Advertisement

ಮತ್ತೆ ಬುದ್ದಿ ತೋರಿಸಿದ ಆಸೀಸ್ ಫ್ಯಾನ್ಸ್: ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ, ದೂರು ದಾಖಲು

04:12 PM Jan 09, 2021 | Team Udayavani |

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವಿವಾದಗಳ ಗೂಡಾಗಿದೆ. ಕ್ವಾರಂಟೈನ್ ಗೊಂದಲ, ವಿವಾದದ ನಂತರ ಇದೀಗ ಜನಾಂಗೀಯ ನಿಂದನೆ ಆರೋಪ ಕೇಳಿಬಂದಿದೆ.

Advertisement

ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ವಿರುದ್ಧ ಆಸೀಸ್ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಈ ಘಟನೆ ನಡೆದಿದೆ.

ದಿನದ ಅಂತಿಮ ಸೆಶನ್ ನಲ್ಲಿ ಮೊಹಮ್ಮದ್ ಸಿರಾಜ್ ಫೈನ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಕೆಲವು ಆಸೀಸ್ ಅಭಿಮಾನಿಗಳು ಭಾರತೀಯ ಆಟಗಾರನನ್ನು ನಿಂದಿಸಿದ್ದಾರೆ. ಕುಡಿದು ನಶೆಯಲ್ಲಿದ್ದ ಅಭಿಮಾನಿಗಳು ಅವಾಚ್ಯ ಶಬ್ಧಗಳಿಂದ ಸಿರಾಜ್ ರನ್ನು ನಿಂದಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:ಸಿಡ್ನಿ ಟೆಸ್ಟ್ ನಲ್ಲಿ ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ: ಮ್ಯಾಜಿಕ್ ನಡೆದರಷ್ಟೇ ಸಿಗಲಿದೆ ಜಯ

ದೂರು ದಾಖಲು: ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಮತ್ತು ತಂಡದ ಹಿರಿಯ ಸದಸ್ಯರು ಈ ವಿಚಾರವನ್ನು ಅಂಪಾಯರ್ ಗಳ ಗಮನಕ್ಕೆ ತಂದಿದ್ದಾರೆ. ಈ  ಬಗ್ಗೆ ದೂರು ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next