ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ತಂಡದ ಎಡಗೈ ವೇಗದ ಬೌಲರ್ ಮೊಹ್ಸಿನ್ ಖಾನ್ 2023ನೇ ಸಾಲಿನ ಐಪಿಎಲ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಗಾಯಾಳಾಗಿದ್ದರೂ ಮೊಹ್ಸಿನ್ ಖಾನ್ ಲಕ್ನೋ ತಂಡದೊಂದಿಗೆ ಇದ್ದಾರೆ. ಅಧಿಕೃತ ಪ್ರಕಟಣೆ ಹೊರಬೀಳುವುದಷ್ಟೇ ಬಾಕಿ. ಕಳೆದ ಋತುವಿನಲ್ಲಿ ಮೊಹ್ಸಿನ್ ಖಾನ್ 5.97ರಷ್ಟು ಇಕಾನಮಿ ರೇಟ್‌ನಲ್ಲಿ 14 ವಿಕೆಟ್ ಉರುಳಿಸಿದ್ದರು. ಇವರ ಜಾಗಕ್ಕೆ ಮೂವರು ರೇಸ್‌ನಲ್ಲಿದ್ದಾರೆ-ಧವಳ್ ಕುಲಕರ್ಣಿ, ಆಕಾಶ್ ಸಿಂಗ್ ಮತ್ತು ವರುಣ್ ಏರಾನ್. ಇವರಲ್ಲೊಬ್ಬರು ಆಯ್ಕೆ ಆಗಬಹುದೆಂದು ಮೂಲಗಳು ತಿಳಿಸಿವೆ.
Advertisement