದ ಫಹಾದ್‌ ಫಾಸಿಲ್‌ ʼಆವೇಶಮ್‌ʼ ಈ ದಿನ ಓಟಿಟಿಗೆ ಎಂಟ್ರಿ?

04:09 PM May 06, 2024 | Team Udayavani |

ಕೊಚ್ಚಿ: ಮಾಲಿವುಡ್‌ ಈ ವರ್ಷ ಸದ್ದು ಮಾಡಿದ ಸಿನಿಮಾಗಳ ಪೈಕಿ ಒಂದಾಗಿರುವ ʼ ಆವೇಶಮ್ʼ ಓಟಿಟಿ ರಿಲೀಸ್‌ ಬಗ್ಗೆ ಚರ್ಚೆ ಶುರುವಾಗಿದೆ.

Advertisement

ʼರೋಮಾಂಚಮ್ʼ ಹಿಟ್‌ ಬಳಿಕ ನಿರ್ದೇಶಕ ಜಿತು ಮಾಧವನ್ ʼಆವೇಶಮ್‌ʼ ಮೂಲಕ ಮತ್ತೊಂದು ಬ್ಲಾಕ್‌ ಬಸ್ಟರ್‌ ಹಿಟ್‌ ಕೊಟ್ಟಿದ್ದಾರೆ.

ಫಹಾದ್‌ ಫಾಸಿಲ್‌ ಅಭಿನಯದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದ್ದು, ಲೋಕಲ್‌ ಡಾನ್‌ ಆಗಿ ʼರೌಡಿ ರಂಗʼನ ಅವತಾರದಲ್ಲಿ ಫಾಫಾ ಮಿಂಚಿದ್ದಾರೆ. ಅವರ ಕಾಮಿಡಿ ಟೈಮಿಂಗ್‌ ಹಾಗೂ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಾಕ್ಸ್‌ ಆಫೀಸ್‌ ನಲ್ಲಿ 140 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡುವ ಮೂಲಕ ಸಿನಿಮಾ ಬ್ಲಾಕ್‌ ಬಸ್ಟರ್‌ ಲಿಸ್ಟ್‌ ಗೆ ಸೇರಿದೆ.

ಇದನ್ನೂ ಓದಿ: ವಿಕ್ರಮ್‌ ಪುತ್ರನ ಜೊತೆ ಮಾರಿ ಸೆಲ್ವರಾಜ್‌ ಸಿನಿಮಾ: ʼಬೈಸನ್‌ʼ ಫಸ್ಟ್‌ ಲುಕ್‌ ಔಟ್

ಏ.11 ರಂದು ಸಿನಿಮಾ ಥಿಯೇಟರ್‌ ಗೆ ಎಂಟ್ರಿ ಆಗಿತ್ತು. ರಿಲೀಸ್‌ ಆದ ಕೆಲವೇ ದಿನದಲ್ಲಿ ಸಿನಿಮಾದ ಡೈಲಾಗ್ಸ್‌ ಹಾಗೂ ಹಾಡುಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಸಿನಿಮಾ ಓಟಿಟಿಯತ್ತ ಮುಖ ಮಾಡಲಿದೆ.

Advertisement

ಮೂಲಗಳ ಪ್ರಕಾರ ಇದೇ ಮೇ.9 ರಿಂದ ʼಆವೇಶಮ್‌ʼ ಅಮೇಜಾನ್‌ ಪ್ರೈಮ್‌ ನಲ್ಲಿ ಸ್ಟ್ರೀಮ್‌ ಆಗಲಿದೆ ಎನ್ನಲಾಗಿದೆ. ಆದರೆ ಇದುವರೆಗೆ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದೇ ದಿನ ಬಹುತೇಕವಾಗಿ ಸಿನಿಮಾ ಓಟಿಟಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಸಿನಿಮಾದಲ್ಲಿ ಸಜಿನ್ ಗೋಪು, ಮನ್ಸೂರ್ ಅಲಿ ಖಾನ್, ಆಶಿಶ್ ವಿದ್ಯಾರ್ಥಿ, ಹಿಪ್ಜ್‌ಸ್ಟರ್, ಮಿಥುನ್ ಜೈ ಶಂಕರ್, ರೋಷನ್ ಶಾನವಾಸ್, ಮಿಧುಟ್ಟಿ ಮುಂತಾದವರು ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next