Advertisement

ಟಿ. ಮೋಹನದಾಸ್‌ ಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆ

12:46 AM Aug 13, 2022 | Team Udayavani |

ಉಡುಪಿ: ಇತ್ತೀಚೆಗೆ ಅಗಲಿದ ಮಣಿಪಾಲ ಪೈ ಕುಟುಂಬದ ಹಿರಿಯರಾದ “ಉದಯವಾಣಿ’ ಸಂಸ್ಥಾಪಕ ಟಿ. ಮೋಹನದಾಸ್‌ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಮಿತ್ರ ಭೋಜನ ಕಾರ್ಯಕ್ರಮ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

Advertisement

ಪೈಯವರ ಭಾವ, ಅಮೆರಿಕದ ವೈದ್ಯ ಡಾ| ಬಾಲಕೃಷ್ಣ ಪೈಯವರು ನುಡಿನಮನ ಸಲ್ಲಿಸಿ, ಮೋಹನದಾಸ್‌ ಪೈಯವರು ಸ್ವಯಂ ಶಿಸ್ತಿನ ವ್ಯಕ್ತಿಯಾಗಿದ್ದರು. ತಮ್ಮ ನಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ದಾರಿಯನ್ನು ಅವರು ತೋರಿದ್ದಾರೆ ಎಂದರು. ಅವರನ್ನು ಬಲ್ಲ ಸಾರ್ವಜನಿಕರು ಇದುವರೆಗೆ ತೋರಿದ ಸಹಕಾರ, ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು. ಮೋಹನ್‌ದಾಸ್‌ ಪೈ ಅವರ ಸಹೋದರರಾದ ಟಿ. ನಾರಾಯಣ ಪೈ, ಟಿ. ಅಶೋಕ್‌ ಪೈ, ಟಿ. ಸತೀಶ್‌ ಯು. ಪೈ, ಸಹೋದರಿ ಡಾ| ಇಂದುಮತಿ ಪೈ ಸಹಿತ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌, ಮಾಹೆ ವಿ.ವಿ.ಯ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ, ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಸಿಇಒ ಮತ್ತು ಎಂಡಿ ವಿನೋದ್‌ ಕುಮಾರ್‌, ಉಡುಪಿ ಲಕ್ಷ್ಮೀವೆಂಕಟೇಶ ದೇವಸ್ಥಾನದ ಆಡಳಿತೆ ಮೊಕ್ತೇಸರ ಪಿ.ವಿ. ಶೆಣೈ, ಮೊಕ್ತೇಸರರಾದ ಪುಂಡಲೀಕ ಕಾಮತ್‌, ರೋಹಿತಾಕ್ಷ ಪಡಿಯಾರ್‌, ಎ. ಗಣೇಶ್‌ ಕಿಣಿ, ಎಂ. ವಿಶ್ವನಾಥ ಭಟ್‌, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ, ಕ್ರೀಡಾಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ, ಪ್ರಕಾಶ್‌ ರೀಟೈಲ್‌ ಪ್ರೈ.ಲಿ.ನ ಆಡಳಿತ ನಿರ್ದೇಶಕ ಸೂರ್ಯಪ್ರಕಾಶ್‌, ನಿರ್ದೇಶಕರಾದ ಅಶೋಕ್‌, ಹರೀಶ್‌, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶ್ಯಾನುಭೋಗ್‌, ಸೆನ್‌ ಠಾಣೆಯ ನಿರೀಕ್ಷಕ ಮಂಜುನಾಥ್‌, ಪೈ ಎಲೆಕ್ಟ್ರಾನಿಕ್ಸ್‌ನ ಅಜಿತ್‌ ಪೈ, ದ.ಕ. ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಸಂಚಾಲಕ ಡಾ| ಜಿ. ಶಂಕರ್‌, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ, ಪುರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್‌, ಚೇಂಬರ್‌ ಆಫ್ ಕಾಮರ್ಸ್‌ ಅಧ್ಯಕ್ಷ ಅಂಡಾರು ದೇವಿಪ್ರಸಾದ್‌ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ನಗರಸಭೆ ಸದಸ್ಯರಾದ ವಿಜಯಲಕ್ಷ್ಮೀ, ಸಂಪಾವತಿ, ಮಂಜುನಾಥ ಮಣಿಪಾಲ, ಉದ್ಯಮಿಗಳಾದ ಕಿಶೋರ್‌ ಆಳ್ವ, ಜೆರ್ರಿ ವಿನ್ಸೆಂಟ್‌ ಡಯಾಸ್‌, ಸಾಯಿರಾಧಾ ಮನೋಹರಶೆಟ್ಟಿ, ಶ್ರೀನಾಗೇಶ್‌ ಹೆಗ್ಡೆ, ಪುರುಷೋತ್ತಮ ಶೆಟ್ಟಿ, ಜೇಸನ್‌ ಡಯಾಸ್‌, ಗ್ಲೆನ್‌ ಡಯಾಸ್‌, ಪ್ರಸಾದ್‌ ಕಾಂಚನ್‌, ಡಯಾನ ವಿಟಲ ಪೈ, ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ| ಜಿ. ಚಂದ್ರಶೇಖರ್‌, ವೈದ್ಯ ಡಾ| ಮಂಜುನಾಥ ಹಂದೆ ಸಹಿತ ಹಲವು ಗಣ್ಯರು ಆಗಮಿಸಿದ್ದರು. ಮಣಿಪಾಲದ ಶಿಕ್ಷಣ, ಹಣಕಾಸು ಸಂಸ್ಥೆಗಳ ಮುಖ್ಯಸ್ಥರು, ಸಿಬಂದಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next