Advertisement
ಮಂಡಳಿಯ ಅಧ್ಯಕ್ಷ ಕೃಷ್ಣ ಕುಮಾರ್ ಎಲ್. ಬಂಗೇರ ಅವರು ಉಪಸ್ಥಿತರಿದ್ದು ಮಾತನಾಡಿ, 1902ರಲ್ಲಿ ಸ್ಥಾಪನೆಗೊಂಡ ಮಂಡಳಿಯು ಅನೇಕ ಕಷ್ಟ-ನಷ್ಟ ಹಾಗೂ ಹಲವಾರು ಸಮಸ್ಯೆಗಳನ್ನು ಎದುರಿಸಿ ಮುಂಬಯಿಯಲ್ಲಿ ಐತಿಹಾಸಿಕ, ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಸಹಿಸಿ, ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿ ಗುರಿ ಸಾಧನೆಯನ್ನು ಬುನಾದಿಯ ಮೇಲೆ ಯಶಸ್ವಿಯಾಗಿ ಇದೀಗ ನೆಲೆ, ಬಲ, ಬೆಲೆಯನ್ನು ತನ್ನದಾಗಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಕರ್ನಾಟಕ ಸರಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದ ಮಂಡಳಿಯು ಅನೇಕ ಸಾಧನೆಗಳನ್ನು ಮಾಡುತ್ತಾ ಬಂದಿದೆ. 1908 ರಲ್ಲಿ ರಾತ್ರಿಶಾಲೆಯನ್ನು ತೆರೆದು ಬ್ರಿಟಿಷ್ ಸರಕಾರದಿಂದ ಮಾನ್ಯತೆಯನ್ನು ಪಡೆದ ಈ ಶಾಲೆಯು ಸಾವಿರಾರು ಮಂದಿಗೆ ಶಿಕ್ಷಣದ ಅವಕಾಶವನ್ನು ನೀಡಿ, ಜಾತಿ, ಮತ, ಭೇದವಿಲ್ಲದೆ ಸಹಕರಿಸಿದೆ. 1939 ರಲ್ಲಿ ಕನ್ನಡ ಮಾಸಿಕ ಪತ್ರಿಕೆ ಮೊಗವೀರದ ಮೂಲಕ ಸಾಹಿತ್ಯ ಸೇವೆ, ಸಾಮಾಜಿಕ, ಭದ್ರತೆ, ಶೈಕ್ಷಣಿಕ ಪ್ರಚಾರ, ಔದ್ಯೋಗಿಕ ಮಾರ್ಗದರ್ಶನ ಇನ್ನಿತರ ಆದರ್ಶದ ಪ್ರತೀಕವಾಗಿ ಮಂಡಳಿಯು ಬೆಳೆಯಲು ಪ್ರಾರಂಭಿಸಿತು. ಮಂಡಳಿಯು ಸಮಾಜದ ಯುವಕರನ್ನು ಸದೃಢಗೊಳಿಸುವುದಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅಂಧೇರಿಯ ಶಿಕ್ಷಣ ಸಂಕುಲದಲ್ಲಿ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ಉತ್ಛ ಶಿಕ್ಷಣದ ವಿಭಾಗಗಳು ಪ್ರಾರಂಭಗೊಂಡಿವೆ. ಮಂಡಳಿಯ ಸಂಚಾಲಿತ ಶಾಲೆಗಳಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಶೇ. 30 ರಿಯಾಯಿತಿಯನ್ನು ನೀಡಲಾಗುತ್ತಿದೆ. ಮಂಡಳಿಯ ಸಮಾಜ ಕಲ್ಯಾಣ ಯೋಜನೆಯ ಮುಖಾಂತರ ವರ್ಷಕ್ಕೆ 25 ಲಕ್ಷ ರೂ. ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಹಂಚಲಾಗುತ್ತಿದೆ. ಮಂಡಳಿಯ ಪ್ರತಿಯೊಂದು ಯೋಜನೆಗಳಿಗೆ ಮೊಗವೀರ ಗ್ರಾಮ ಸಭೆಗಳು ಮತ್ತು ಮೊಗವೀರ ಮೂಲಸ್ಥಾನ ಸಭೆಯವರು ಸಹಕರಿಸುತ್ತಿದ್ದು, ಸಂತೋಷದ ಸಂಗತಿಯಾಗಿದೆ. ಭವಿಷ್ಯದ ಯೋಜನೆಗಳಿಗೂ ಅವರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ. ಮಂಡಳಿಯ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರ ಸಹಕಾರ ಸದಾಯಿರಲಿ. ನಿಮ್ಮೆಲ್ಲರ ಶ್ರಮ, ಕಾರ್ಯದಕ್ಷತೆಯಿದ್ದಾಗ ಮಾತ್ರ ಮಂಡಳಿಯ ಸಂಸ್ಥಾಪಕರ ಕನಸು ನನಸಾಗಲು ಸಾಧ್ಯವಿದೆ. ಮಂಡಳಿಗೆ ಸಹಕರಿಸುತ್ತಿರುವ ದಾನಿಗಳಿಗೆ, ಸಮಾಜ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.
Advertisement
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: 117ನೇ ವರ್ಷಾಚರಣೆ
04:59 PM Aug 14, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.