Advertisement

ಅಂತೂ ಬೋನಿಗೆ ಬಿದ್ದ ಚಿರತೆ

01:30 PM May 13, 2020 | Naveen |

ಮೊಳಕಾಲ್ಮೂರು: ತಾಲೂಕಿನ ಹಾನಗಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಳೇಕೆರೆ ಗ್ರಾಮದ ಬಳಿ ಪ್ರತ್ಯಕ್ಷವಾಗಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

Advertisement

ಹಳೇಕೆರೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದ್ದ ಕಾರಣ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹಾಗಾಗಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿತ್ತು. ಮಂಗಳವಾರ ಬೆಳಿಗ್ಗೆ 6 ಗಂಟೆ ವೇಳೆಗೆ ಆಹಾರ ಅರಸಿ ಬಂದ ಎರಡು ಚಿರತೆಗಳಲ್ಲಿ ಒಂದು ಚಿರತೆ ಬೋನಿಗೆ ಬಿದ್ದಿದ್ದು, ಮತ್ತೊಂದು ಚಿರತೆ ತಪ್ಪಿಸಿಕೊಂಡಿದೆ. ಸೆರೆಯಾದ ಚಿರತೆಯನ್ನು ಜಿಲ್ಲಾ ಅರಣ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಚಿತ್ರದುರ್ಗದ ಆಡುಮಲ್ಲೇಶ್ವರ ಮೃಗಾಲಯಕ್ಕೆ ರವಾನಿಸಲಾಯಿತು.

ಈ ಸಂದರ್ಭದಲ್ಲಿ ಪಿಎಸ್‌ಐ ಎಂ.ಕೆ. ಬಸವರಾಜ್‌, ಎಎಸ್‌ಐಗಳಾದ ಜಯಪ್ಪ, ಜಯಣ್ಣ, ಸಿಬ್ಬಂದಿ ಬಾಷಾ, ರಮೇಶ್‌, ಭೀಮಣ್ಣ, ಅರುಣ್‌ ಕುಮಾರ್‌, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು. ಮೊಳಕಾಲ್ಮೂರು ಪಟ್ಟಣದ ಕಲ್‌ಗೋಡ್‌ ಮೊಹಲ್ಲಾ ಬಳಿಯ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ 3 ಚಿರತೆಗಳ ಪೈಕಿ ಒಂದನ್ನು ಪಟ್ಟಣದಲ್ಲಿ ಹಿಡಿಯಲಾಗಿತ್ತು. ಮತ್ತೂಂದನ್ನು ಹಳೇಕೆರೆ ಗ್ರಾಮದ ಬಳಿಯಲ್ಲಿ ಸೆರೆ ಹಿಡಿಯಲಾಗಿದ್ದು, ತಪ್ಪಿಸಿಕೊಂಡಿರುವ ಮೂರನೇ ಚಿರತೆಯನ್ನು ತ್ವರಿತವಾಗಿ ಸೆರೆ ಹಿಡಿದು ಜನರ ಆತಂಕವನ್ನು ನಿವಾರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಎಂ.ಪಿ. ನಾಗೇಂದ್ರ ನಾಯಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next