Advertisement
ಮಗನ ಜತೆ ಚೆಸ್ ಆಡುತ್ತಿರುವ ಚಿತ್ರವನ್ನು ಫೇಸ್ ಬುಕ್‌ನಲ್ಲಿ ಪ್ರಕಟಿಸಿದ್ದಕ್ಕೆ ಹಲವರು ವಿಪರೀತವಾಗಿ ಪ್ರತಿಕ್ರಿಯಿಸಿ, ಇದು ಇಸ್ಲಾಂಗೆ ವಿರುದ್ಧ ಎಂದಿದ್ದಾರೆ! ಕೆಲ ತಿಂಗಳುಗಳ ಹಿಂದೆ ಸೂರ್ಯ ನಮಸ್ಕಾರ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾಗಲೂ ಕೈಫ್ ಕೆಂಗಣ್ಣಿಗೆ ಸಿಲುಕಿದ್ದರು.
ಇದಾದ ಬಳಿಕ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಪತ್ನಿ ಜತೆಗಿದ್ದ ಫೋಟೋವೊಂದನ್ನು ಪ್ರಕಟಿಸಿದ್ದರು. ಇದರಲ್ಲಿ ಅವರ ಪತ್ನಿ ಬುರ್ಖಾ ಹಾಕಿಕೊಂಡಿದ್ದರು. ಆದರೆ ಅವರ ಪತ್ನಿ ಕೈಗೆ ನೈಲ್ ಪಾಲಿಶ್ ಹಾಕಿರುವುದು ಮೂಲಭೂತವಾದಿಗಳಿಗೆ ತಪ್ಪಾಗಿ ಕಂಡಿತ್ತು. ನಮ್ಮ ಧರ್ಮದಲ್ಲಿ ನೈಲ್ ಪಾಲಿಶ್ ಹಾಕುವಂತಿಲ್ಲ. ಇದನ್ನು ನಿಮ್ಮ ಪತ್ನಿಗೆ ಸ್ವಲ್ಪ ಹೇಳಿ, ಈ ತರಹ ಮತ್ತೆ ಮಾಡಬಾರದು ಎನ್ನುವುದನ್ನು ನಿಮ್ಮ ಪತ್ನಿಗೆ ತಿಳಿಸಿ ಅಂತೆಲ್ಲ ಕೆಲವರು ಟ್ವೀಟ್ ಮಾಡಿದ್ದರು. ಭಾರತ ಸರ್ವ ಧರ್ಮದ ಬೀಡು. ಇಲ್ಲಿ ಎಲ್ಲರಿಗೂ ಅವರ ಇಷ್ಟದಂತೆ ಬದುಕುವ ಅವಕಾಶ ಇದೆ ಎಂದು
ಇರ್ಫಾನ್ ತಿರುಗೇಟು ನೀಡಿದ್ದರು.
Related Articles
ಭಾರತ ತಂಡದ ವೇಗಿ ಮೊಹಮ್ಮದ್ ಶಮಿಯೂ ಕ್ಷುಲ್ಲಕ ಕಾರಣಕ್ಕಾಗಿ ಕೆಲ ಮೂಲಭೂತವಾದಿಗಳ ಸಿಟ್ಟಿಗೆ ಬಲಿಯಾಗಿದ್ದರು. ಕೆಲ ತಿಂಗಳುಗಳ ಹಿಂದೆ ಮೊಹಮ್ಮದ್ ಶಮಿ ಪತ್ನಿ ಜತೆಗಿದ್ದ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಅಲ್ಲಿ ಪತ್ನಿ ಬುರ್ಖಾ ಹಾಕಿರಲಿಲ್ಲ. ಜೊತೆಗೆ ತೋಳುಗಳು ಬೆತ್ತಲೆಯಾಗಿ ಕಾಣಿಸುತ್ತಿದ್ದವು. ಇದರ ವಿರುದ್ಧ ಭಾರೀ ಟೀಕೆ ಕೇಳಿ ಬಂದಿತ್ತು. ಮುಸ್ಲಿಂ ಸಂಪ್ರದಾಯದಂತೆ ನಿಮ್ಮ ಪತ್ನಿಗೆ ಮುಖಮುಚ್ಚಿಕೊ ಳ್ಳಲು ಸಲಹೆ ನೀಡಿ. ಅವರಿಗೆ ಬಟ್ಟೆ ತಂದುಕೊಡಿ ಎಂದೆಲ್ಲ ಮೂಲಭೂತವಾದಿಗಳು ಟೀಕೆ ಮಾಡಿದ್ದರು. ಇದರ ವಿರುದ್ಧ ಶಮಿ ಆಕ್ರೋಶಗೊಂಡಿದ್ದರು.
Advertisement