Advertisement

ಕೂಟದಿಂದ ಹೊರಬಿದ್ದ ಮೊಹಮ್ಮದ್‌ ಶಾಜಾದ್‌

01:18 AM Jun 08, 2019 | Team Udayavani |

ಲಂಡನ್‌: ತೀವ್ರ ಮಂಡಿನೋವಿಗೆ ಸಿಲುಕಿರುವ ಅಫ್ಘಾನಿಸ್ಥಾನದ ದಢೂತಿ ಆರಂಭಕಾರ ಹಾಗೂ ವಿಕೆಟ್ ಕೀಪರ್‌ ಮೊಹಮ್ಮದ್‌ ಶಾಜಾದ್‌ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇವರ ಬದಲು 18ರ ಹರೆಯದ ಇಕ್ರಾಮ್‌ ಅಲಿ ಖೀಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

32ರ ಹರೆಯದ ಮೊಹಮ್ಮದ್‌ ಶಾಜಾದ್‌ ತಂಡದ ಪ್ರಮುಖ ಆಟಗಾರನಾಗಿದ್ದು, ಕಳೆದ ಸೆಪ್ಟಂಬರ್‌ನಲ್ಲಿ ಭಾರತದೆದುರಿನ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು. ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಐರ್ಲೆಂಡ್‌ ವಿರುದ್ಧವೂ ಶತಕ ಸಿಡಿಸಿದ್ದರು.

ಬದಲಿ ಆಟಗಾರ ಇಕ್ರಾಮ್‌ ಅಲಿ ಖೀಲ್ ಈವರೆಗೆ ಕೇವಲ 2 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next