Advertisement
ಬಹಳ ವಿಶೇಷವಾಗಿ ಭಯೋತ್ಪಾದನೆ ಸಂಬಂಧದ ಭಾರತದ ಹಳೆಯ ಹೋರಾಟಕ್ಕೆ ಬಲ ಬಂದಿದ್ದು ಈ ಸಂದರ್ಭದಲ್ಲೇ. ತಮ್ಮ ಅವಧಿಯಲ್ಲಿ 57 ದೇಶಗಳಿಗೆ 97 ಪ್ರವಾಸಗಳನ್ನು ಕೈಗೊಂಡಿದ್ದಾರೆ. ಎಲ್ಲವೂ ಭಾರತಕ್ಕೆ ಬಲ ತಂದಿದೆ ಎನ್ನಬಹುದು. ಆ ಸಂದರ್ಭದಲ್ಲಿ ಒಬ್ಬ ಚಾಯ್‌ವಾಲಾ ಇಷ್ಟೊಂದು ವಿದೇಶಗಳಿಗೆ ಹೋಗಿ ಏನು ಮಾಡುತ್ತಾನೆ ಎಂಬ ಕುತೂಹಲ ಇದ್ದೇ ಇತ್ತು. ಆದರೆ ಪರಿಣಾಮ ನಮ್ಮ ಕಣ್ಣ ಮುಂದಿದೆ.
Related Articles
Advertisement
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದ ಗೋಧಾÅ ಗಲಭೆ ಸಂಬಂಧದ ಆರೋಪದಲ್ಲಿ ಅಮೆರಿಕ ಮೋದಿಗೆ ವೀಸಾ ನೀಡಿರಲಿಲ್ಲ. ಆದರೆ ಪ್ರಧಾನಿಯಾದ ಮೇಲೆ 2014ರಲ್ಲಿ ಅಮೆರಿಕ ಪ್ರವಾಸ ಮಾಡಿ, ಆಗಿನ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿಯಾದರು. ಹೀಗೆ ಸಂಬಂಧದ ಕೊಂಡಿ ಮುಂದುವರಿಯಿತು. ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವ ಪ್ರಯತ್ನ ಕೈಗೂಡಲು ಮೋದಿ ಬ್ರ್ಯಾಂಡ್‌ನ ಸಹಾಯವೂ ಇದೆ.
ಹೋದಲ್ಲೆಲ್ಲ ಜನಮೋದಿಯವರು ವಿದೇಶ ಪ್ರವಾಸ ಸಂದರ್ಭ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಮೂಲಕ ಭಾರತೀಯ ಅಸ್ಮಿತೆಯನ್ನು ಬಡಿದೆಬ್ಬಿಸಿದರು. ಹಾಗಾಗಿ ವಿದೇಶದಲ್ಲೂ ಭಾರತ ಪ್ರಜ್ವಲಿಸಲು ಕಾರಣವಾಯಿತು. ಸ್ವಿಟ್ಸರ್ಲಂಡ್‌ನಲ್ಲಿ ಬಾಲಿವುಡ್ ಮನನ
ಸ್ವಿಟ್ಸರ್ಲಂಡ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ನಗರಗಳ ವಿಹಂಗಮ ನೋಟಕ್ಕೆ ಮನಸೋತಿದ್ದರು. ಈ ವೇಳೆ ಅಲ್ಲಿ ಮಾತನಾಡುತ್ತಾ ಬಾಲಿವುಡ್ ಚಿತ್ರತಂಡದವನ್ನು ಉಲ್ಲೇಖೀಸುತ್ತಾರೆ. ಅಲ್ಲಿನ ಟೆನ್ನಿಸ್ ತಾರೆ ಮಾರ್ಟಿನಾ ಹಿಂಗೀಸ್ ಉಲ್ಲೇಖೀಸಿ, ಅವರು ಭಾರತದ ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್ ಪೇಸ್ ಜತೆ ಜೋಡಿಯಾಗಿ ಆಡಿದ ನೆನಪನ್ನು ಬಿಚ್ಚಿಟ್ಟರು. ಅಮೆರಿಕದಲ್ಲಿ ಗಾಂಧಿ ನೆನೆಪು
ಮಹಾತ್ಮಾ ಗಾಂಧೀಜಿಯವರ ಕುರಿತು ವಿಶ್ವದ ಎಲ್ಲ ರಾಷ್ಟ್ರಗಳಿಗೆ ಅತೀವ ಗೌರವವಿದೆ. ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಗಾಂಧಿ ಚಿಂತನೆಯಿಂದ ಪ್ರೇರೇಪಿತವಾದ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಸ್ಮರಿಸುತ್ತಾರೆ. ವಿಶೇಷ ಎಂದರೆ ಅಮೆರಿಕ ಗಾಂಧಿಯಾಗಿ ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಕರೆಯುತ್ತಾರೆ. ಇಲ್ಲಿ ಅವರು ಸ್ವಾಮಿ ವಿವೇಕಾನಂದರನ್ನು ನೆನಪಿಸಿಕೊಳ್ಳುತ್ತಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ಕುರಿತು ಮಾತನಾಡಿದ ಪ್ರಧಾನಿ, ಡಾ| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರೂಪಿಸಲು ನೆರವಾಗಿದೆ ಎಂದು ಸ್ಮರಿಸುತ್ತಾರೆ. ಸಂಬಂಧದ ಎಳೆ ಬಿಚ್ಚಿಡುವ ಮೋದಿ
ಮೋದಿ ಯಾವುದೇ ರಾಷ್ಟ್ರಕ್ಕೆ ಹೋಗಲಿ, ಭಾರತದೊಂದಿಗೆ ಆ ದೇಶದ ಸಂಬಂಧವೇನು ಎಂಬುದನ್ನು ಒತ್ತಿ ಹೇಳಲು ಬಯಸುತ್ತಾರೆ. ಈ ಹಿಂದೆ ಅಪಾ^ನಿಸ್ಥಾನಕ್ಕೆ ಹೋದಾಗಲೂ ಹೀಗೆಯೇ, ಕುರಾನ್‌ನ ವಾಕ್ಯವೊಂದನ್ನು ಉಲ್ಲೇಖೀಸಿ “ನದಿಗಳೆಂದರೆ ಸ್ವರ್ಗ’ ಎಂದು ಹೇಳಿದೆ. ಹಾಗೆಯೇ ಹಿಂದೂಗಳಲ್ಲಿ ಜೀವನದಿ ಎಂಬ ಕಲ್ಪನೆ ಇದೆ ಎಂದು ಹೇಳಿ ಹತ್ತಿರ ತರುವ ಕೆಲಸ ಮಾಡುತ್ತಾರೆ. ಇದು ಒಂದು ರೀತಿಯ ಬಾಂಧವ್ಯ, ಆಪ್ಯಾಯಮಾನತೆ ವೃದ್ಧಿಗೆ ಕಾರಣವಾಯಿತು. ಈ ಭೇಟಿಯಲ್ಲಿ ಅವರು ಹರಿಯುವ ನದಿ ವಿರುದ್ಧ ಮಾತು ಮುಂದುವರಿಸುತ್ತ, ಈ ನದಿ ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ಸೂಫಿ ಪಂಥದ ಉಗಮಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಅಷ್ಟೇ ಅಲ್ಲದೆ ಆಗತಾನೆ ಜೀವ ಪಡೆದುಕೊಂಡಿದ್ದ ಅಪಾ^ನ್ ಕ್ರಿಕೆಟ್ ತಂಡಕ್ಕೆ ಶುಭಾಶಯ ಕೋರಲು ಮೋದಿ ಮರೆಯಲಿಲ್ಲ.