Advertisement

ಈ ಕಾರಣಕ್ಕೆ ಅಫ್ಘಾನಿಸ್ಥಾನ ನಾಯಕತ್ವ ಬಿಟ್ಟ ಮೊಹಮ್ಮದ್‌ ನಬಿ

11:34 PM Nov 04, 2022 | Team Udayavani |

ಅಡಿಲೇಡ್‌: ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ಥಾನದ ಕಳಪೆ ಪ್ರದರ್ಶನದ ಬೆನ್ನಲ್ಲೇ ಮೊಹಮ್ಮದ್‌ ನಬಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದರು.

Advertisement

“ಕಳೆದ ಒಂದು ವರ್ಷದಿಂದ ನಮ್ಮ ತಂಡದ ಸಿದ್ಧತೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ದೊಡ್ಡ ಪಂದ್ಯಾವಳಿಗೂ ಮುನ್ನ ನಾಯಕ ಬಯಸುವ ದೊಡ್ಡ ಮಟ್ಟದ ತಯಾರಿ ಇರಲಿಲ್ಲ. ಇದಕ್ಕೂ ಮಿಗಿಲಾಗಿ ಹೇಳಬೇಕೆಂದರೆ, ಕಳೆದ ಕೆಲವು ಪ್ರವಾಸಗಳ ವೇಳೆ ತಂಡದ ಮ್ಯಾನೇಜರ್‌, ಆಯ್ಕೆ ಸಮಿತಿ ಮತ್ತು ನನ್ನ ಯೋಜನೆ, ನಿರ್ಧಾರವೆಲ್ಲವೂ ಬೇರೆ ಬೇರೆಯಾಗಿದ್ದವು.

ಹೀಗಾಗಿ ತಂಡದ ಸಮತೋಲನ ತಪ್ಪಿತು’ ಎಂಬುದಾಗಿ ಮೊಹಮ್ಮದ್‌ ನಬಿ ನಾಯಕತ್ವ ತ್ಯಜಿಸಲು ಕಾರಣಗಳನ್ನು ತೆರೆದಿರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next