ಭಾರತದಾದ್ಯಂತ ಸದ್ದು ಮಾಡಿರುವ “ದೃಶ್ಯಂ’ ಸಿನಿಮಾ ಹಾಲಿವುಡ್‌ಗೆ ರಿಮೇಕ್ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಇತ್ತೀಚೆಗೆ ಪನೊರಮ ಸ್ಟುಡಿಯೋಸ್ ಇಂಟರ್‌ನ್ಯಾಷನಲ್ ವಿದೇಶ ಭಾಷೆಯ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ.
Advertisement
ಹೀಗಾಗಿ ಹಾಲಿವುಡ್‌ನಲ್ಲೂ “ದೃಶ್ಯಂ’ ಹಾಗೂ “ದೃಶ್ಯಂ 2′ ಸಿರೀಸ್ ನಿರ್ಮಾಣ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮಲಯಾಳಂ ಭಾಷೆಯಲ್ಲಿ ಮೂಲ ಚಿತ್ರ ನಿರ್ಮಾಣವಾಗಿದ್ದು, ಸೂಪರ್ ಸ್ಟಾರ್ ಮೋಹನ್ ಲಾಲ್ “ಜಾರ್ಜ್ ಕುಟ್ಟಿ’ ಪಾತ್ರದಲ್ಲಿ ಎಲ್ಲರ ಮನಸೆಳೆದಿದ್ದರು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಸೂಪರ್ ಹಿಟ್ ಆಗಿತ್ತು.