Advertisement
ತಾಲೂಕಿನ ನಂದಿ ಗಿರಿಧಾಮದಲ್ಲಿ ಭಾನುವಾರ ನಡೆದ ಚಿಕ್ಕಬಳ್ಳಾಪುರ ಕ್ಷೇತ್ರದ ಪ್ರಮುಖ ಮುಖಂಡರ ಸಭೆಯಲ್ಲಿ ಸಂಸದರಾದ ಡಾ.ಎಂ.ವೀರಪ್ಪಮೊಯ್ಲಿ, ಶಾಸಕರಾದ ಡಾ.ಕೆ.ಸುಧಾಕರ್ ಒಳಗೊಂಡಂತೆ ಕ್ಷೇತ್ರದ ಎಲ್ಲಾ ಮುಖಂಡರು ಭಾಗವಹಿಸಿ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಹಿರಿಯರಾದ ಮೊಯ್ಲಿಯವರೇ ಸ್ಪರ್ಧಿಸಬೇಕೆಂದು ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.
Related Articles
Advertisement
ಸಭೆಯಲ್ಲಿ ಹರ್ಷಮೊಯ್ಲಿ ಸೇರಿದಂತೆ ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಪಿಕಾರ್ಡ್ ಬ್ಯಾಂಕ್ ನಾಗೇಶ್, ನಗರಭಾ ಸದಸ್ಯ ರಫೀಕ್, ಅಲ್ಪಸಂಖ್ಯಾತರ ಹಿರಿಯ ಮುಖಂಡ ಅಬ್ದುಲ್ ರವೂಫ್, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೋಹನ್ ರೆಡ್ಡಿ, ಎಸ್.ಕೆ.ಎಲ್.ದ್ಯಾವಣ್ಣ, ಕೋಚಿಮುಲ್ ನಾಮ ನಿರ್ದೇಶಿತ ಸದಸ್ಯ ಮಂಚೇನಹಳ್ಳಿ ಸುಬ್ಟಾರೆಡ್ಡಿ, ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.
ಅಡ್ಡಗಲ್ ಶ್ರೀಧರ್ ಹುದ್ದೆಗೆ ಕುತ್ತು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸುಧಾಕರ್ ವಿರುದ್ಧವಾಗಿ ಕೆಲಸ ಮಾಡಿದ ಅಡ್ಡಗಲ್ ಶ್ರೀಧರ್‌ಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದಕ್ಕೆ ಶಾಸಕ ಸುಧಾಕರ್ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಅವರನ್ನು ಕೆಪಿಸಿಸಿಯಿಂದ ವಜಾಗೊಳಿಸುವಂತೆ ಶಾಸಕರ ಬೆಂಬಲಿಗರು ಸಂಸದ ಮೊಯ್ಲಿ ಅವರಿಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೊಯ್ಲಿ ಆತನ ಆಯ್ಕೆಯಲ್ಲಿ ನನ್ನದೇನು ಪಾತ್ರವಿಲ್ಲ.
ಈ ಹಿಂದೆ ಯುವ ಕಾಂಗ್ರೆಸ್‌ನಲ್ಲಿದ್ದು ಈಗ ಮಂತ್ರಿಯಾಗಿರುವ ಕೆಲವರು ದೆಹಲಿಯವರೆಗೂ ಸಂಪರ್ಕ ಇಟ್ಟುಕೊಂಡು ಆತನನ್ನು ನೇಮಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಕೃಷ್ಣಬೈರೇಗೌಡ ವಿರುದ್ಧ ಟೀಕಿಸಿದರು. ನೀವು ಈಗಲೇ ಅರ್ಹ ವ್ಯಕ್ತಿಯನ್ನು ಸೂಚಿಸಿ ನೇಮಕಕ್ಕೆ ಈಗಲೇ ಶಿಫಾರಸ್ಸು ಪತ್ರ ನೀಡುತ್ತೇನೆ. ನಿಮ್ಮ ವಿರುದ್ಧ ಕೆಲಸ ಮಾಡಿದ ವ್ಯಕ್ತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಡ್ಡಗಲ್ ಶ್ರೀಧರ್ ವಿರುದ್ಧ ಮೊಯ್ಲಿ ಸಭೆಯಲ್ಲಿ ಕಿಡಿಕಾರಿದರು.