ನವದೆಹಲಿ: ಆರ್ ಸಿಬಿ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ವ್ಯಕ್ತಿಯೊಬ್ಬ ಫೋನ್ ಮೂಲಕ ಸಂಪರ್ಕಿಸಿ ಬೆಂಗಳೂರು ತಂಡದ ಬಗ್ಗೆ ಮಾಹಿತಿ ಕೇಳಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೊಹಮ್ಮದ್ ಸಿರಾಜ್ ವಿಚಾರವನ್ನು ಹೇಳಿದ್ದಾರೆ.
ಮೊಹಮ್ಮದ್ ಸಿರಾಜ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಆರ್ ಸಿಬಿ ತಂಡದ ಆಟಗಾರರ ಬಗ್ಗೆ ಹಾಗೂ ತಂಡದೊಳಗಿನ ಆಂತರಿಕ ವಿಚಾರಗಳನ್ನು ಕೇಳಿದ್ದಾರೆ. ಇದು ಯಾವ ನಮೂನೆಯ ಕರೆ ಎನ್ನುವುದನ್ನು ಮನಗಂಡ ಸಿರಾಜ್ ಕೂಡಲೇ ಈ ವಿಚಾರವನ್ನು ಬಿಸಿಸಿಐಯ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡ ಬಿಸಿಸಿಐಯ ಭ್ರಷ್ಟಾಚಾರ ನಿಗ್ರಹ ತಂಡಕ್ಕೆ‘‘ಸಿರಾಜ್ ಬಳಿ ಬಂದಿದ್ದು ಬುಕ್ಕಿಯ ಕರೆಯಲ್ಲ, ಹೈದರಾಬಾದ್ ಮೂಲದ ಚಾಲಕನೊಬ್ಬ ಮ್ಯಾಚ್ ಬೆಟ್ಟಿಂಗ್ ವ್ಯಸನಿಯಾಗಿದ್ದು ಎಂದು ತಿಳಿದು ಬಂದಿದೆ.
ಅಪಾರ ಹಣ ಕಳೆದುಕೊಂಡಿದ್ದ,ಆಂತರಿಕ ಮಾಹಿತಿಗಾಗಿ ಸಿರಾಜ್ ಅವರನ್ನು ಸಂಪರ್ಕಿಸಿದ್ದಾನೆ. ಈ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಈ ಹಿಂದೆ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಾಂಡಿಲಾ ಚೆನ್ನೈ ಫ್ರಾಂಚೈಸಿಯ ಗುರುನಾಥ್ ಮೇಯಪ್ಪನ್ ಜೊತೆಗೆ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಂಧಿಸಿದ ಬಳಿಕ ಬಿಸಿಸಿಐಯ ಭ್ರಷ್ಟಾಚಾರ ನಿಗ್ರಹ ಐಪಿಎಲ್ ಪಂದ್ಯಗಳ ಮೇಲೆ ಹೆಚ್ಚಿನ ನಿಗಾವಹಿಸಿದೆ.
ಬಾಂಗ್ಲಾ ತಂಡದ ಶಕಿಬ್ ಅಲ್ ಹಸನ್ ಬುಕ್ಕಿ ಸಂಪರ್ಕಿಸಿದ್ದ ಮಾಹಿತಿಯನ್ನು ಅಧಿಕಾರಿಗಳಿಗೆ ತಡವಾಗಿ ಹೇಳಿದ್ದಕ್ಕೆ ಅವರನ್ನು 2021 ರಲ್ಲಿ ಅಮಾನತುಗೊಳಿಸಲಾಗಿತ್ತು.