Advertisement
ನಿತ್ಯ ಪರದಾಟ ಮೊಗೆಬೆಟ್ಟು ಶ್ರೀ ಚಿಕ್ಕಮ್ಮ ಹಾçಗುಳಿ ದೈವ ಸ್ಥಾನದಿಂದ ಸುಮಾರು ನೂರಕ್ಕೂ ಅಧಿಕ ಜನ ವಸತಿಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ 3 ಕಿ.ಮೀ. ಮಣ್ಣಿನ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಅಯೋಗ್ಯವಾಗಿದೆ. ಪರಿಣಾಮ ನಿತ್ಯ ಸಂಚರಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು, ಗ್ರಾಮೀಣ ಭಾಗದವರು ತೊಂದರೆ ಅನುಭವಿಸುತ್ತಿದ್ದಾರೆ.
ಇದೇ ಪ್ರಮುಖ ಮಾರ್ಗ
ಗ್ರಾಮೀಣ ಭಾಗದ ನೂರಾರು ಮಂದಿ ಈ ಮಾರ್ಗವನ್ನೇ ಅವಲಂಬಿಸು ವುದರಿಂದ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಕೆಸರುಮಯವಾಗುತ್ತಿದೆ. ಕುಂದಾಪುರ, ತೆಕ್ಕಟ್ಟೆ, ಬ್ರಹ್ಮಾವರ ಸೇರಿದಂತೆ ವಿವಿಧ ವಿದ್ಯಾ ಸಂಸ್ಥೆಗಳಿಂದ ಬರುವ ಶಾಲಾ ವಾಹನಗಳ ಚಕ್ರ ಕೆಸರಿನಲ್ಲಿ ಹೂತು ಹೋಗಿ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸಿದ ಪ್ರಸಂಗಗಳೂ ಸಂಭವಿಸಿವೆ. ಇದರಿಂದ ಶಾಲಾ ವಾಹನಗಳು ಈ ಮಾರ್ಗದಲ್ಲಿ ಬರಲು ನಿರಾಕರಿಸುತ್ತಿವೆ.
ಗ್ರಾ.ಪಂ. ಹಳೆಯದಾದ ಮಣ್ಣಿನ ರಸ್ತೆ ಇದಾಗಿದ್ದು. ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಗ್ರಾಮಸ್ಥರ ಹಲವು ವರ್ಷದ ಡಾಮರು ರಸ್ತೆಯ ಬೇಡಿಕೆ ಇದು ವರೆಗೂ ಕೂಡಾ ಸಾಕಾರಗೊಳ್ಳದಿರುವುದು ಬೇಸರದ ಸಂಗತಿ.
– ಬಿ. ಆನಂದ ಶೆಟ್ಟಿ,ನಿವೃತ್ತ ಪೊಲೀಸ್ ಅಧಿಕಾರಿ 1.30 ಲ.ರೂ. ವಿನಿಯೋಗ
ಹಿಂದಿನ ಗ್ರಾ.ಪಂ.ನ ಕ್ರಿಯಾಯೋಜನೆಯಲ್ಲಿ ಈ ರಸ್ತೆ ಒಳ ಚರಂಡಿ ಹಾಗೂ ಹೊಂಡ ಗುಂಡಿ ಮುಚ್ಚಿ ಸಮತಟ್ಟು ಮಾಡುವ ನಿರ್ವಹಣೆಗಾಗಿ ಸುಮಾರು 1.30 ಲಕ್ಷ ರೂ. ವಿನಿಯೋಗಿಸಿದ್ದೇವೆ .
– ಬಿ.ಕರುಣಾಕರ ಶೆಟ್ಟಿ , ಅಧ್ಯಕ್ಷರು, ಗ್ರಾ.ಪಂ. ಬೇಳೂರು