Advertisement

ಕೆಸರುಮಯವಾದ ಮೊಗೆಬೆಟ್ಟು ರಸ್ತೆ: ಅಪಾಯದ ನಡುವೆ ವಿದ್ಯಾರ್ಥಿಗಳ ಯಾನ

08:50 AM Jul 25, 2017 | Team Udayavani |

ತೆಕ್ಕಟ್ಟೆ (ಮೊಗೆಬೆಟ್ಟು ): ಇಲ್ಲಿನ ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊಗೆಬೆಟ್ಟಿನಿಂದ ಕೆಳಬೆಟ್ಟಿಗೆ ಸಂಪರ್ಕ ಕಲ್ಪಿಸುವ ಸುಮಾರು ಒಂದೂವರೆ ಕಿಲೋ ಮೀಟರ್‌ ಮಣ್ಣು ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಪರಿವರ್ತನೆಗೊಂಡಿದ್ದು ನಿತ್ಯ ಸ್ಥಳೀಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಅಪಾಯದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಈ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ದಿವ್ಯ ನಿರ್ಲಕ್ಷé
ಬೇಳೂರು ಗ್ರಾ. ಪಂ. ವ್ಯಾಪ್ತಿಯ ಹಲವು ರಸ್ತೆಗಳು ಡಾಮರೀಕರಣಗೊಂಡಿದ್ದರೂ ಕೂಡಾ ಜನ ವಸತಿ ಪ್ರದೇಶವಿರುವ ಈ ಭಾಗದಲ್ಲಿ ಮಾತ್ರ ಕಳೆದ ಹಲವು ದಶಕಗಳಿಂದಲೂ ಯಾವುದೇ ಅಭಿವೃದ್ಧಿ ಕಾಣದೆ ಸೊರಗುತ್ತಿದ್ದು ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಹಾಗೂ ಪಾದಾಚಾರಿಗಳು ಆತಂಕದ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ಇದೆ . ಶತಮಾನದ ಈ ರಸ್ತೆಯ ಅಭಿವೃದ್ಧಿಯ ಬಗ್ಗೆ  ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ರೀತಿಯ ಪ್ರಯೋಜನವಾಗದಿರುವುದು ವಾಸ್ತವದ ಸಂಗತಿ.

ಗಿಡನೆಟ್ಟು ಪ್ರತಿಭಟನೆ
ರಸ್ತೆಯ ಮಧ್ಯದಲ್ಲಿ ಸೃಷ್ಟಿಯಾದ ಅಪಾಯಕಾರಿ ಹೊಂಡದಲ್ಲಿ ಸ್ಥಳೀಯರು ಬಾಳೆಗಿಡ ಇನ್ನಿತರ ಕಾಟು ಗಿಡಗಂಟಿಗಳನ್ನು ನೆಡುವ ಮೂಲಕ ಸ್ಥಳೀಯಾಡಳಿತದ ವಿರುದ್ಧ  ತೀವ್ರವಾಗಿ ಪ್ರತಿಭಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next