Advertisement
ಮುಂಬಯಿಯಲ್ಲಿ ಭವ್ಯ ಭವನ ನಿರ್ಮಾಣದ ಕನಸನ್ನು ಹೊಂದಲಾಗಿದೆ. ನಾವೆಲ್ಲರು ಒಗ್ಗಟ್ಟಾಗಿ, ಒಮ್ಮತದಿಂದ ಈ ಬೃಹತ್ ಯೋಜನೆಗಳಿಗೆ ಕೈಜೋಡಿಸಿದಾಗ ಕನಸು ನನಸಾಗಲು ಸಾಧ್ಯವಿದೆ. ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾ ಅಗತ್ಯವಾಗಿದೆ. ಸಮಾಜ ಸೇವೆಯೇ ಸಂಘದ ಮುಖ್ಯ ಧ್ಯೇಯವಾಗಿದೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷ ನಾರಾಯಣ ಎಚ್. ಬಗ್ವಾಡಿ ಅವರು ನುಡಿದರು.ಅ.21ರಂದು ಫೋರ್ಟ್ ಪರಿಸರದ ಕಾಂಜಿಕೇತ್ಸಿ ಸಭಾಗೃಹದಲ್ಲಿ ನಡೆದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ 77ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶೈಕ್ಷಣಿಕ ನೆರವು ವಿತರಣೆಯನ್ನು ಪ್ರತೀ ವರ್ಷ ಸಂಘವು ಮಾಡುತ್ತಿದೆ. ಇದರ ಸದುಪಯೋಗವನ್ನು ಸಮಾಜದ ಅರ್ಹ ಮಕ್ಕಳು ಪಡೆದುಕೊಂಡು ಭವಿಷ್ಯದಲ್ಲಿ ಸಂಘದ ಮುಖಾಂತರ ಇನ್ನಿತರ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದರು.
Related Articles
Advertisement
ಸಭಿಕರ ಪರವಾಗಿ ನಾರಾಯಣ ಚಂದನ್, ಭಾಸ್ಕರ್ ಕಾಂಚನ್, ರಘುರಾಮ್ ಚಂದನ್, ಗೋಪಾಲ್ ಚಂದನ್, ಸುಚಿತ್ರಾ ಪುತ್ರನ್, ಸುರೇಶ್ ತೋಳಾರ್, ಭಾಸ್ಕರ್ ಶ್ರೀಯಾನ್, ಬಾಲಕೃಷ್ಣ ತೋಳಾರ್ ಅವರು ಮಾತನಾಡಿ ಸಲಹೆ-ಸೂಚನೆಗಳನ್ನು ನೀಡಿದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ರಾಜು ಶ್ರೀಯಾನ್ ನಾವುಂದ ಗತ ಸಭೆಯ ಟಿಪ್ಪಣಿ ಮತ್ತು ಮಹಾಸಭೆಯ ವರದಿ ವಾಚಿಸಿ ಸರ್ವಾನುಮತದಿಂದ ಅಂಗೀಕರಿಸಿಕೊಂಡರು.
ವರದಿ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಕೋಶಾಧಿಕಾರಿ ಸಂಜೀವ ಕುಂದರ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಅಂಗೀಕರಿಸಿಕೊಂಡರು. ಯಶವಂತ್ ಕರ್ಕೇರ ಚಾರ್ಟರ್ಡ್ ಅಕೌಂಟೆಂಟ್ ಅವರನ್ನು ಲೆಕ್ಕ ಪರಿಶೋಧಕರಾಗಿ ನೇಮಿಸಲಾಯಿತು. ಸದಸ್ಯರು ಮಾತನಾಡಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಅಭಿನಂದಿಸಿ ಸಲಹೆ-ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ಸಂಸ್ಥೆಯ ನೂತನ ಅಧ್ಯಕ್ಷರನ್ನಾಗಿ ರಮೇಶ್ ಎಂ. ಬಂಗೇರ ಅವರನ್ನು ಅವಿರೋಧವಾಗಿ ನೇಮಿಸಲಾಯಿತು. 2018-2020 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಗೆ 25 ಸದಸ್ಯರನ್ನು ಸರ್ವಾನುಮತದಿಂದ ನೇಮಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ವೇದಿಕೆಯಲ್ಲಿ ಎನ್. ಎಚ್. ಬಗ್ವಾಡಿ, ಕಾರ್ಯದರ್ಶಿ ನಾವುಂದ ರಾಜು ಶ್ರೀಯಾನ್, ಕೋಶಾಧಿಕಾರಿ ಸಂಜೀವ ಕುಂದರ್, ಜತೆ ಕೋಶಾಧಿಕಾರಿ ಸತೀಶ್ ಶ್ರೀಯಾನ್, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಕಾಂಚನ್, ಮಹಾಬಲ ಕುಂದರ್, ಗೋಪಾಲ್ ಪುತ್ರನ್, ಉಪಾಧ್ಯಕ್ಷರುಗಳಾದ ರಮೇಶ್ ಬಂಗೇರ, ರಾಜೇಂದ್ರ ಚಂದನ್, ಉದ್ಯಮಿ ರತ್ನಾಕರ ಚಂದನ್, ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ರಘುರಾಮ ಚಂದನ್, ನಾರಾಯಣ ಚಂದನ್, ಗೋಪಾಲ್ ಚಂದನ್, ಭಾಸ್ಕರ್ ಕಾಂಚನ್, ಸುಚಿತ್ರಾ ಪುತ್ರನ್, ಮಂಜುನಾಥ ನಾಯ್ಕ, ಅರವಿಂದ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು. ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಹುದ್ಧೆಗಳನ್ನು ಅಲಂಕರಿಸಿದ ಹಲವಾರು ಮಂದಿ ನಮ್ಮ ಸಂಸ್ಥೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಹಣ ಎಷ್ಟೇ ಸಂಪಾದಿಸಿದರೂ ಒಂದು ದಿನ ಅದು ಖರ್ಚಾಗಿ ಹೋಗುವುದು ಸಹಜ. ಆದರೆ ಶಿಕ್ಷಣವನ್ನು ಯಾರಿಂದಲೂ ಕದಿಯಲು ಅಥವಾ ಖರ್ಚು ಮಾಡಲು ಸಾಧ್ಯವಿಲ್ಲ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ ಭವಿಷ್ಯದಲ್ಲಿ ನಮ್ಮ ಸಂಘಟನೆ ಬಲಿಷ್ಠವಾಗುವುದರಲ್ಲಿ ಸಂಶಯವಿಲ್ಲ. ನಾನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇನೆ. ಸಂಘದ ಸಮಾಜಪರ ಕಾರ್ಯಗಳಲ್ಲಿ ಮಕ್ಕಳನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿ ಅವರಲ್ಲಿ ನಾಯಕತ್ವದ ಗುಣವನ್ನು ಬೆಳೆಸಬೇಕು.
– ರಮೇಶ್ ಎಂ. ಬಂಗೇರ,
ಅಧ್ಯಕ್ಷರು : ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ನಾವೆಲ್ಲರೂ ನಮ್ಮ ಕುಟುಂಬದ ಏಳ್ಗೆಯೊಂದಿಗೆ ಜನಪರ ಸೇವೆಗೂ ಮುಂದಾಗಬೇಕು. ಯುವ ಪೀಳಿಗೆಯಲ್ಲಿ ಸಂಘವು ಮಾಡುತ್ತಿರುವ ಕೆಲಸದ ಬಗ್ಗೆ ಮನವರಿಕೆ ಮಾಡಬೇಕು. ಜನಪರ ಕಾರ್ಯಗಳಿಂದ ನಮ್ಮ ಬದುಕು ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಮೊಗವೀರ ಸಮಾಜದ ಜನಸಾಮಾನ್ಯರಿಗೆ ಸಹಕಾರ ನೀಡುವ ಮೂಲಕ ಸಂಘವು ಸದಾ ಕ್ರಿಯಾಶೀಲವಾಗಿದ್ದು. ಹಿರಿಯರು ಕಟ್ಟಿದ ಈ ಸಂಸ್ಥೆಯನ್ನು ಕಿರಿಯರು ಜವಾಬ್ದಾರಿಯಿಂದ ಮುನ್ನಡೆಸಿಕೊಂಡು ಹೋಗಬೇಕು. ಕುಂದಾಪುರದಲ್ಲಿ ಈಗಾಗಲೇ ಅತ್ಯುತ್ತಮ ಸಭಾಗೃಹ ವೊಂದು ನಿರ್ಮಾಣಗೊಳ್ಳು ತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅದೇ ರೀತಿಯಲ್ಲಿ ಮುಂಬಯಿಯಲ್ಲೂ ಭವನವೊಂದು ನಿರ್ಮಾಣಗೊಳ್ಳಬೇಕು. ಸಮಾಜ ಬಾಂಧವರು ಉತ್ತಮ ರೀತಿ ಯಲ್ಲಿ ಸಹಕಾರ ನೀಡುವ ಅಗತ್ಯತೆಯಿದೆ
– ಸುರೇಶ್ ಕಾಂಚನ್,
ಮಾಜಿ ಅಧ್ಯಕ್ಷರು : ಮೊಗವೀರ ಮಹಾ ಜನ ಸೇವಾ ಸಂಘ ಬಗ್ವಾಡಿ ಹೋಬಳಿ