Advertisement

ಅರ್ಜಿ ಫಾರ್ಮ್ಗಾಗಿ ಜನರ ಹರಸಾಹಸ!

01:22 PM Dec 04, 2019 | |

ಮೊಳಕಾಲ್ಮೂರು: ಪಟ್ಟಣದ ವ್ಯಾಪ್ತಿಯಲ್ಲಿರುವ ನಿವೇಶನ ಮತ್ತು ಮನೆ ಯಿಲ್ಲದ ವಸತಿ ರಹಿತ ನಾಗರಿಕರು ಆಶ್ರಯ ಮನೆ ಮತ್ತು ನಿವೇಶನ ಸೌಲಭ್ಯಕ್ಕಾಗಿ ಅರ್ಜಿ ಫಾರ್ಮ್ ಪಡೆಯಲು ಪಟ್ಟಣ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಸಾರ್ವಜನಿಕರ ಹರಸಾಹಸ ಪಡುವಂತಾಗಿದೆ.

Advertisement

ಡಿ.2ರಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವೇಶನ ಮತ್ತು ಮನೆ ಹೊಂದಿರದ ಸಾರ್ವಜನಿಕರು ಪಪಂ ವತಿಯಿಂದ ಆಶ್ರಯ ಮನೆ ಮತ್ತು ನಿವೇಶನ ನೀಡಲು ಡಿ.3ರಿಂದ ಸರ್ವೇ ಕಾರ್ಯ ನಡೆಯುತ್ತಿದ್ದು, ಪಟ್ಟಣದ ವ್ಯಾಪ್ತಿಯಲ್ಲಿರುವ ನಿವೇಶನ ಮತ್ತು ಮನೆ ಹೊಂದಿರದ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಅರ್ಜಿ ಪಡೆದು ಡಿ.18 ರೊಳಗಾಗಿ ಕಚೇರಿಗೆ ಅರ್ಜಿ ಸಲ್ಲಿಸಬೇಕೆಂದು ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಆದೇಶ ಹೊರ ಬಂದ ಮರುದಿನವೇ ಪಟ್ಟಣದ ವ್ಯಾಪ್ತಿಯ ಸಾವಿರಾರು ನಾಗರಿಕರು ಕಾರ್ಯಾಲಯಕ್ಕೆ ಜಮಾಯಿಸಿ ಸರದಿ ಸಾಲಲ್ಲಿ ನಿಂತು 10 ರೂ. ನೀಡಿ ಒಂದು ಅರ್ಜಿ ಫಾರ್ಮ್ ಪಡೆಯಲು ನಾಗರಿಕರು ಹರಸಾಹಸ ಪಡುವಂತಾಗಿದೆ.

ವಸತಿ ರಹಿತ ಮಹಿಳೆಯರು, ವಯೋವೃದ್ಧರು ಸೇರಿದಂತೆ ಸುಮಾರು ಸಾವಿರಾರು ನಾಗರಿಕರು ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಜಮಾಯಿಸಿ ಸರದಿ ಸಾಲಲ್ಲಿ ನಿಂತು ಅರ್ಜಿ ಪಡೆದಿದ್ದಾರೆ. ಈ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಡಿ.18 ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next