ಬೆಂಗಳೂರು: ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿ ನೆಟ್ಟಿಗರಿಂದ ಟ್ರೋಲ್ ಗೆ ಒಳಗಾಗಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಇಂದು ಅಂಥದ್ದೇ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ರಾಜಭವನ ಚಲೋ ಸಂದರ್ಭದಲ್ಲಿ ನಲಪಾಡ್ ಮಾಧ್ಯಮದ ಜತೆ ಮಾತನಾಡಿ, ಬಿಜೆಪಿ ಸರಕಾರ, ಮೋದಿ, ಅಮಿತ್ ಶಾ ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ತಕ್ಷಣ ಎಚ್ಚೆತ್ತ ಅವರು ಅತ್ಯಾಚಾರ ಎಂದರೆ ರೇಪ್ ಅಲ್ಲ. ಅತ್ಯಾಚಾರ ಎಂದರೆ ದೌರ್ಜನ್ಯ ಎಂದು ವ್ಯಾಖ್ಯಾನಿಸಿದರು.
ಇದನ್ನೂ ಓದಿ:ಜನರೇ ಕಾಂಗ್ರೆಸನ್ನು ‘ಮನೆಗೆ ಚಲೋ’ ಮಾಡಲಿದ್ದಾರೆ: ಸಿಎಂ ಬೊಮ್ಮಾಯಿ
Related Articles
ನಿನ್ನೆ ಪ್ರತಿಭಟನೆ ನಡೆಸಿ ಜೈಲಿಗೆ ಹೋಗುವಾಗ ಫೇಸ್ ಬುಕ್ ಲೈವ್ ನಡೆಸಿದ್ದ ನಲಪಾಡ್, ರಾಹುಲ್ ಗಾಂಧಿ ಮೇಲೆ ಕೇಂದ್ರ ಸರಕಾರ ಅತ್ಯಾಚಾರ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಗೆ ಒಳಗಾಗಿತ್ತು. ಈ ಮನುಷ್ಯನಿಗೆ ಕನ್ನಡ ಕಲಿಸಿ ಎಂದು ನೆಟ್ಟಿಗರು ಕಾಲೆಳೆದಿದ್ದರು.